ತೀರ್ಥಹಳ್ಳಿಯಲ್ಲಿ ರೈತ ಸಂಘದಿಂದ ಪ್ರತಿಭಟನೆ ಕೃಷಿ ಮಸೂದೆಗಳನ್ನು ವಿರೋಧಿಸಿ ಎಲ್ಲೆಡೆ ರೈತರು ಟ್ಯಾಕ್ಟರ್ ರ್ಯಾಲಿ ಮಾಡುವ ಮೂಲಕ ಪ್ರತಿಭಟನೆ ಮಾಡುತ್ತಿದ್ದು, ತೀರ್ಥಹಳ್ಳಿಯಲ್ಲೂ ಪ್ರತಿಭಟನೆ ನಡೆದಿದೆ. ಕಾಂಗ್ರೆಸ್ ನಾಯಕರಾದ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಸುಮಾರು 40ಕ್ಕೂ ಹೆಚ್ಚು ಟ್ಯಾಕ್ಟರ್ ಗಳು ಈ ಪ್ರತಿಭಟನೆಯಲ್ಲಿ ಕಂಡುಬಂದವು.
Author: Nammur Express Admin
-ಇಂದಿನಿಂದ ಪ್ಲೇ ಸ್ಟೋರ್ ನಲ್ಲಿ ಲಭ್ಯ ಮೊಬೈಲ್ ನ ಕ್ರಿಯಾಶೀಲ ಆಟಕ್ಕೆ ತೆರೆ ಇಂದು ಭಾರತದಲ್ಲಿ FAU-G ಎನ್ಕೋರ್ ಗೇಮ್ಸ್ ಅಭಿವೃದ್ಧಿಪಡಿಸಿದ ಎಫ್ಎಯು-ಜಿ ಜನವರಿ 26 ರಂದು ಪ್ರಾರಂಭವಾಗಲಿದೆ. ಜನಪ್ರಿಯ PUB G ಎಂಬ ಗೇಮಿಂಗ್ ಆಯಪ್ ಅನ್ನು ಭಾರತದಲ್ಲಿ ನಿಷೇಧಿಸಿದ ನಂತರ ಇದನ್ನು ಘೋಷಿಸಲಾಯಿತು. ಈ ಫಿಯರ್ಲೆಸ್ ಮತ್ತು ಯುನೈಟೆಡ್ ಗಾರ್ಡ್ಗಳಿಗೆ ಸಂಕ್ಷಿಪ್ತವಾದ FAU-G ಈ ಗಣರಾಜ್ಯೋತ್ಸವವನ್ನು ಪ್ರಾರಂಭಿಸಲು ಸಜ್ಜಾಗಿದೆ.ಭಾರತದಲ್ಲಿ ನಿರ್ಮಿಸಲಾದ ಮೊಬೈಲ್ ಗೇಮ್ 2020 ರ ಸೆಪ್ಟೆಂಬರ್ ನಲ್ಲಿ ಮೊದಲ ಬಾರಿಗೆ ಸುದ್ದಿ ಮುಖ್ಯಾಂಶಗಳಿಗೆ ಕಾರಣವಾಯಿತುಈಂU-ಉ ಎಂದರೆ ಫಿಯರ್ಲೆಸ್ ಮತ್ತು ಯುನೈಟೆಡ್ ಗಾರ್ಡ್ ಎಂದರ್ಥ – ಇದು ಮೊಬೈಲ್ನ ಕ್ರಿಯಾಶೀಲ ಆಟವಾಗಿದ್ದು ಇದನ್ನು ಭಾರತದಲ್ಲಿ ಬೆಂಗಳೂರು ಮೂಲದ ಎನ್ಕೋರ್ ಗೇಮ್ಸ್ ತಯಾರಿಸಿದೆ. ಸೆಪ್ಟೆಂಬರ್ನಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಟ್ವಿಟ್ಟರ್ನಲ್ಲಿ ಎಫ್ಎಯು-ಜಿ ಘೋಷಿಸಿದರು ಇದು ಆತ್ಮನಿರ್ಭರ್ ಚಳವಳಿಯನ್ನು ಬೆಂಬಲಿಸುತ್ತದೆ ಮತ್ತು ಆಟಗಾರರು ನಮ್ಮ ಸೈನಿಕರ ತ್ಯಾಗದ ಬಗ್ಗೆ ಸಹ ಕಲಿಯುತ್ತಾರೆ” ಎಂದು ಹೇಳಿದರು. ಆಟದಿಂದ ಬರುವ ಆದಾಯದ ಶೇಕಡಾ…
-ರಾಜಪಥಕ್ಕೆ ಆಗಮಿಸಿದ ಮೋದಿಯವರು ತೊಟ್ಟಿದ್ದ ವಿಶೇಷ ಪೇಟ ಸೆಂಟರ್ ಆಫ್ ಅಟ್ರಾಕ್ಷನ್ ಆದ ಪ್ರಧಾನಿನವದೆಹಲಿ: ದೇಶದಾದ್ಯಂತ 71 ನೇ ಗಣರಾಜ್ಯೋತ್ಸವ ಸಂಭ್ರಮ ಮನೆಮಾಡಿದ್ದು, ರಾಜಪಥಕ್ಕೆ ಆಗಮಿಸಿದ ಪ್ರಧಾನಿ ಮೋದಿಯವರು ತೊಟ್ಟಿದ್ದ ವಿಶೇಷ ಪೇಟ ಎಲ್ಲರ ಗಮನ ಸೆಳೆದಿದೆ.ಪ್ರಧಾನಿ ಮೋದಿಯವರು ಪ್ರತೀ ಬಾರಿಯಂತೆ ಈ ಬಾರಿಯೂ ಕೂಡ ಸಾಂಪ್ರದಾಯಿಕ ಪೇಟ, ಕುರ್ತಾ ಹಾಗೂ ಜಾಕೆಟ್ ಧರಿಸಿದ್ದು, ಪ್ರಮುಖವಾಗಿ ಮೋದಿಯವರು ಧರಿಸಿದ್ದ ವಿಶೇಷ ಪೇಟ ನೆರೆದವರ ಆಕರ್ಶಣೆಗೆ ಕಾರಣವಾಯಿತು.ಕೇಸರಿ ಬಣ್ಣದ ವಿಭಿನ್ನ ವಿನ್ಯಾಸ ಹೊಂದಿರುವ ಪೇಟ ಇದೀಗ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದೆ.ಮೋದಿಯವರು ಇಂದು ಧರಿಸಿದ್ದ ಪೇಟ ರಾಜಮನೆತನದ ಪೇಟವಾಗಿದೆ. ಗುಜರಾತ್ ನ ಜಮಾನಗರದ ರಾಜಮನೆತನದವರು ಪ್ರಧಾನಿ ಮೋದಿಗೆ ಉಡುಗೊರೆಯಾಗಿ ನೀಡಿದ ಪೇಟ ಇದಾಗಿದ್ದು,ಇದೇ ಮೊದಲ ಬಾರಿಗೆ ಈ ರಾಜಮನೆತನ ಹೊರಗಿನವರಿಗೆ ಪೇಟವನ್ನು ನೀಡಿದ್ದಾರೆ. ಈ ಪೇಟವನ್ನು ಇಂದು ಪ್ರಧಾನಿ ಮೋದಿ ತೊಟ್ಟಿದ್ದು, ಎಲ್ಲರ ಗಮನ ಸೆಳೆದಿದ್ದಾರೆ.
-ಅಪಾಯ ಎದುರಿಸಲು ಭಾರತೀಯ ಸೇನೆ ಸದಾ ಸಿದ್ಧ ರೈತರ ಪ್ರತಿಭಟನೆಯನ್ನು ಉಲ್ಲೇಖಿಸಿದ ರಾಮನಾಥ್ ಕೋವಿಂದ್ನವದೆಹಲಿ : 71ನೇ ಗಣರಾಜ್ಯೋತ್ಸವದ ಮುಂಚಿನ ದಿನದ ಭಾರತದ ರಾಷ್ಟ್ರಪತಿ ತಮ್ಮ ಭಾಷಣದಲ್ಲಿ, ಚೀನಾದ ವಿಸ್ತರಣಾವಾದಕ್ಕೆ ಉತ್ತರವೆಂಬಂತೆ ಮಾತನಾಡಿದ್ದು, ‘ಭಾರತವು ಶಾಂತಿಗೆ ಬದ್ಧವಾಗಿದೆ. ಆದರೆ, ದೇಶದ ಭದ್ರತೆಗೆ ಎದುರಾಗುವ ಯಾವುದೇ ಅಪಾಯವನ್ನು ಎದುರಿಸಲು ನಮ್ಮ ಸೇನಾ ಪಡೆಗಳು ಸದಾ ಸಿದ್ದವಾಗಿವೆ. ‘ಯಾವುದೇ ಬೆಲೆ ತೆತ್ತಾದರೂ ರಾಷ್ಟ್ರದ ಹಿತಾಸಕ್ತಿಯನ್ನು ಕಾಪಾಡುತ್ತೇವೆ. ಕಳೆದ ವರ್ಷ ನಾವು ಗಡಿಯಲ್ಲಿ ವಿಸ್ತರಣಾ ವಾದದ ಸವಾಲನ್ನು ಎದುರಿಸಿದ್ದು, ನಮ್ಮ ವೀರ ಯೋಧರು, ವಿರೋಧಿಗಳ ಉದ್ದೇಶ ವನ್ನು ವಿಫಲಗೊಳಿಸಿದ್ದರು. ಅವರಲ್ಲಿ 20 ಯೋಧರು ಹುತಾತ್ಮರಾಗಿದ್ದರು. ಈ ಯೋಧರ ತ್ಯಾಗಕ್ಕೆ ಭಾರತವು ಎಂದಿಗೂ ಋಣಿಯಾಗಿರುತ್ತದೆ’ ಎಂದರು.’ಭಾರತ-ಚೀನಾ ಗಡಿಯಲ್ಲಿ ಒಂಬತ್ತು ತಿಂಗಳುಗಳಿಂದ ಉದ್ವಿಗ್ನತೆ ಇದೆ. ಮೈನಸ್ 50ರಿಂದ 60ಡಿಗ್ರಿ ಸೆಲ್ಸಿಯಸ್ ತಾಪಮಾನದ ಗಾಲ್ವನ್ ಕಣಿವೆ ಯಿಂದ, ಜೈಸಲ್ಮೇರ್ನ 50ಡಿಗ್ರಿ ಸೆಲ್ಸಿಯಸ್ ನ ಸುಡುಬಿಸಿಲಿನ ಪ್ರದೇಶದವರೆಗೆ, ಭೂಮಿ, ಆಕಾಶ ಹಾಗೂ ವಿಸ್ತಾರವಾದ ಕರಾವಳಿಯುದ್ದಕ್ಕೂ ನಮ್ಮ ಸೈನಿಕರು ದೇಶವನ್ನು ಕಾಯುತ್ತಿದ್ದಾರೆ. ಅವರ…
-ರೈತರ ಪ್ರತಿಭಟನೆಗೆ `ಕೈ’ ಜೋಡಿಸಿದ ಕಾಂಗ್ರೆಸ್ ಜನವರಿ 26 ಸರ್ಕಾರಿ ರಜೆ ಎಂದ ಡಿಕೆಶಿ!ಬೆಂಗಳೂರು: ರೈತರ ಟ್ರ್ಯಾಕ್ಟರ್ ಹೋರಾಟವನ್ನು ತಡೆದಿದ್ದೇ ಆದರೆ, ಜೈಲ್ ಭರೋ ಚಳುವಳಿ ನಡೆಸಲಾಗುತ್ತದೆ ಎಂದು ಸರ್ಕಾರಕ್ಕೆ ಕಾಂಗ್ರೆಸ್ ಎಚ್ಚರಿಕೆ ನೀಡಿದೆ.ಸುದ್ದಿಗಾರರೊಂದಿಗೆ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ರಾಜ್ಯ ಸರ್ಕಾರ ರೈತರಿಗೆ ಬೆಂಬಲ ನೀಡಬೇಕು. ಪೊಲೀಸರೇ ರಾಜ್ಯ ಸರ್ಕಾರ ಕೈಗೊಂಬೆಯಾಗಬಾರದು. ಸುಪ್ರೀಂಕೋರ್ಟ್ ಕೂಡ ರೈತರ ಪ್ರತಿಭಟನೆಗೆ ಯಾವುದೇ ನಿರ್ಬಂಧಗಳನ್ನು ಹೇರಿಲ್ಲ ಎಂದರು.ಇದೇ ವೇಳೆ ಗಣರಾಜ್ಯೋತ್ಸವ ದಿನದಂದು ರೈತರು ಟ್ರ್ಯಾಕ್ಟರ್ ರ್ಯಾಲಿ ನಡೆಸಿದರೆ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಎದುರಾಗಲಿದೆ ಎಂಬ ಸುದ್ದಿಗಳ ವಿರುದ್ಧ ಸಿಟ್ಟಾದ ಅವರು, ಜನವರಿ 26 ಸರ್ಕಾರಿ ರಜೆಯಾಗಿದೆ, ಬೆಂಗಳೂರಿಲ್ಲಿ ನಡೆಯಲಿರುವ ಪ್ರತಿಭಟನೆಗೆ ರೈತರು ಟ್ರ್ಯಾಕ್ಟರ್ ಸಮೇತ ಬರಲಿದ್ದಾರೆ. ಒಮ್ಮೆ ಟ್ರ್ಯಾಕ್ಟರ್ ಜಪ್ತಿ ಮಾಡಿದರೆ ಅದನ್ನು ನಾವೇ ಬಿಡಿಸಿಕೊಡಲು ಹೋಗುತ್ತೇವೆ. ಕೇಸ್ ಹಾಕಿದರೆ, ಜೈಲ್ ಭರೋ ಚಳುವಳಿ ಮಾಡುತ್ತೇವೆ ಎಂದು ಡಿಕೆಶಿ ಗುಡುಗಿದ್ದಾರೆ. ಎಲ್ಲರಿಗೂ ನೋವು ಹೇಳಿಕೊಳ್ಳುವ ಹಕ್ಕಿದೆ. ರೈತರ ಕೈ ಕಟ್ಟಿ ಹಾಕುವ ಕೆಲಸ…
-ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರಿಗೆ ಗೌರವ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳ ಘೋಷಣೆ. ದೆಹಲಿ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರಿಗೆ ಕೇಂದ್ರ ಸರ್ಕಾರ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳನ್ನು ಘೋಷಣೆ ಮಾಡಿದೆ. ಗಮನಾರ್ಹ ಸಾಧನೆ ಮಾಡಿರುವ ಪೊಲೀಸ್ ಸಿಬ್ಬಂದಿಗೂ ವಿವಿಧ ಮೆಡಲ್ಗಳನ್ನು ಘೋಷಿಸಲಾಗಿದೆ.ಪದ್ಮ ವಿಭೂಷಣಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ (ಕಲೆ), ಉಡುಪಿಯ ಖ್ಯಾತ ವೈದ್ಯ ಡಾ. ಬೆಳ್ಳೆ ಮೋನಪ್ಪ ಹೆಗ್ಡೆ (ಬಿ.ಎಂ. ಹೆಗ್ಡೆ-ಔಷಧ ಕ್ಷೇತ್ರ), ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ (ಸಾರ್ವಜನಿಕ ಕ್ಷೇತ್ರ), ನರೀಂದರ್ ಸಿಂಗ್ ಕಪಾನಿ (ವಿಜ್ಞಾನ ಮತ್ತು ಇಂಜಿನಿಯರಿಂಗ್) ಮೌಲಾನಾ ವಹಿದುದೀನ್ ಖಾನ್ (ಆಧ್ಯಾತ್ಮ ವಿಭಾಗ), ಬಿ.ಬಿ. ಲಾಲ್ (ಪುರಾತತ್ವ ಶಾಸ್ತ್ರ ವಿಭಾಗ) ಹಾಗೂ ಒಡಿಶಾದ ಸುದರ್ಶನ್ ಸಾಹೊ (ಕಲೆ).ಪದ್ಮ ಭೂಷಣ10 ಸಾಧಕರಿಗೆ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಜ್ಞಾನಪೀಠ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ, ಮಾಜಿ ಕೇಂದ್ರ ಸಚಿವ ದಿವಂಗತ ರಾಮ್ವಿಲಾಸ್ ಪಾಸ್ವಾನ್, ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್, ಅಸ್ಸಾಂ ಮಾಜಿ…
ನಾಯಕನಾಗಿ ನಗಿಸಲು ಬರುತ್ತಿರುವ ಚಿಕ್ಕಣ್ಣ ತಮ್ಮ ಹಾಸ್ಯದ ಮೂಲಕ ಪ್ರೇಕ್ಷಕರನ್ನು ನಗಿಸುತ್ತಾ ಬಂದಿರುವ ಚಿಕ್ಕಣ್ಣ ಇವರು ಇದೀಗ ನಾಯಕ ನಟನಾಗಿ ಮಿಂಚಲು ಬರುತ್ತಿದ್ದಾರೆ.ಈ ಹಿಂದೆ ಅಧ್ಯಕ್ಷ ಚಿತ್ರದಲ್ಲಿ ನಟ ಶರಣ್ ಅವರ ಜೊತೆ ಗೆಳೆಯನ ಪಾತ್ರದಲ್ಲಿ ಚಿಕ್ಕಣ್ಣ ಕಾಣಿಸಿಕೊಂಡಿದ್ದರು. ಇದೀಗ ಉಪಾಧ್ಯಕ್ಷಚಿತ್ರದಲ್ಲಿ ನಾಯಕ ನಟನಾಗಿ ಮಿಂಚಲಿದ್ದಾರೆ.ರಾಬರ್ಟ್ ಹಾಗೂ ಮದಗಜದ ನಂತರ ಚಿಕ್ಕಣ್ಣ ಅಭಿನಯದ ಉಪಾಧ್ಯಕ್ಷ ಚಿತ್ರವನ್ನು ಉಮಾಪತಿ ಶ್ರೀನಿವಾಸ ನಿರ್ಮಾಣಕ್ಕೆಮುಂದಾಗಿದ್ದು , ಸ್ಮಿತಾ ಉಮಾಪತಿ ಹಾಗೂ ನಿರ್ಮಲಾ ಶ್ರೀನಿವಾಸ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರವನ್ನು ಚಂದ್ರ ಮೋಹನ್ಉಪಾಧ್ಯಕ್ಷ ಅವರು ನಿರ್ದೇಶಿಸುತ್ತಿದ್ದಾರೆ.ನಾಯಕ ನಟನಾಗುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಚಿಕ್ಕಣ್ಣ ಅವರು, ಚಿತ್ರರಂಗದಲ್ಲಿ ಪ್ರತೀಯೊಬ್ಬ ನಟನಿಗೂ ಇದೊಂದುಅತ್ಯಂತ ಪ್ರಮುಖವಾಗ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.
ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾದ ಕೃಷ್ಣ-ನಾಗೇಂದ್ರ ಪ್ರಸಾದ್ ನಿರ್ದೇಶನದ ಸಿನಿಮಾದಲ್ಲಿ ನಾಯಕನಾಗಿ ನಟನೆ ‘ಲವ್ ಮಾಕ್ಟೇಲ್’ ಸಿನಿಮಾದ ಸೂಪರ್ ಸಕ್ಸಸ್ ನಂತರ ಕೃಷ್ಣ, ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ 3-4 ಸಿನಿಮಾಗಳಲ್ಲಿ ನಟಿಸುತ್ತಿರುವ ಕೃಷ್ಣ ಮತ್ತೊಂದು ಹೊಸ ಸಿನಿಮಾಗೆ ಸಹಿ ಮಾಡಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ.ನಟ ಮತ್ತು ಖ್ಯಾತ ನೃತ್ಯ ನಿರ್ದೇಶಕ ನಗೇಂದ್ರ ಪ್ರಸಾದ್ ನಿರ್ದೇಶನದ ಸಿನಿಮಾದಲ್ಲಿ ಕೃಷ್ಣ ನಾಯಕನಾಗಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದ್ದು, ಈ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿಯೂ ಕೇಳಿಬರುತ್ತಿದೆ.
ಕುಟುಂಬದ ಸಮಸ್ಯೆ ಹಿನ್ನೆಲೆ ಘಟನೆಬಿಗ್ ಬಾಸ್ ಕನ್ನಡದಲ್ಲಿ ಪ್ರಸಿದ್ದಿಬೆಂಗಳೂರು: ಬಿಗ್ಬಾಸ್ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮವಾರ ಮಾಗಡಿ ರಸ್ತೆಯ ಜನಪ್ರಿಯ ಅಪಾರ್ಟ್ಮೆಂಟ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗಿದೆ.ಜಯಶ್ರೀ ರಾಮಯ್ಯ ಅವರು ಈ ಹಿಂದೆ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ವಿಚಾರವಾಗಿ ನಟ ಸುದೀಪ್ ಕೂಡ ಬುದ್ಧಿ ಹೇಳಿದ್ದರು. ಆದರೇ ಇಂದು ನೇಣು ಹಾಕಿಕೊಂಡಿದ್ದಾರೆ. ಕೌಟುಂಬಿಕ ಸಮಸ್ಯೆಯ ಹಿನ್ನೆಲೆಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
-ಅಭಿಮಾನಿಗಳ ಪ್ರಶ್ನೆಗೆ ಶೀಘ್ರದಲ್ಲೇ ಉತ್ತರ -ಅಭಿನಯದೊಂದಿಗೆ ನಿರ್ದೇಶನದ ಯೋಚನೆ ಮಾಡಿದ ಕಿಚ್ಚ ಕನ್ನಡದ ಅಚ್ಚುಮೆಚ್ಚಿನ ನಟ ಸದ್ಯ ‘ ಕೋಟಿಗೊಬ್ಬ -3 ‘ ಮತ್ತು ‘ ವಿಕ್ರಾಂತ್ ರೋಣ ‘ ಚಿತ್ರಗಳಲ್ಲಿ ಬ್ಯುಸಿ ಇರುವ ಸುದೀಪ್ , ಸಿನಿಮಾ ನಿರ್ದೇಶನ ಮಾಡುತ್ತಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಈಗ ಅಭಿಮಾನಿಗಳ ಪ್ರಶ್ನೆಗೆ ಸ್ವತಃ ಸುದೀಪ್ ಅವರೇ ಉತ್ತರಿಸಿದ್ದಾರೆ . ‘ ಈಗಾಗಲೇ ನಾನು ನಿರ್ದೇಶನ ಮಾಡಲಿರುವ ಸಿನಿಮಾದ ಸ್ಕ್ರಿಪ್ಟ್ ಫೈನಲ್ ಆಗಿದೆ. ವಿಕ್ರಾಂತ್ ರೋಣ ಸಿನಿಮಾ ಮುಗಿಯುತ್ತಿದ್ದಂತೆ , ಈ ಸಿನಿಮಾ ಶುರು ಮಾಡುವ ಯೋಚನೆ ಇದೆ . ಶೀಘ್ರದಲ್ಲಿಯೇ ಸಿಮಿಮಾ ನಿರ್ದೇಶನದ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇನೆ ‘ ಎಂದು ಸುದೀಪ್ ತಿಳಿಸಿದ್ದಾರೆ .