Categories
ಬೆಂಗಳೂರು

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶಕ್ಕೆ ಕೌಂಟ್ ಡೌನ್!

  • ಮಧ್ಯಾಹ್ನ 3:30ಕ್ಕೆ ಫಲಿತಾಂಶ: ಸಚಿವರ ಘೋಷಣೆ
  • ಫಲಿತಾಂಶ ನೋಡೋದೆಲ್ಲಿ.. ಇಲ್ಲಿದೆ ಡೀಟೇಲ್ಸ್
  • ವಿದ್ಯಾರ್ಥಿಗಳೇ ನಿಮಗೆ ಬೆಸ್ಟ್ ಆಫ್ ಲಕ್..!

NAMMUR EXPRESS
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್‌ ವೈರಸ್‌ ಸೋಂಕಿನ ನಡುವಲ್ಲೇ ನಡೆದಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಅಗಸ್ಟ್‌ 9 ( ಇಂದು) ಪ್ರಕಟವಾಗಲಿದೆ. ಮಧ್ಯಾಹ್ನ 3.30ಕ್ಕೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ. ಈ ಮೂಲಕ ಪಿಯುಸಿ ಬಳಿಕ ಈ ಫಲಿತಾಂಶ ಪ್ರಕಟ ಆಗಲಿದೆ.
ರಾಜ್ಯದಲ್ಲಿ ಜುಲೈ 19ಮತ್ತು 22 ರಂದುಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆದಿತ್ತು. ಕೊರೊನಾ ಹಿನ್ನೆಲೆಯಲ್ಲಿ ಪರೀಕ್ಷೆಯ ದಿನವನ್ನು ಕಡಿತ ಮಾಡಲಾಗಿತ್ತು. ಆದ್ರೂ ರಾಜ್ಯದಲ್ಲಿ ಬರೋಬ್ಬರಿ ಶೇ.96 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.


ಫಲಿತಾಂಶ ಎಲ್ಲಿ ನೋಡಬಹುದು..?!: ವಿದ್ಯಾರ್ಥಿಗಳು ಫಲಿತಾಂಶವನ್ನು ಪ್ರೌಢಶಾಲಾ ಪರೀಕ್ಷಾ ಮಂಡಳಿಯ ಅಧಿಕೃತ ವೆಬ್‌ಸೈಟ್‌ sslc.karnataka.gov.in or kseeb.kar.nic.in or karresults.nic.in ಮೂಲಕ ಪಡೆಯಬಹುದಾಗಿದೆ. ವಿದ್ಯಾರ್ಥಿಗಳು ರೋಲ್‌ ನಂಬರ್‌ ಬಳಸಿ ಫಲಿತಾಂಶವನ್ನುವೀಕ್ಷಿಸಬಹುದಾಗಿದ್ದು, ತಾತ್ಕಾಲಿಕ ಅಂಕ ಪಟ್ಟಿ ಕೂಡ ಆನ್‌ಲೈನ್‌ನಲ್ಲಿಯೇ ಡೌನ್‌ ಲೋಡ್‌ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ ವಿದ್ಯಾರ್ಥಿಗಳಿಗೆ ಈ ಬಾರಿಯ ಫಲಿತಾಂಶದ ಕುರಿತು ಯಾವುದೇ ಅಸಮಾಧಾನಗಳಿದ್ದರೂ ಕೂಡ ವಿದ್ಯಾರ್ಥಿಗಳು ಮರು ಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ಮರು ಪರೀಕ್ಷೆಗೆ ಕೂಡ ಹಾಜರಾಗಬಹುದಾಗಿದೆ ಎಂದು ಇಲಾಖೆ ತಿಳಿಸಿದೆ.


ಕರೋನಾ ನಡುವೆ ಪರೀಕ್ಷೆ ಸುಸೂತ್ರ!: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಒಟ್ಟು 8,76,581 ವಿದ್ಯಾರ್ಥಿಗಳ ನೋಂದಣಿ ಮಾಡಿಕೊಂಡಿದ್ದು, ಶೇ.99.62 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ನಿಂದ 67 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. 152 ಜನ ಐಸೋಲೇಷನ್ ಕೊಠಡಿಯಲ್ಲಿ ಬರೆದಿದ್ದಾರೆ. 10,693 ಜನ ಪರೀಕ್ಷಾ ಕೇಂದ್ರ ಬದಲಸಿ ಪರೀಕ್ಷೆ ಬರೆದಿದ್ದಾರೆ. 2,870 ಜನ ವಿದ್ಯಾರ್ಥಿಗಳು ಹಾಸ್ಟೆಲ್ ನಿಂದಲೇ ಪರೀಕ್ಷೆ ಬರೆದಿದ್ದರು.


ರಾಜ್ಯದ, ಮಲೆನಾಡಿನ ಎಲ್ಲಾ ಸುದ್ದಿಗಳಿಗೆ NAMMUR EXPRESS ” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ , ಸಬ್ಸೈಬ್ ಆಗಿ , ವಾಟ್ಸಾಪ್ನಲ್ಲಿ ಎಲ್ಲಾ ನಿಮ್ಮ ಊರಿನ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು , ಊರು , ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು..!.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.