ರಾಜಕೀಯ ಶಕ್ತಿ ತುಂಬಲು “ಹೊಸ ಪ್ಲಾನ್”ಬೆಳಗಾವಿಯಿಂದ ಸತೀಶ್ ಜಾರಕಿಹೊಳಿ!? ಬೆಂಗಳೂರು: ರಾಜ್ಯದ ಮೂರು ವಿಧಾನ ಸಭಾ ಉಪ ಚುನಾವಣೆಗೆ ಈಗಾಗಲೇ ವೇದಿಕೆ ಸಿದ್ದಗೊಂಡಿದೆ.ಮೂರು ಪಕ್ಷಗಳಲ್ಲಿ ರಾಜಕೀಯ ಗರಿಗೆದರಿದೆ. ಈ ನಡುವೆಕಾಂಗ್ರೆಸ್ ಇದೇ ಮೊದಲ ಬಾರಿಗೆ ಎಲ್ಲಾ ಪಕ್ಷಗಳಿಗಿಂತ ಮೊದಲೇ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದ್ದಾರೆ.ಏಪ್ರಿಲ್ 17ರಂದು ಮತದಾನ ನಡೆಯಲಿದ್ದು, ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆಸಿಂದಗಿ, ಬಸವಕಲ್ಯಾಣ, ಮಸ್ಕಿ, ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಬೆಳಗಾವಿ ಲೋಕಸಭಾ ಉಪಚುನಾವಣೆ ಅಭ್ಯರ್ಥಿ ಆಯ್ಕೆಯನ್ನು ಮಾತ್ರ ಪ್ರಕಟಗೊಳಿಸಿಲ್ಲ. ಬಸವಕಲ್ಯಾಣದಿಂದ ಮಾಜಿ ಶಾಸಕ ನಾರಾಯಣ ರಾವ್ ಹೆಂಡತಿ ಮಲ್ಲಮ್ಮ, ಸಿಂದಗಿ ಕ್ಷೇತ್ರದಿಂದ ಇತ್ತೀಚೆಗಷ್ಟೇ ಜೆಡಿಎಸ್ ತೊರೆದು ಪಕ್ಷ ಸೇರ್ಪಡಗೊಂಡ ಅಶೋಕ್ ಮನಗೂಳಿ, ಮಸ್ಕಿಯಿಂದ ಬಸವನಗೌಡ ತುರವಿಹಾಳ್ ಅವರಿಗೆ ಟಿಕಟ್ ಘೋಷಣೆ ಮಾಡಲಾಗಿದೆ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದ ಕೋರ್ ಕಮಿಟಿಯು ಅಭ್ಯರ್ಥಿಗಳ ಬಗ್ಗೆ ತೀರ್ಮಾನಿಸಿದ ಬಳಿಕ ಈ ಹೆಸರನ್ನು ಹೈ ಕಮಾಂಡ್ಗೆ ಕಳುಹಿಸಲಾಗುವುದು. ಬಳಿಕ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಿದೆ…
Author: Nammur Express Admin
ಹೊಸ ನಿರೀಕ್ಷೆ ಮೂಡಿಸಿದ ಮಲೆನಾಡು ಮೂಲದ ನಟಿಇಂಜಿನಿಯರ್ ಈಗ ನಟಿ..! ಬೆಂಗಳೂರು: ಮಲೆನಾಡು ಪ್ರತಿಭೆಗಳ ಅಗರ. ಸಾಹಿತ್ಯ, ಸಂಗೀತ, ಸಿನಿಮಾ, ರಂಗಭೂಮಿ ಹೀಗೆ ಎಲ್ಲಾ ಕ್ಷೇತ್ರದಲ್ಲಿ ಮಲೆನಾಡು ಮೂಲದವರ ಕಾಣಿಕೆ ಅಪಾರ.ಇದೀಗ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಮೂಲದ ಇಂಜಿನಿಯರಿಂಗ್ ಪದವಿಧರೆ ಆಶಿಕಾ ಸೋಮಶೇಖರ್ “ಮುಂದುವರಿದ ಅಧ್ಯಾಯ” ಸಿನಿಮಾದಲ್ಲಿ ನಟಿಯಾಗಿ ಬಣ್ಣ ಹಚ್ಚುವ ಮೂಲಕ ಚಂದನವನದಲ್ಲಿ ಗಮನ ಸೆಳೆದಿ ದ್ದಾರೆ. ಸಾಹಿತ್ಯ, ರಂಗಭೂಮಿ, ಶಾರ್ಟ್ ಮೂವಿ ಕ್ಷೇತ್ರದ ಬಳಿಕ ಆಶಿಕಾ ಸ್ಯಾಂಡಲ್ವುಡ್ನಲ್ಲಿ ಹೊಸ ಭರವಸೆ ಮೂಡಿಸಲಿದ್ದಾರೆ. ಆಶಿಕಾ ಸೋಮಶೇಖರ್ ಮೂಲತಃ ಕೃಷಿ ಕುಟುಂಬದವರಾಗಿದ್ದು, ತೀರ್ಥಹಳ್ಳಿ ತಾಲ್ಲೂಕಿನ ಮೇಗರವಳ್ಳಿ ಗ್ರಾಮದ ಅನಿತಾ ಹಾಗೂ ಸೋಮಶೇಖರ ದಂಪತಿಗಳ ಪುತ್ರಿ. ಬೆಂಗಳೂರಿನಲ್ಲಿ ಉದ್ಯಮ ನಡೆಸುತ್ತಿರುವ ಸೋಮಶೇಖರ್ ಮಗಳ ಸಾಧನೆಗೆ ಸಾಥ್ ನೀಡುತ್ತಿದ್ದಾರೆ. ತುಂಬಾ ದಿನಗಳಿಂದ ಒಳ್ಳೆಯ ಕಥೆಯ ಹುಡುಕಾಟದಲ್ಲಿದ್ದ ನಟಿ ಆಶಿಕಾ ಸೋಮಶೇಖರ್ ಅವರ ಸಿನಿ ಜರ್ನಿ ಭಾರಿ ಕುತೂಹಲ ಮೂಡಿಸಿದೆ. ಚಿಕ್ಕ ವಯಸ್ಸಿನಲ್ಲೇ ರಂಗಭೂಮಿ,ಸಿನಿಮಾ ರಂಗದ ಪ್ರಿಯರಾಗಿದ್ದು, ಈ ಮೊದಲು ರಂಗಭೂಮಿಯಲ್ಲಿ ಕಲಾವಿದೆಯಾಗಿ ತಮ್ಮದೇ ಛಾಪು…
5ನೇ ವರ್ಷದತ್ತ “ನಮ್ಮೂರ್ ಎಕ್ಸ್ಪ್ರೆಸ್”! ಕಲ್ಲು ಮುಳ್ಳಿನ ಹಾದಿಯಲ್ಲಿ ಸಾರ್ಥಕ ಸೇವೆಮಾಧ್ಯಮ ಕ್ಷೇತ್ರದಲ್ಲಿ ಹೊಸ ಇತಿಹಾಸ! ರಾಜ್ಯದ ಮುಂಚೂಣಿ ಡಿಜಿಟಲ್ ಮಾಧ್ಯಮ ನಿಮ್ಮ ನಮ್ಮೂರ್ ಎಕ್ಸ್ಪ್ರೆಸ್.ನಿಮ್ಮ ಕೈಗೆ ಸುದ್ದಿಯನ್ನು ನಿಖರವಾಗಿ, ನಿಷ್ಪಕ್ಷಪಾತವಾಗಿ ಕಳೆದ 5 ವರ್ಷದಿಂದ ನೀಡುತ್ತಾ ಬಂದಿದ್ದೇವೆ.ಸಾಮಾಜಿಕ ಜಾಲತಾಣಗಳಲ್ಲಿ ಇವರೆಗೆ ಸುಮಾರು 30,000ಕ್ಕೂ ಹೆಚ್ಚು ವಸ್ತು ನಿಷ್ಠ ವರದಿ ಮಾಡಿದ್ದೇವೆ. ನುರಿತ ಕೆಲಸಗಾರರ ಸಮಸ್ಯೆ, ಗ್ರಾಮೀಣ ಭಾಗದ ತಂತ್ರಜ್ಞಾನ ಸಮಸ್ಯೆ,ಬಂಡವಾಳ, ಜಾಹಿರಾತುಗಳ ಕೊರತೆಯ ನಡುವೆಯೂ ನಮ್ಮ ಸೇವೆ ನಡೆಯುತ್ತಲೇ ಬಂದಿದೆ. ಸುಮಾರು 1 ಕೋಟಿವರೆಗೆ ಬಂಡವಾಳ ಹೂಡಿಕೆಯಾಗಿದ್ದು, ಇದೀಗ ಹೂಡಿಕೆದಾರರ ನಿರೀಕ್ಷೆಯಲ್ಲಿ ಸಂಸ್ಥೆ ಇದೆ. ಸಂಸ್ಥೆ ರಾಜ್ಯದ ಎಲ್ಲಾ ತಾಲೂಕಲ್ಲಿ ಸೇವೆ ಮತ್ತು ಉದ್ಯಮ ಶುರು ಮಾಡುವ ಯೋಜನೆ ಹಾಕಿಕೊಂಡಿದೆ.ಜನರ ದನಿಯಾಗಿ, ಕಷ್ಟದಲ್ಲಿರುವರಿಗೆ ನೇರವಾಗಿ, ಆಡಳಿತವನ್ನು ಜನಪರವಾಗಿರುವಂತೆ ಎಚ್ಚರಿಸುತ್ತಾ ಬಂದಿದ್ದೇವೆ. ಸಾವಿರಾರು ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದ್ದೇವೆ. ಆರ್ಥಿಕ ಹಿಂಜರಿತ, ಕರೋನಾ ಕಾಟದಿಂದ ಪ್ರತಿ ದಿನವೂ ಸಂಸ್ಥೆಯನ್ನು ನಷ್ಟದಲ್ಲೇ ಬೃಹತ್ ಸಂಸ್ಥೆಯಾಗಿ ಬೆಳೆಸಿದ್ದೇವೆ. ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಮಾಧ್ಯಮ ಕ್ಷೇತ್ರದಲ್ಲಿ…
ವಿಜಯಪುರದ ಬಸವನ ಬಾಗೇವಾಡಿಯ ಹಳ್ಳಿಮನೆಯಲ್ಲಿದ್ದವರು ನಾಪತ್ತೆ ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ‘ಸಿಡಿ’ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಸಂತ್ರಸ್ತ ಯುವತಿಗೆ ನೋಟಿಸ್ ಕೊಟ್ಟಿದ್ದಾರೆ.ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ನಿಡಗುಂದಿ ಪಟ್ಟಣದಲ್ಲಿರುವ ಸಂತ್ರಸ್ತ ಯುವತಿಯ ಸಂಬಂಧಿಕರ ಮನೆಗೆ ಪೊಲೀಸ್ ನೋಟಿಸ್ ಅಂಟಿಸಲಾಗಿದೆ. ಸಂತ್ರಸ್ತೆಯ ತಾಯಿಯ ತವರು ಮನೆ ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿದೆ. ಇದೀಗ ಆ ಮನೆಗೆ ಪೊಲೀಸರು ನೋಟಿಸ್ ಅಂಟಿಸಿದ್ದಾರೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿ ಮನೆಯಲ್ಲಿ ಯಾರೂ ಇರದ ಕಾರಣ ಬೀಗ ಹಾಕಿರುವ ಮನೆಗೆ ನೋಟಿಸ್ ಅಂಟಿಸಿದ್ದಾರೆ. ಆದರೆ ಕುಟುಂಬ ನಾಪತ್ತೆಯಾಗಿದೆ. ಈಗಾಗಲೇ 5ಕ್ಕೂ ಹೆಚ್ಚು ಮಂದಿಯನ್ನು SIಖಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ರಾಜ್ಯದಲ್ಲೂ ಹೊಸ ನಿಯಮ ಜಾರಿ6 ಜಿಲ್ಲೆಯಲ್ಲಿ ಮಾಸ್ಕ್, ಲಸಿಕೆ ಕಡ್ಡಾಯಮದುವೆ, ಅಂತ್ಯ ಸಂಸ್ಕಾರ, ಕಾರ್ಯಕ್ರಮಕ್ಕೆ ಏನು ನಿಯಮ? ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕರೋನಾ ಅಲರ್ಟ್ ಘೋಷಣೆ ಮಾಡಲಾಗಿದೆ. ಮಾಸ್ಕ್ ಧರಿಸುವುದು ಕಡ್ಡಾಯ ಮಾಡಿ ಆದೇಶ ಹೊರಡಿಸಲಾಗಿದೆ. ಜೊತೆಗೆ ಸಭೆ, ಸಮಾರಂಭಗಳ ಮೇಲೆ ನಿಗಾ ಇಡಲಾಗಿದೆ.ಸೋಂಕಿತರ ಸಂಪರ್ಕಿತರನ್ನು ಪತ್ತೆಹಚ್ಚುವ ಕಾರ್ಯವನ್ನು ಚುರುಕುಗೊಳಿಸಲು ದಕ್ಷಿಣಕನ್ನಡ, ಬೀದರ್, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕಲಬುರಗಿ ಮತ್ತು ಉಡುಪಿ ಜಿಲ್ಲೆಗಳ ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ.ಮಾಸ್ಕ್ ಧರಿಸುವುದು ಮತ್ತು ದೈಹಿಕ ಅಂತರವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ರಾಜ್ಯದ ಎಲ್ಲಾ ಜಿಲ್ಲಾಡಳಿತಗಳಿಗೆ ರಾಜ್ಯ ಆರೋಗ್ಯ ಇಲಾಖೆ ಸೂಚಿಸಿದೆ.ಕಡ್ಡಾಯಕೋವಿಡ್ ಲಸಿಕೆ ಪಡೆದುಕೊಳ್ಳುವುದು ಮತ್ತು ಕೋವಿಡ್ ಪರೀಕ್ಷೆಗೆ ಒಳಪಡುವುದನ್ನು ವ್ಯಾಪಕವಾಗಿ ಹೆಚ್ಚಿಸಲು ಪರಿಣಾಮಕಾರಿ ಕ್ರಮವನ್ನು ತೆಗೆದುಕೊಳ್ಳಲು, ಮುಖ್ಯಮಂತ್ರಿಗಳ ಮತ್ತು ಆರೋಗ್ಯ ಸಚಿವರ ಸಂದೇಶವನ್ನು ಜನರಿಗೆ ತಲುಪಿಸಲು ಸೂಚಿಸಲಾಗಿದೆ.ವಿವಿಧ ಸಮಾರಂಭಗಳಲ್ಲಿ ಹೆಚ್ಚು ಜನರು ಸೇರುತ್ತಿರುವುದರಿಂದ ಕೋವಿಡ್ ಪಸರಿಸುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ, ಇಂತಹ ಕಾರ್ಯಕ್ರಮಗಳಲ್ಲಿ ಭಾರತೀಯ ಸರಕಾರದ ಮಾನದಂಡದ ಪ್ರಕಾರ 3.25…
1 ಲಕ್ಷದವರೆಗೆ ಅಲ್ಪಾವಧಿ ಬೆಳೆ ಸಾಲ ಮನ್ನಾಬ್ಯಾಂಕ್ ಬೆಂಗಳೂರು: ಅಲ್ಪಾವಧಿ ಬೆಳೆ ಸಾಲ ಪಡೆದ ರಾಜ್ಯದ ರೈತರಿಗೆ ಬಿಎಸ್ ಯಡಿಯೂರಪ್ಪ ಸರಕಾರ ಸಿಹಿ ಸುದ್ದಿ ನೀಡಿದೆ.ಈ ಮೂಲಕ ಕರೋನಾದ ಸಂಕಟದಲ್ಲೂ ಸರಕಾರ ರೈತರ ನೆರವಿಗೆ ಧಾವಿಸಿದೆ.ರಾಜ್ಯ ರೈತ ಸಹಕಾರ ಸಂಘ ಮತ್ತು ಸಹಕಾರಿ ಬ್ಯಾಂಕ್‌ಗಳಲ್ಲಿ ಅಲ್ಪಾವಧಿ ಬೆಳೆ ಸಾಲ ಪಡೆದು 2018ರ ಜು.7ರೊಳಗೆ ಹೊರ ಬಾಕಿಯಲ್ಲಿ ಗರಿಷ್ಠ 1 ಲಕ್ಷ ರೂ.ವರೆಗಿನ ಅಲ್ಪಾವಧಿ ಸಾಲದ ಮೊತ್ತವನ್ನು ಮನ್ನಾ ಮಾಡಲು ಸರಕಾರ ತೀರ್ಮಾನಿಸಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.ಸಾಲ ಮನ್ನಾ ಕುರಿತು ಶುಕ್ರವಾರ ಆದೇಶಿಸಿರುವ ಅವರು, 295.15 ಕೋಟಿ ರೂ. ಮೊತ್ತವನ್ನು ನೆಫ್ಟ್ ಮೂಲಕ ಅರ್ಹ 57,229 ರೈತರ ಉಳಿತಾಯ ಖಾತೆಗಳಿಗೆ ವರ್ಗಾವಣೆ ಮಾಡಲು ಸಂಬಂಧಪಟ್ಟ ಇಲಾಖೆಗೆ ಸೂಚಿಸಿದ್ದಾರೆ.ಅಲ್ಪಾವಧಿ ಬೆಳೆ ಸಾಲ ಮನ್ನಾ ಮಾಡಲು ಪ್ರಸಕ್ತ ಆಯವ್ಯಯದಲ್ಲಿ 260.41 ಕೋಟಿ ರೂ. ಸರಕಾರ ಮೀಸಲಿಟ್ಟಿತ್ತು. ಜತೆಗೆ ಅಪೆಕ್ಸ್ ಬ್ಯಾಂಕಿನಲ್ಲಿ ಲಭ್ಯವಿರುವ 34.73 ಕೋಟಿ ರೂ.ಗಳನ್ನೂ ಉಪಯೋಗಿಸಿಕೊಳ್ಳಲು ಇಲಾಖೆಗೆ ಅನುಮತಿ ನೀಡಿದೆ.…
ಇಬ್ಬರ ಮನೆಗೆ ಎನ್ಐಎ ಅಧಿಕಾರಿಗಳ ಭೇಟಿ, ತನಿಖೆತೀರ್ಥಹಳ್ಳಿಗೆ ಈ ಕಳಂಕ ಏಕೆ..? ತೀರ್ಥಹಳ್ಳಿ: ತೀರ್ಥಹಳ್ಳಿ ಮೂಲದ ಇಬ್ಬರು ಯುವಕರು ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಶಂಕೆ ಹಿನ್ನೆಲೆಯಲ್ಲಿ ಎನ್ ಐಎ ಅಧಿಕಾರಿಗಳ ತಂಡ ತಲೆಮರೆಸಿಕೊಂಡಿರುವ ಇಬ್ಬರು ಯುವಕರ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ಈ ಹಿಂದೆ ಕೂಡ ಇದೇ ರೀತಿಯ ತನಿಖೆ ನಡೆದಿತ್ತು.ಸ್ಯಾಟಲೈಟ್ ಫೋನ್ ಬಳಕೆಯ ಹಿನ್ನೆಲೆಯಲ್ಲಿ ಕಳೆದ ವರ್ಷ ಮಾರ್ಚ್ನಲ್ಲಿ ತೀರ್ಥಹಳ್ಳಿ ತಾಲೂಕಿನಾದ್ಯಂತ ಎನ್ ಐಎ ಅಧಿಕಾರಿಗಳು ಕೂಬಿಂಗ್ ನಡೆಸಿದ್ದರು. ಈ ವೇಳೆ ತೀರ್ಥಹಳ್ಳಿಯ ಇಬ್ಬರು ಯುವಕರು ಉಗ್ರರೊಂದಿಗೆ ಸಂಪರ್ಕ ಹೊಂದಿರುವುದು ದೃಢಪಟ್ಟಿತ್ತು. ಆದರೆ ಅಷ್ಟರಲ್ಲಾಗಲೇ ಯುವಕರು ನಾಪತ್ತೆಯಾಗಿದ್ದರು.ನಂತರ ಕಳೆದ ವರ್ಷ ಮಾರ್ಚ್ 19 ರಂದು ಎನ್ ಐ ಎ ಅಧಿಕಾರಿಗಳು ತೀರ್ಥಹಳ್ಳಿಯ ಯುವಕರ ಮನೆಗೆ ಬಂದು ವಿಚಾರಣೆ ನಡೆಸಿದ್ದರು.ಇದೀಗ ಹೆಚ್ಚಿನ ತನಿಖೆಗಾಗಿ ಮತ್ತೆ ಯುವಕರ ಮನೆಗೆ ಭೇಟಿ ನೀಡಿರುವ ಎನ್ಐಎ ಅಧಿಕಾರಿಗಳು ತಲೆಮರೆಸಿಕೊಂಡಿರುವ ಯುವಕರು ತಮ್ಮ ಕುಟುಂಬದೊಂದಿಗೆ ಸಂಪರ್ಕ ಸಾಧಿಸಿದ್ದಾರೆಯೇ ಎಂದು ತನಿಖೆಗೆ ನಡೆಸಿದ್ದಾರೆ. ಕಳೆದ ವರ್ಷ ಮಂಗಳೂರಲ್ಲಿ…
ಮಧು, ಮಂಜುನಾಥ ಗೌಡ ಜಂಪ್ಕಾಂಗ್ರೆಸ್ ಬಲ: ಶ್ರೀಕಾಂತ್ ಯಾವ ಕಡೆ? ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಒಂದು ಕಾಲದಲ್ಲಿ 3 ಮಂದಿ ಶಾಸಕರನ್ನು ಹೊಂದಿದ್ದ ಜೆಡಿಎಸ್ ಪಕ್ಷ ಇದೀಗ ಅನಾಥವಾಗುವ ಎಲ್ಲಾ ಸೂಚನೆಗಳಿವೆ.ಈಗಾಗಲೇ ಶಿವಮೊಗ್ಗ ಜೆಡಿಎಸ್ ಪ್ರಮುಖ ನಾಯಕರು, ರಾಜ್ಯ ಜೆಡಿಎಸ್ ಕಾರ್ಯದರ್ಶಿಯಾಗಿದ್ದ ಮಧು ಬಂಗಾರಪ್ಪ ಕಾಂಗ್ರೆಸ್ ಸೇರಲು ದಿನಗಣನೆ ಆರಂಭವಾಗಿದೆ. ಇತ್ತ ಡಿಸಿಸಿ ಬ್ಯಾಂಕ್ ಹಗರಣದಲ್ಲಿ ಸಿಲುಕಿ ಗೊಂದಲದಲ್ಲಿರುವ ಹಾಲಿ ಜೆಡಿಎಸ್ ಜಿಲ್ಲಾಧ್ಯಕ್ಷ,ಸಹಕಾರಿ ನಾಯಕ ಡಾ.ಮಂಜುನಾಥ ಗೌಡ ಕೂಡ ಬಾಗಿಲು ತಟ್ಟಿದ್ದು ಬಹುತೇಕ ಮಧು ಬಂಗಾರಪ್ಪ ಅವರ ಜೊತೆಯೇ ಕಾಂಗ್ರೆಸ್ ಸೇರಲು ಸಿದ್ದರಾಗಿದ್ದಾರೆ. ಹೀಗಾಗಿ ನಾಯಕನಿಲ್ಲದ ಹಡಗು ಜೆಡಿಎಸ್ ಆಗುವ ಸಾಧ್ಯತೆ ಇದೆ. ಒಂದು ಕಾಲದಲ್ಲಿ ಸೊರಬ, ಭದ್ರಾವತಿ, ಶಿವಮೊಗ್ಗ ಗ್ರಾಮಾಂತರದಲ್ಲಿ ಜೆಡಿಎಸ್ ಶಾಸಕರಿದ್ದರು. ಎಲ್ಲಾ ಕ್ಷೇತ್ರದಲ್ಲಿ ಪಕ್ಷ ಪ್ರಬಲವಾಗಿತ್ತು. ಆದರೆ ಪಕ್ಷದ ನಾಯಕರ ಬೇಜವಾಬ್ದಾರಿ, ಪಕ್ಷ ಸಂಘಟನೆ ಇಲ್ಲದಿರುವುದು ಇಂದು ಪಕ್ಷಕ್ಕೆ ಒಬ್ಬ ಸಾರಥಿ ಇಲ್ಲದ ಸ್ಥಿತಿ ನಿರ್ಮಾಣ ಮಾಡಿದೆ. ಇಡೀ ಮಲೆನಾಡಿನಲ್ಲಿ ಓರ್ವ ಶಾಸಕ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ.ಶಿವಮೊಗ್ಗ…
ಪ್ರತಿಭಟನಾಕಾರರು ಮಾಡಿದ ದೇಶದ್ರೋಹಿ ಕೃತ್ಯಲಾಠಿ ಚಾರ್ಜ್ ನಡೆಸಿದ ಪೊಲೀಸರುನವದೆಹಲಿ: ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಕೆಂಪುಕೋಟೆಯಲ್ಲಿ ಅನ್ಯಧ್ವಜವನ್ನು ಹಾರಿಸಿ ಹೀನ ಕೃತ್ಯ ನಡೆಸಿರುವ ಘಟನೆಯು ಕಂಡುಬಂದಿದೆ. ಟ್ರ್ಯಾಕ್ಟರ್ ರ್ಯಾಲಿ ಮೂಲಕ ರೈತರು ದೆಹಲಿ ಪ್ರವೇಶಿಸಿಸುವ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ಘರ್ಷಣೆಯು ಸಂಭವಿಸಿದ್ದು, ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.ಪೊಲೀಸರು ನಿಗದಿಪಡಿಸಿರುವ ಮಾರ್ಗವನ್ನು ಬದಲಾಯಿಸಿದ ಪ್ರತಿಭಟನಾಕಾರರು ಅನ್ಯ ಮಾರ್ಗದಲ್ಲಿ ಸಂಚರಿಸಿದ ವೇಳೆ ಪೊಲೀಸರು ಲಾಠಿ ಚಾರ್ಜ್ ನಡೆಸಿರುವರು.ಇದೇ ವೇಳೆ ಕೆಲ ಪ್ರತಿಭಟನಾಕಾರರು ಕೆಂಪುಕೋಟೆಯ ಮೇಲೆ ಹೋಗಿ ಅನ್ಯ ಧ್ವಜ ಹಾರಾಟ ಮಾಡಿ ದೇಶದ್ರೋಹಿ ಕೃತ್ಯ ಮಾಡಿದ್ದಾರೆ.
-ಗಣರಾಜ್ಯೋತ್ಸವ ಪರೇಡ್ ನಲ್ಲಿ ಹಂಪಿಯ ವೈಭವ-ನೋಡುಗರ ಗಮನಸೆಳೆದ ಕರ್ನಾಟಕದ ಸ್ತಬ್ಧಚಿತ್ರ ನವದೆಹಲಿ: ದೇಶಾದ್ಯಾಂತ ಸಂಭ್ರಮದ ಗಣರಾಜೋತ್ಸವ ಆಚರಣೆ ಮಾಡಲಾಯ್ತು.ಪ್ರತಿ ಬಾರಿಯಂತೆ ಈ ಬಾರಿಯೂ ರಾಜಪಥದಲ್ಲಿ ಸ್ತಬ್ಧಚಿತ್ರ ಮೆರವಣಿಗೆ ನಡೆಸಲಾಗಿದ್ದು, ವಿವಿಧ ರಾಜ್ಯಗಳ ಸ್ತಬ್ಧಚಿತ್ರ ಪ್ರದರ್ಶನಗೊಂಡಿತು. ಅವುಗಳ ಜೊತೆಗೆ ಕರ್ನಾಟಕದಿಂದ ವಿಜಯನಗರ ವೈಭವ ಸಾರುವ ಹಂಪಿಯ ಸ್ತಬ್ಧಚಿತ್ರ ಪ್ರದರ್ಶನ ಕನ್ನಡಿಗರ ಗಮನ ಸೆಳೆಯಿತು.ಹಂಪಿಯ ಉಗ್ರ ನರಸಿಂಹ, ಹನುಮ ಜನ್ಮ ಸ್ಥಳ ಅಂಜನಾದ್ರಿ ಬೆಟ್ಟ, 1509ರಲ್ಲಿ ನಡೆದ ವಿಜಯನಗರ ಸಾಮ್ರಾಜ್ಯದ ಸಾಮ್ರಾಟ ಶ್ರೀಕೃಷ್ಣದೇವರಾಯರ ಪಟ್ಟಾಭಿಷೇಕ ಸಮಾರಂಭ ಹಾಗೂ ಹಜಾರರಾಮ ದೇವಾಲಯದ ಭಿತ್ತಿ ಚಿತ್ರಗಳನ್ನಈ ಸ್ತಬ್ಧಚಿತ್ರ ಬಿಂಬಿಸುತ್ತಿತ್ತು.