ಆರೋಗ್ಯ ಜ್ಯೋತಿ ಅವಾರ್ಡ್ಸ್ ಕರ್ನಾಟಕ -2024 ಪ್ರಶಸ್ತಿ
– ಅರೋಗ್ಯ ಕ್ಷೇತ್ರಗಳ ವಿವಿಧ ವಿಭಾಗಗಳ ಸಾಧಕರನ್ನು ಗುರುತಿಸಿ ಗೌರವ
– ಗಣ್ಯರ ಉಪಸ್ಥಿತಿಯಲ್ಲಿ 100ಕ್ಕೂ ಹೆಚ್ಚು ಸಾಧಕರಿಗೆ ಪ್ರಶಸ್ತಿ ಪ್ರದಾನ
NAMMUR EXPRESS NEW
ಬೆಂಗಳೂರು: ಸದಾ ಸಮಾಜಮುಖಿ ಸೇವೆಯಲ್ಲಿ ತೊಡಗಿಕೊಂಡಿರುವ ಪ್ರತಿಷ್ಠಿತ ಬೆಂಗಳೂರಿನ ರಾಘವಿ ಚಾರಿಟೇಬಲ್ ಟ್ರಸ್ಟ್ ಮತ್ತು ಸೇವಾ ಫೌಂಡೇಶನ್ ಮಾಲೀಕ ರಾಘವೇಂದ್ರ ಸುಂಟ್ರಹಳ್ಳಿ ಹಾಗೂ ಶ್ರೀ ಲಕ್ಷ್ಮೀ ಗ್ರೂಪ್ ಆಫ್ ಆಸ್ಪತ್ರೆಗಳು ಹಾಗೂ ಇನ್ನಿತರ ವೈದ್ಯಕೀಯ ಹಲವು ಸಂಸ್ಥೆಗಳ ಸಹಭಾಗಿತ್ವದಲ್ಲಿ ಆರೋಗ್ಯ ಕ್ಷೇತ್ರಗಳಲ್ಲಿನ ವಿವಿಧ ವಿಭಾಗಗಳ ಸಾಧಕರನ್ನು ಗುರುತಿಸಿ ನ.24 ರಂದು ಬೆಂಗಳೂರು ನಗರದ ಗಾಂಧಿ ಭವನದಲ್ಲಿ ಬೆಳಗ್ಗೆ10 ಗಂಟೆಗೆ ಆರೋಗ್ಯ ಜ್ಯೋತಿ ಅವಾರ್ಡ್ಸ್ ಕರ್ನಾಟಕ -2024 ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು. ಪ್ರಶಸ್ತಿ ಪ್ರದಾನವೂ ರಾಜ್ಯದಲ್ಲಿರುವ ಆಸ್ಪತ್ರೆಗಳಲ್ಲಿ 30ಕ್ಕೂ ಹೆಚ್ಚು ವಿಭಾಗದ ಸಿಬ್ಬಂದಿ ವರ್ಗಗಳ ವಿನೂತನ ಕಾರ್ಯಕ್ರಮ ಜರುಗಿದ್ದು, ಇದರಲ್ಲಿ ವಿಶೇಷವಾಗಿ ಆಯಮ್ಮಂದಿರು, ವಾರ್ಡ್ ಬಾಯ್, ಸೇರಿದಂತೆ ನರ್ಸಿಂಗ್, ಪ್ಯಾರಾ ಮೆಡಿಕಲ್ ಸಪೋರ್ಟಿಂಗ್ ಸ್ಟಾಪ್ , ಟೆಕ್ನಿಕಲ್ ಸ್ಟಾಫ್ ಹಾಗೂ ವೈದ್ಯರು ಸೇರಿದಂತೆ ಎಲ್ಲಾ ವಿಭಾಗಗಳನ್ನು ಗುರುತಿಸುವ ಬಹುದೊಡ್ಡ ಕಾರ್ಯಕ್ರಮ ನಡೆಸಲಾಯಿತು.
ಹಳ್ಳಿಯಿಂದ ಬಂದ ರಾಘವೇಂದ್ರ ಸುಂಟ್ರಹಳ್ಳಿ ಅವರ ಸಾಧನೆ ಹಾದಿ!
ರಾಘವೇಂದ್ರ ಸುಂಟ್ರಹಳ್ಳಿ, ಚಂದ್ರಗುತಿ ಹೋಬಳಿ,ಸೊರಬ ತಾಲೂಕು, ಶಿವಮೊಗ್ಗ ಜಿಲ್ಲಾ, ಒಬ್ಬ ಹಳ್ಳಿ ಹುಡುಗ ಬೆಂಗಳೂರು ಆಸ್ಪತ್ರೆಯಲ್ಲಿ ಉದ್ಯೋಗ ಮಾಡಿಕೊಂಡು,ಹಲವಾರು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು,ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳಿಗೂ ಭೇಟಿಯಾಗಿ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದಾರೆ. ಅದೇ ರೀತಿ ಆರೋಗ್ಯ ಕ್ಷೇತ್ರದಲ್ಲಿ ಹಲವಾರು ಉಚಿತ ಶಿಬಿರಗಳನ್ನು ಮಾಡುವುದರೊಂದಿಗೆ ರೋಗಿಗಳಿಗೆ ಸಹಕಾರ ಮಾಡಿದ್ದಾರೆ.
ಅರೋಗ್ಯ ಕ್ಷೇತ್ರದಲ್ಲಿ ಸೇವೆ ಮಾಡಿದವರಿಗೆ ಪ್ರಶಸ್ತಿ
ಆರೋಗ್ಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ರಾಜ್ಯದಲ್ಲಿರುವ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯ ಸಿಬ್ಬಂದಿಗಳಿಗಾಗಿ ರಾಘವಿ ಚಾರಿಟೇಬಲ್ ಟ್ರಸ್ಟ್ ಮತ್ತು ಸೇವಾ ಫೌಂಡೇಶನ್ ಮುಖೇನ ಆರೋಗ್ಯ ಜ್ಯೋತಿ ಅವಾರ್ಡ್ 2024 ಸುಮಾರು ನೂರಕ್ಕೂ ಹೆಚ್ಚು ಅವಾರ್ಡ್ ಗಳನ್ನ ಆನ್ಲೈನ್ ಅಪ್ಲಿಕೇಶನ್ ಮುಖಾಂತರ ಗುರುತಿಸಿ ಗೌರವಿಸಲಾಯಿತು.
ಪೂಜ್ಯ ಗುರುಗಳಾದ ಯೋಗೇಂದ್ರ ಶ್ರೀಗಳು,ಸಾಗರದ ಶಾಸಕರಾದ ಬೇಳೂರು ಗೋಪಾಲಕೃಷ್ಣ,ಸಚಿವರಾದ ದಿನೇಶ್ ಗುಂಡೂರಾವ್, ಪ್ರಿಯಾಂಕ ಉಪೇಂದ್ರ, ಕಾರುಣ್ಯ ರಾಮ್ , ಶ್ರೀ ಲಕ್ಷ್ಮಿ ಗ್ರೂಪ್ ಆಫ್ ಆಸ್ಪತ್ರೆಯ ಮಾಲೀಕರಾದ ಡಾ. ಸಾಂಬಶಿವ,ಡಿ ಜಯಮಾಲಾ ರವರು, ಇನ್ನು ಹಲವು ಗಣ್ಯ ವ್ಯಕ್ತಿಗಳ ಉಪಸ್ಥಿತಿಯಲ್ಲಿ ಅತ್ಯಂತ ಯಶಸ್ವಿನಿಂದ ಕಾರ್ಯಕ್ರಮ ಜರುಗಿತು.