-ಭಾರತ-ಚೀನಾ ಹೊಡೆದಾಟಗಡಿಯಲ್ಲಿ ಉದ್ವಿಗ್ನ ವಾತಾರಣ ಮುಂದುವರಿದಿರುವ ನಡುವೆಯೇ ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆಯಾಗಿದ್ದು, ಹಲವರು ಗಾಯಗೊಂಡಿರುವ ಘಟನೆ ಸಿಕ್ಕಿಂ ಗಡಿಯಲ್ಲಿ ನಡೆದಿದೆ.ಸಿಕ್ಕಿಂನ ನಾಕು ಲಾ ಪ್ರದೇಶದ ಅಂತಾರಾಷ್ಟ್ರೀಯ ಗಡಿಯಲ್ಲಿ ಎರಡೂ ದೇಶಗಳ ಸೈನಿಕರ ನಡುವೆ ಹೊಡೆದಾಟವಾಗಿದ್ದು, ಎರಡೂ ಕಡೆ ಸೈನಿಕರಿಗೆ ಗಾಯಗಳಾಗಿವೆ. ಎನ್ನಲಾಗಿದೆ.ಭಾರತ ಮತ್ತು ಚೀನಾ ನಡುವೆ ರಾಜಿ ಸಂಧಾನಕ್ಕಾಗಿ 9ನೇ ಸುತ್ತಿನ ಮಾತುಕತೆ ಇತ್ತೀಚೆಗೆ ನಡೆದಿದ್ದು, ಮತ್ತೊಂದು ಸುತ್ತಿನ ಮಾತುಕತೆಗೆ ಸಿದ್ಧತೆಗಳು ನಡೆದಿರುವ ಮಧ್ಯೆಯೇ ಈ ಘಟನೆ ನಡೆದಿರುವುದು ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಲು ಕಾರಣವಾಗಿದೆ.
Author: Nammur Express Admin
ಟ್ವೀಟ್ ಮಾಡಿರುವ ಪ್ರಧಾನಿ ಮೋದಿಯುವಕರಲ್ಲಿ ಜಾಗೃತಿ ಮೂಡಿಸುವ ದಿನವಾಗಿದೆ ಎಂದ ಪ್ರಧಾನಿನವದೆಹಲಿ: ಇಂದು ದೇಶದಲ್ಲಿ ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಚುನಾವಣಾ ಆಯೋಗದ ಸ್ಥಾಪನಾ ದಿನವನ್ನು ಗುರುತಿಸಲು ಜನವರಿ 25ನ್ನು ‘ರಾಷ್ಟ್ರೀಯ ಮತದಾರರ ದಿನ’ ಎಂದು ಆಚರಿಸಲಾಗುತ್ತದೆ. ಇಂದು ಚುನಾವಣಾ ಆಯೋಗವು ನೀಡಿದ ಮಹತ್ವದ ಕೊಡುಗೆಯನ್ನು ಸ್ಮರಿಸುವ ದಿನ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.”ರಾಷ್ಟ್ರೀಯ ಮತದಾರರ ದಿನವು ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತ್ತು ಚುನಾವಣೆಗಳನ್ನು ಸುಗಮವಾಗಿ ನಡೆಸಲು ಚುನಾವಣಾ ಆಯೋಗವು ನೀಡಿದ ಅದ್ಭುತ ಕೊಡುಗೆಯನ್ನು ಶ್ಲಾಘಿಸುವ ಸಂದರ್ಭವಾಗಿದೆ” ಎಂದು ಮೋದಿ ಟ್ವೀಟ್ ಮಾಡಿದ್ದು, ಈ ದಿನವೂ ಮತದಾರರ ನೋಂದಣಿಯನ್ನು ಖಾತರಿಪಡಿಸುವ ಅಗತ್ಯತೆಯ ಬಗ್ಗೆ, ಯುವಕರಲ್ಲಿ ಜಾಗೃತಿ ಮೂಡಿಸುವ ದಿನವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.
-ಮಾತಿನ ಮಲ್ಲಿಗೆ ಹುಟ್ಟು ಹಬ್ಬದ ಶುಭಾಶಯ-33ನೇ ವರ್ಷಕ್ಕೆ ಕಾಲಿಟ್ಟ ಅನುಶ್ರೀ ಖ್ಯಾತ ನಿರೂಪಕಿ, ನಟಿ, ಮಾತಿನ ಮಲ್ಲಿ ಅನುಶ್ರೀ ಇಂದು ತಮ್ಮ 33ನೇ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಮತ್ತು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ತಮ್ಮ ನಿರೂಪಣೆಯಿಂದ ಪ್ರೇಕ್ಷಕರ ಗಮನ ಸೆಳೆದಿದ್ದು, ರಾಜ್ಯದ ಮನೆಮಾತಾಗಿದ್ದಾರೆ. ಸಿನಿಮಾಗಳಲ್ಲೂ ಕೂಡ ನಟಿಸಿದ್ದಾರೆ.1988 ಜನವರಿ 25ರಂದು ಜನಿಸಿದ್ದು, ಇಂದು ತಮ್ಮ ಜನ್ಮದಿನದ ಸಂಭ್ರಮದಲ್ಲಿದ್ದಾರೆ.
-ಬಾಳೆ ಬೆಳೆಗಾರರ ಆದಾಯ ದ್ವಿಗುಣ-ಬಾಳೆಯಿಂದ ಬಟ್ಟೆ, ಔಷಧಿ ತಯಾರು ಯೋಜನೆ ಕೊಯಂಬತ್ತೂರು : ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಬಾಳೆ ತೋಟಗಾರಿಕೆ ಹೆಚ್ಚಾಗಿರುವುದರಿಂದ, ಕೃಷಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ, ಸರ್ಕಾರ ಹೊಸ ವಿಶೇಷ ಯೋಜನೆ ಹಾಕಿಕೊಂಡಿದೆ. ಬಾಳೆನಾರು ಮತ್ತು ಕಾಂಡವು ಔಷಧಿ ಗುಣವನ್ನು ಹೊಂದಿದ್ದು, ಜವಳಿ ಕೂಡ ತಯಾರಿಸಬಹುದಾಗಿದೆ. ಈ ನಿಟ್ಟಿನಲ್ಲಿ 400 ಕೋಟಿ ರೂ.ಗಳ ಸಂಶೋಧನೆ ಯೋಜನೆಯನ್ನು ತಮಿಳುನಾಡು ಸರ್ಕಾರ ಖಾಸಗಿ ಸಂಸ್ಥೆಗೆ ವಹಿಸಲಾಗಿದೆ. ಎಂದು ಮುಖ್ಯಮಂತ್ರಿ ಕೆ ಪುಳನಿಸ್ವಾಮಿ ತಿಳಿಸಿದ್ದಾರೆ. ಬಾಳೆ ಬೆಳೆ ಕಟಾವು ನಂತರ ಅದರ ಕಾಂಡ ಮತ್ತು ಒಣಗಿದ ಎಲೆಗಳಿಂದ ನಾರು ತಯಾರು ಮಾಡಬಹುದಾಗಿದೆ. ಬಾಳೆಯ ಕಾಂಡದಿಂದ ನಾರು ತಯಾರು ಮಾಡಿ ರಾಸಾಯನಿಕ ಮುಕ್ತ ಧೋತಿ ಮತ್ತು ಶರ್ಟುಗಳನ್ನು ತಯಾರು ಮಾಡಬಹುದು. ಗಿಡದ ಕಾಂಡ ಔಷಧಿ ಗುಣಗಳನ್ನು ಹೊಂದಿರುವುದರಿಂದ, ಕಾಂಡದಿಂದ ಔಷಧಿ ತಯಾರಿಕೆ ಯೋಜನೆಯನ್ನೂ ಸರ್ಕಾರ ಹಾಕಿಕೊಂಡಿದೆ. ಈ ಬಗ್ಗೆ ಇಸ್ರೋ ನಿರ್ದೇಶಕ ಅನಂದ ದೊರೈ ಅವರು ಈಗಾಗಲೇ ವಿವರವಾದ ವರದಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಒಮ್ಮೆ ಈ…
-ಟ್ರ್ಯಾಕ್ಟರ್ ಸಂಖ್ಯೆ ಕಡಿತಗೊಳಿಸಲು ರೈತ ಸಂಘಗಳಿಂದ ನಿರ್ಧಾರ ಬೆಂಗಳೂರು: ಕೃಷಿ ಕಾಯ್ದೆ ವಿರೋಧಿಸಿ ಜನವರಿ 26 ರಂದು ಬೆಂಗಳೂರಿನಲ್ಲೂ ಟ್ರ್ಯಾಕ್ಟರ್ ಪರೇಡ್ ನಡೆಸಲು ರಾಜ್ಯ ರೈತ ಸಂಘಟನೆಗಳು ನಿರ್ಧಾರ ಮಾಡಿದರೂ ಟ್ರ್ಯಾಕ್ಟರ್ಗಳ ಸಂಖ್ಯೆ ಕಡಿತಗೊಳಿಸಲು ಚಿಂತನೆ ನಡೆಸಿವೆ. ಆರಂಭದಲ್ಲಿ ಸುಮಾರು 2000 ಟ್ರ್ಯಾಕ್ಟರ್ಗಳ ಜೊತೆಗೆ ಮೆರವಣಿಗೆ ಮಾಡಲು ರೈತ ಸಂಘಟನೆಗಳು ನಿರ್ಧಾರ ಮಾಡಿದ್ದವು. ಆದರೆ ಪೊಲೀಸರ ಮನವಿ ಮೇರೆ 300 ರಿಂದ 500 ರಷ್ಟು ಟ್ರ್ಯಾಕ್ಟರ್ಗಳು ಪರೇಡ್ನಲ್ಲಿ ಭಾಗಿಯಾಗಲಿವೆ.ಬೆಂಗಳೂರಿನ ಐದು ದಿಕ್ಕುಗಳಿಂದ ಸುಮಾರು 2000 ಟ್ರ್ಯಾಕ್ಟರ್ಗಳ ಮೂಲಕ ಬೆಂಗಳೂರು ನಗರದಲ್ಲಿ ಪರೇಡ್ ನಡೆಸಲು ರೈತ ಸಂಘಟನೆಗಳು ನಿರ್ಧಾರ ಮಾಡಿದ್ದವು. ಆದರೆ 2000 ಕ್ಕೂ ಅಧಿಕ ಟ್ರ್ಯಾಕ್ಟರ್ಗಳ ಬೆಂಗಳೂರು ನಗರ ಪ್ರವೇಶ ಮಾಡಿದರೆ ಸಂಚಾರ ಸಮಸ್ಯೆ ಉಂಟಾಗಲಿದೆ ಎಂಬ ನಿಟ್ಟಿನಲ್ಲಿ ಪೊಲೀಸರು ಟ್ರ್ಯಾಕ್ಟರ್ಗಳ ಸಂಖ್ಯೆ ಕಡಿತಗೊಳಿಸುವಂತೆ ರೈತ ಸಂಘಟನೆಗಳ ಮುಖಂಡರ ಬಳಿ ಮನವಿ ಮಾಡಿದ್ದಾರೆ.
-ಖಾತೆ ಹಂಚಿಕೆಯಲ್ಲಿ ಬದಲಾವಣೆಯ ನಿರ್ಧಾರ ಕೈಗೊಂಡ ಸಿ.ಎಂ-ದಿನನಿತ್ಯ ಬದಲಾವಣೆ ತರುತ್ತಿರುವ ಅಸಮಾಧಾನದ ಸ್ಫೋಟ! ಬೆಂಗಳೂರು : ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಖಾತೆ ಹಂಚಿಕೆಯ ಬಗ್ಗೆ ಅಸಮಾಧಾನ ಸ್ಪೋಟಗೊಂಡ ನಂತರ ಹಲವು ಸಚಿವರ ಖಾತೆ ಅದಲು ಬದಲು ಮಾಡಿದ್ದರು. ಈಗಾಗಲೇ ಎರಡು ಬಾರಿ ಖಾತೆ ಅದಲು-ಬದಲು ಮಾಡಿರುವ ಸಿಎಂ, ಈಗ ಮತ್ತೆ ಖಾತೆ ಅದಲು-ಬದಲು ಮಾಡಿದ್ದಾರೆ. ಕೋವಿಡ್ ನಿಯಂತ್ರಣದ ಸಲುವಾಗಿ ಸಚಿವ ಡಾ.ಕೆ.ಸುಧಾಕರ್ ಅವರಿಂದ ಹಿಂಪಡೆದು, ಸಚಿವ ಮಾಧುಸ್ವಾಮಿಗೆ ನೀಡಲಾಗಿದ್ದಂತ ವೈದ್ಯಕೀಯ ಶಿಕ್ಷಣ ಖಾತೆಯನ್ನು ಮತ್ತೆ, ಸುಧಾಕರ್ ಅವರಿಗೆ ನೀಡಿದ್ದಾರೆ.ಈ ಮೂಲಕ ಸಚಿವ ಸುಧಾಕರ್ ಹೆಗಲಿದೆ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಖಾತೆಗಳ ಜವಾಬ್ದಾರಿ ಹೊರಿಸಿದ್ದು, ಆನಂದ್ ಸಿಂಗ್ ಅವರ ಖಾತೆಯನ್ನು ಕೂಡ ಬದಲು ಮಾಡಿ, ಸಿಎಂ ಯಡಿಯೂರಪ್ಪ ಬಳಿಯಲ್ಲಿದ್ದಂತಹ ಮೂಲ ಸೌಕರ್ಯ ಖಾತೆ ಜೊತೆಗೆ ಹಜ್ ಮತ್ತು ವಕ್ಫ್ ಖಾತೆ ನೀಡಲಾಗಿದೆ.
-2009ನೇ ವರ್ಷದಿಂದ ಭಾರತದಲ್ಲಿ ಪೋಲಿಯೋ ದಾಖಲಾಗದ ಪ್ರಕರಣಗಳೇ ಇಲ್ಲ.ಭಾರತದಂತ ಭವ್ಯ ರಾಷ್ಟ್ರದಲ್ಲಿ 2009ನೇ ವರ್ಷದಿಂದ ಯಾವುದೇ ಪೋಲಿಯೋ ಪ್ರಕರಣಗಳು ದಾಖಲಾಗದೆ ಇರುವುದು ಹೆಮ್ಮೆಯ ಸಂಗತಿ ಎಂದು ಜಿಲ್ಲಾಎನ್.ವಿ.ಬಿ.ಡಿ.ಸಿ.ಪಿ. ಅಧಿಕಾರಿ ಡಾ.ಭವಾನಿಶಂಕರ್ ತಿಳಿಸಿದರು. ತಾಲೂಕಿನಲ್ಲಿ ಜ.31ರಿಂದ ಫೆ.03ರ ವರೆಗೆ ನೆಡೆಯಲಿರುವ 2020-21ನೇ ಸಾಲಿನ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಜರುಗಲಿದ್ದು, 5 ವರ್ಷದೊಳಗಿನ ಮಕ್ಕಳನ್ನು ತಪ್ಪದೇ ಪೋಲಿಯೋ ಬೂತ್ಗಳಿಗೆ ಕರೆತಂದು ಪೋಲಿಯೋ ಲಸಿಕೆ ಹಾಕಿಸುವ ಮೂಲಕ ಭಾರತವನ್ನು ಪೋಲಿಯೋ ಮುಕ್ತ ರಾಷ್ಟ್ರವನಾಗಿ ಮಾಡಲು ಸಹಕರಿಸಲು ಮನವಿ ಮಾಡಿದರು ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ128 ಬೂತ್ಗಳು ಹಾಗೂ ನಗರ ಪ್ರದೇಶಗಳಲ್ಲಿ63 ಬೂತ್ಗಳನ್ನು ನಿರ್ಮಿಸಲಾಗಿದೆ. ತಾಲೂಕಿನಲ್ಲಿ5 ವರ್ಷದೊಳಗಿನ ಒಟ್ಟು 34,867 ಮಕ್ಕಳಿಗೆ ಲಸಿಕೆ ನೀಡುವ ಗುರಿ ಇದೆ ಎಂದು ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮಂಗಳ ತಿಳಿಸಿದರು.
-ಹತ್ತೇ ದಿನದಲ್ಲಿ ಭೂಗತ ಸುರಂಗದ ಪತ್ತೆ-ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ತೋಡಿರುವ ಸುರಂಗ ಜಮ್ಮು: ಗಡಿ ಭದ್ರತಾ ಪಡೆ (ಬಿಎಸ್ಎಫ್) ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ತೋಡಿರುವ ಸುರಂಗವೊಂದನ್ನು ಪತ್ತೆ ಹಚ್ಚಿದೆ. ಜಮ್ಮು-ಕಾಶ್ಮೀರದ ಹಿರಾನಗರ ಸೆಕ್ಟರ್ನ ಪಾನ್ಸಾರ ಭಾಗದಲ್ಲಿ ಈ ಸುರಂಗ ಕಾಣಿಸಿದ್ದು,ಭಾರತದ ಗಡಿಯ ಒಳಗೆ ನುಸುಳಲು ಉಗ್ರರು ಈ ಸುರಂಗ ಬಳಕೆ ಉಪಯೋಗಿಸುತ್ತಿದ್ದಾರೆ ಎನ್ನಲಾಗಿದೆ.ಈ ಹಿಂದೆ ಜನವರಿ 13ರಂದು ಹಿರಾನಗರ ಸೆಕ್ಟರ್ನ ಬೋಬಿಯಾನ ಗ್ರಾಮದಲ್ಲಿ 150 ಮೀಟರ್ ಉದ್ದದ ಟನೆಲ್ ಪತ್ತೆ ಆಗಿದ್ದು, ಇದೀಗ ಪತ್ತೆ ಆದ ಎರಡನೇ ಸುರಂಗ ಇದಾಗಿದೆ.ಈ ಸುರಂಗವು ಮೂರು ಮೀಟರ್ ಅಗಲ ಇದ್ದು, ನೇರವಾಗಿ ಪಾಕಿಸ್ತಾನವನ್ನು ಸಂಪರ್ಕ ಮಾಡುತ್ತಿತ್ತು. ಸದ್ಯ, ಈ ಭಾಗದಲ್ಲಿ ಶೋಧ ಕಾರ್ಯ ಮುಂದುವರಿದಿದ್ದು, ಯಾರಾದರೂ ಸುರಂಗ ಮೂಲಕ ಒಳ ನುಸುಳಿದ್ದಾರೆಯೇ ಎನ್ನುವುದನ್ನು ಸೇನೆ ಪತ್ತೆ ಹಚ್ಚುತ್ತಿದೆ. ಆರು ತಿಂಗಳಿಂದ ಇಲ್ಲಿಯವರೆಗೆ ಸು. 4 ರಹಸ್ಯ ಮಾರ್ಗಗಳನ್ನು ಸೇನೆ ಮುಚ್ಚಿದೆ.
-ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ನಡೆದ ಕ್ರೂರ ಘಟನೆ ತಿರುವನಂತಪುರಂ: ತಮಿಳುನಾಡಿನ ಊಟಿಯಲ್ಲಿ ದುಷ್ಕರ್ಮಿಗಳು ಆನೆಗೆ ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆಯ ಬೆನ್ನಲ್ಲೇ ಮತ್ತೊಂದು ಮೂಕ ಪ್ರಾಣಿಯ ಕೊಲೆ ಮಾಡಿರುವ ಘಟನೆ ಕೇರಳದಲ್ಲಿ ವರದಿಯಾಗಿದೆ. ಕಾಡಿನಲ್ಲಿ ಓಡಾಡಿಕೊಂಡಿದ್ದ ಚಿರತೆಯನ್ನು ಬಲೆ ಹಾಕಿ ಹಿಡಿದ ಪಾಪಿಗಳು ಅದರ ಮಾಂಸವನ್ನೂ ತಿಂದು ತೇಗಿದ್ದಾರೆ.ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಇಂತದ್ದೊಂದು ಕ್ರೂರ ಘಟನೆ ನಡೆದಿದೆ. ವಿನೋದ್ ಹೆಸರಿನ ವ್ಯಕ್ತಿಯ ಹೊಲದಲ್ಲಿ ಬಲೆ ಹಾಕಿಡಲಾಗಿದೆ. ಆ ಬಲೆಗೆ ಚಿರತೆ ಸಿಕ್ಕುಬಿದ್ದಿದೆ. ಅದನ್ನು ಕಂಡ ವಿನೋದ್, ತಕ್ಷಣ ತನ್ನ ಸ್ನೇಹಿತರಾದ ಕುರಿಕೋಸ್, ಬೀನು, ಕುಂಜಪ್ಪನ್ನನ್ನು ಕರೆಸಿಕೊಂಡಿದ್ದಾನೆ. ಎಲ್ಲರು ಒಟ್ಟಾಗಿ ಸೇರಿ ಚಿರತೆಯನ್ನು ಕೊಂದಿದ್ದಾರೆ. ಸುಮಾರು 50 ಕೆಜಿ ತೂಕವಿದ್ದ ಚಿರತೆಯ ಮಾಂಸವನ್ನು ಅಡುಗೆ ಮಾಡಿಕೊಂಡು ತಿಂದಿದ್ದಾರೆ. ಅದರ ಚರ್ಮ, ಉಗುರು, ಹಲ್ಲನ್ನು ತೆಗೆದಿಟ್ಟುಕೊಂಡಿದ್ದಾರೆ. ಅದನ್ನೆಲ್ಲ ಮಾರಾಟ ಮಾಡಿ ಹಣ ಸಂಪಾದಿಸುವ ಯೋಜನೆಯನ್ನೂ ಹಾಕಿಕೊಂಡಿದ್ದಾರೆ. ಈ ವಿಚಾರ ಅರಣ್ಯಾಧಿಕಾರಿಗಳಿ ತಿಳಿದುಬಂದಿದ್ದು, ತಕ್ಷಣವೇ ಆರೋಪಿಗಳನ್ನು ಬಂಧಿಸಲಾಗಿದೆ. ಅವರ ಬಳಿ ಇದ್ದ 10 ಕೆಜಿ…
ಮೇ ತಿಂಗಳಿನಲ್ಲಿ “PUC” ಜೂನ್ ನಲ್ಲಿ “SSLC” ಪರೀಕ್ಷೆ-ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿಕೆ ಬೆಂಗಳೂರು: ರಾಜ್ಯದಲ್ಲಿ ದ್ವೀತಿಯ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ಪರೀಕ್ಷೆಗಳಿಗೆ ದಿನಾಂಕಗಳನ್ನ ನಿಗದಿ ಮಾಡಲಾಗಿದ್ದು, ‘ಮೇ ಎರಡನೇ ವಾರದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಮತ್ತು ಜೂನ್ ಮೊದಲ ವಾರದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗಳನ್ನ ಆಯೋಜನೆ ಮಾಡಲಾಗುತ್ತೆ’ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಮಾತನಾಡಿದ ಸುರೇಶ್ ಕುಮಾರ್, ‘ಈಗಾಗಲೇ ಶೇಕಡಾ 30ರಷ್ಟು ಪಠ್ಯ ಕಡಿಮೆ ಮಾಡಲಾಗಿದೆ. ಮುಂದಿನ ತರಗತಿ ಕಲಿಕೆಗೆ ಕೊರತೆಯಾಗದಂತೆ ಪಠ್ಯ ವಿಷಯ ಕಡಿಮೆ ಮಾಡಿದ್ದೇವೆ. ಕೋವಿಡ್ ಕಾರಣದಿಂದ ಪರೀಕ್ಷೆಗೆ ಶಾಲಾ ಮಕ್ಕಳ ಹಾಜರಾತಿ ಕಡ್ಡಾಯವಲ್ಲ. ಇನ್ನು ಪರೀಕ್ಷೆಗಳನ್ನ ಯಾವ ರೀತಿ ನಡೆಸಬೇಕು ಅಂತ ಎಸ್ಎಸ್ಎಲ್ಸಿ ಮತ್ತು ಪಿಯು ಬೋಡ್೯ಗಳು ತೀಮಾ೯ನಿಸುತ್ತವೆ ಎಂದರು.