Categories
ಬೆಂಗಳೂರು

ಮುಂದುವರಿದ ಅಧ್ಯಾಯ ಸಿನಿಮಾದಲ್ಲಿ ಆಶಿಕಾ!

  • ಹೊಸ ನಿರೀಕ್ಷೆ ಮೂಡಿಸಿದ ಮಲೆನಾಡು ಮೂಲದ ನಟಿ
  • ಇಂಜಿನಿಯರ್ ಈಗ ನಟಿ..!

ಬೆಂಗಳೂರು: ಮಲೆನಾಡು ಪ್ರತಿಭೆಗಳ ಅಗರ. ಸಾಹಿತ್ಯ, ಸಂಗೀತ, ಸಿನಿಮಾ, ರಂಗಭೂಮಿ ಹೀಗೆ ಎಲ್ಲಾ ಕ್ಷೇತ್ರದಲ್ಲಿ ಮಲೆನಾಡು ಮೂಲದವರ ಕಾಣಿಕೆ ಅಪಾರ.
ಇದೀಗ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಮೂಲದ ಇಂಜಿನಿಯರಿಂಗ್ ಪದವಿಧರೆ ಆಶಿಕಾ ಸೋಮಶೇಖರ್ “ಮುಂದುವರಿದ ಅಧ್ಯಾಯ” ಸಿನಿಮಾದಲ್ಲಿ ನಟಿಯಾಗಿ ಬಣ್ಣ ಹಚ್ಚುವ ಮೂಲಕ ಚಂದನವನದಲ್ಲಿ ಗಮನ ಸೆಳೆದಿ ದ್ದಾರೆ.


ಸಾಹಿತ್ಯ, ರಂಗಭೂಮಿ, ಶಾರ್ಟ್ ಮೂವಿ ಕ್ಷೇತ್ರದ ಬಳಿಕ ಆಶಿಕಾ ಸ್ಯಾಂಡಲ್ವುಡ್ನಲ್ಲಿ ಹೊಸ ಭರವಸೆ ಮೂಡಿಸಲಿದ್ದಾರೆ. ಆಶಿಕಾ ಸೋಮಶೇಖರ್ ಮೂಲತಃ ಕೃಷಿ ಕುಟುಂಬದವರಾಗಿದ್ದು, ತೀರ್ಥಹಳ್ಳಿ ತಾಲ್ಲೂಕಿನ ಮೇಗರವಳ್ಳಿ ಗ್ರಾಮದ ಅನಿತಾ ಹಾಗೂ ಸೋಮಶೇಖರ ದಂಪತಿಗಳ ಪುತ್ರಿ. ಬೆಂಗಳೂರಿನಲ್ಲಿ ಉದ್ಯಮ ನಡೆಸುತ್ತಿರುವ ಸೋಮಶೇಖರ್ ಮಗಳ ಸಾಧನೆಗೆ ಸಾಥ್ ನೀಡುತ್ತಿದ್ದಾರೆ. ತುಂಬಾ ದಿನಗಳಿಂದ ಒಳ್ಳೆಯ ಕಥೆಯ ಹುಡುಕಾಟದಲ್ಲಿದ್ದ ನಟಿ ಆಶಿಕಾ ಸೋಮಶೇಖರ್ ಅವರ ಸಿನಿ ಜರ್ನಿ ಭಾರಿ ಕುತೂಹಲ ಮೂಡಿಸಿದೆ.


ಚಿಕ್ಕ ವಯಸ್ಸಿನಲ್ಲೇ ರಂಗಭೂಮಿ,ಸಿನಿಮಾ ರಂಗದ ಪ್ರಿಯರಾಗಿದ್ದು, ಈ ಮೊದಲು ರಂಗಭೂಮಿಯಲ್ಲಿ ಕಲಾವಿದೆಯಾಗಿ ತಮ್ಮದೇ ಛಾಪು ಮೂಡಿಸಿದ್ದಾರೆ. ಚಿತ್ರರಂಗದಲ್ಲಿ ಅವಕಾಶಗಿಟ್ಟಿಸಿಕೊಂಡ ಮಲೆನಾಡಿನ ಯುವ ಪ್ರತಿಭೆ ಆಶಿಕಾ ಅಭಿನಯದ ಸಿನಿಮಾ ಮಾ.19ರಂದು ರಾಜ್ಯದ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಈಗಾಗಲೇ ಈ ಚಿತ್ರ ಭಾರಿ ನಿರೀಕ್ಷೆ ಹುಟ್ಟಿಸಿದೆ.


ಬಾಲು ಚಂದ್ರಶೇಖರ್ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ಸಿನಿಮಾವು ಪ್ರಸ್ತುತ ಸಮಾಜ ಮತ್ತು ಸಮಾಜದ ಉದ್ಧಾರದ ಪರಿಕಲ್ಪನೆ ಹೊಂದಿದೆ.
ಸಾಕ್ಷಿ ಎಂಬ ಹೆಸರಿನ ಜರ್ನಲಿಸ್ಟ್ ಪಾತ್ರದಲ್ಲಿ ಆಶಿಕಾ ಕಾಣಿಸಿಕೊಂಡಿದ್ದಾರೆ. ನಟ ಆದಿತ್ಯ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅಜಯ್ ರಾಜ್ ಕೂಡ ನಟಿಸುತ್ತಿದ್ದು, ಅವರಿಗೆ ಜೋಡಿಗಾಗಿ ಆಶಿಕಾ ಸೋಮಶೇಖರ್ ಕಾಣಿಸಿಕೊಂಡಿದ್ದಾರೆ.
ಶುಕ್ರವಾರ ರಾಜ್ಯಾದಂತ ಬೆಳ್ಳಿತೆರೆಗೆ ಬರಲಿದ್ದು, ಸಿನಿ ಪ್ರಿಯರು ಥೀಯೇಟರ್ ಅಲ್ಲೇ ಸಿನಿಮಾ ನೋಡುವ ಮೂಲಕ ಚಿತ್ರ ತಂಡಕ್ಕೆ ಪ್ರೋತ್ಸಾಹಿಸುವ ಮೂಲಕ ಶುಭ ಹಾರೈಸೋಣ.


ರಾಜ್ಯದ ಎಲ್ಲಾ ಸುದ್ದಿಗಳಿಗೆ nammurexpress.in ವೀಕ್ಷಿಸಿ.
Report By: ಸುರಭಿ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.