Categories
ಕೃಷಿ

ಕೃಷಿ ಕಾಯ್ದೆ ವಿರೋಧಿಸಿ ರೈತರ ಪರೇಡ್


-ಟ್ರ್ಯಾಕ್ಟರ್ ಸಂಖ್ಯೆ ಕಡಿತಗೊಳಿಸಲು ರೈತ ಸಂಘಗಳಿಂದ ನಿರ್ಧಾರ

ಬೆಂಗಳೂರು: ಕೃಷಿ ಕಾಯ್ದೆ ವಿರೋಧಿಸಿ ಜನವರಿ 26 ರಂದು ಬೆಂಗಳೂರಿನಲ್ಲೂ ಟ್ರ್ಯಾಕ್ಟರ್ ಪರೇಡ್ ನಡೆಸಲು ರಾಜ್ಯ ರೈತ ಸಂಘಟನೆಗಳು ನಿರ್ಧಾರ ಮಾಡಿದರೂ ಟ್ರ್ಯಾಕ್ಟರ್ಗಳ ಸಂಖ್ಯೆ ಕಡಿತಗೊಳಿಸಲು ಚಿಂತನೆ ನಡೆಸಿವೆ. ಆರಂಭದಲ್ಲಿ ಸುಮಾರು 2000 ಟ್ರ್ಯಾಕ್ಟರ್ಗಳ ಜೊತೆಗೆ ಮೆರವಣಿಗೆ ಮಾಡಲು ರೈತ ಸಂಘಟನೆಗಳು ನಿರ್ಧಾರ ಮಾಡಿದ್ದವು. ಆದರೆ ಪೊಲೀಸರ ಮನವಿ ಮೇರೆ 300 ರಿಂದ 500 ರಷ್ಟು ಟ್ರ್ಯಾಕ್ಟರ್ಗಳು ಪರೇಡ್ನಲ್ಲಿ ಭಾಗಿಯಾಗಲಿವೆ.
ಬೆಂಗಳೂರಿನ ಐದು ದಿಕ್ಕುಗಳಿಂದ ಸುಮಾರು 2000 ಟ್ರ್ಯಾಕ್ಟರ್ಗಳ ಮೂಲಕ ಬೆಂಗಳೂರು ನಗರದಲ್ಲಿ ಪರೇಡ್ ನಡೆಸಲು ರೈತ ಸಂಘಟನೆಗಳು ನಿರ್ಧಾರ ಮಾಡಿದ್ದವು. ಆದರೆ 2000 ಕ್ಕೂ ಅಧಿಕ ಟ್ರ್ಯಾಕ್ಟರ್ಗಳ ಬೆಂಗಳೂರು ನಗರ ಪ್ರವೇಶ ಮಾಡಿದರೆ ಸಂಚಾರ ಸಮಸ್ಯೆ ಉಂಟಾಗಲಿದೆ ಎಂಬ ನಿಟ್ಟಿನಲ್ಲಿ ಪೊಲೀಸರು ಟ್ರ್ಯಾಕ್ಟರ್ಗಳ ಸಂಖ್ಯೆ ಕಡಿತಗೊಳಿಸುವಂತೆ ರೈತ ಸಂಘಟನೆಗಳ ಮುಖಂಡರ ಬಳಿ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.