-ರಾಜಪಥಕ್ಕೆ ಆಗಮಿಸಿದ ಮೋದಿಯವರು ತೊಟ್ಟಿದ್ದ ವಿಶೇಷ ಪೇಟ
- ಸೆಂಟರ್ ಆಫ್ ಅಟ್ರಾಕ್ಷನ್ ಆದ ಪ್ರಧಾನಿ
ನವದೆಹಲಿ: ದೇಶದಾದ್ಯಂತ 71 ನೇ ಗಣರಾಜ್ಯೋತ್ಸವ ಸಂಭ್ರಮ ಮನೆಮಾಡಿದ್ದು, ರಾಜಪಥಕ್ಕೆ ಆಗಮಿಸಿದ ಪ್ರಧಾನಿ ಮೋದಿಯವರು ತೊಟ್ಟಿದ್ದ ವಿಶೇಷ ಪೇಟ ಎಲ್ಲರ ಗಮನ ಸೆಳೆದಿದೆ.ಪ್ರಧಾನಿ ಮೋದಿಯವರು ಪ್ರತೀ ಬಾರಿಯಂತೆ ಈ ಬಾರಿಯೂ ಕೂಡ ಸಾಂಪ್ರದಾಯಿಕ ಪೇಟ, ಕುರ್ತಾ ಹಾಗೂ ಜಾಕೆಟ್ ಧರಿಸಿದ್ದು, ಪ್ರಮುಖವಾಗಿ ಮೋದಿಯವರು ಧರಿಸಿದ್ದ ವಿಶೇಷ ಪೇಟ ನೆರೆದವರ ಆಕರ್ಶಣೆಗೆ ಕಾರಣವಾಯಿತು.ಕೇಸರಿ ಬಣ್ಣದ ವಿಭಿನ್ನ ವಿನ್ಯಾಸ ಹೊಂದಿರುವ ಪೇಟ ಇದೀಗ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದೆ.
ಮೋದಿಯವರು ಇಂದು ಧರಿಸಿದ್ದ ಪೇಟ ರಾಜಮನೆತನದ ಪೇಟವಾಗಿದೆ. ಗುಜರಾತ್ ನ ಜಮಾನಗರದ ರಾಜಮನೆತನದವರು ಪ್ರಧಾನಿ ಮೋದಿಗೆ ಉಡುಗೊರೆಯಾಗಿ ನೀಡಿದ ಪೇಟ ಇದಾಗಿದ್ದು,ಇದೇ ಮೊದಲ ಬಾರಿಗೆ ಈ ರಾಜಮನೆತನ ಹೊರಗಿನವರಿಗೆ ಪೇಟವನ್ನು ನೀಡಿದ್ದಾರೆ. ಈ ಪೇಟವನ್ನು ಇಂದು ಪ್ರಧಾನಿ ಮೋದಿ ತೊಟ್ಟಿದ್ದು, ಎಲ್ಲರ ಗಮನ ಸೆಳೆದಿದ್ದಾರೆ.
