ಹಬ್ಬಕ್ಕೆ ಬಸ್, ರೈಲು ಎಲ್ಲಾ ಫುಲ್ ರಶ್!
* ಹಬ್ಬದ ಪ್ರಯುಕ್ತ 1,500ಕ್ಕೂ ಹೆಚ್ಚು ವಿಶೇಷ ಬಸ್!
* ಹಬ್ಬಕ್ಕೆ ಹೊರಡುವಾಗ ಮೊದಲೇ ಪ್ಲಾನ್ ಮಾಡಿಕೊಳ್ಳಿ!
NAMMUR EXPRESS NEWS
ಬೆಂಗಳೂರು: ಊರಿಗೆ ತೆರಳಿ ಕುಟುಂಬ, ಬಂಧು ಬಾಂಧವರೊಂದಿಗೆ ಗೌರಿ ಗಣೇಶ ಹಬ್ಬ ಆಚರಿಸಬೇಕೆಂದುಕೊಂಡವರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಿಹಿ ಸುದ್ದಿ ನೀಡಿದೆ.
ಹಬ್ಬದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 5ರಿಂದ 7ರವರೆಗೆ ಬೆಂಗಳೂರಿನಿಂದ 1,500ಕ್ಕೂ ಹೆಚ್ಚು ವಿಶೇಷ ಬಸ್ಗಳನ್ನು ಓಡಿಸಲು ಮುಂದಾಗಿದೆ. ಕರ್ನಾಟಕ ಸಾರಿಗೆ, ರಾಜಹಂಸ, ಸ್ವೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್, ಇ.ವಿ. ಪವರ್ ಪ್ಲಸ್, ಅಂಬಾರಿ ಕ್ಲಬ್ ಕ್ಲಾಸ್, ಅಂಬಾರಿ ಉತ್ಸವ್ ಹಾಗೂ ಪಲ್ಲಕ್ಕಿ ಸಾರಿಗೆ ಸೇವೆಗಳೂ ಇರಲಿವೆ ಎಂದು ಕೆಎಸ್ಆರ್ಟಿಸಿ ತಿಳಿಸಿದೆ.
ಗೌರಿ ಹಬ್ಬ, ಗಣೇಶ ಚತುರ್ಥಿಗೆ ಊರಿಗೆ ತೆರಳುವವರ ಸಂಖ್ಯೆ ಹೆಚ್ಚಳವಾಗುವುದರಿಂದ ವಿಶೇಷ ಬಸ್ಗಳನ್ನು ಓಡಿಸಲಾಗುವುದು ಎಂದು ಕೆಎಸ್ಆರ್ಟಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಕೆಂಪೇಗೌಡ ಬಸ್ ನಿಲ್ದಾಣ, ಶಾಂತಿನಗರದ ಬಂಟಿಸಿ ಬಸ್ ನಿಲ್ದಾಣ ಹಾಗೂ ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ವಿಶೇಷ ಬಸ್ಗಳು ಸಂಚರಿಸಲಿವೆ.
ಮಂಗಳೂರು, ಧಾರವಾಡ, ಶಿವಮೊಗ್ಗ, ಬೆಳಗಾವಿ, ಮಡಿಕೇರಿ, ವಿಜಯಪುರ, ಗೋಕರ್ಣ, ಕಲಬುರಗಿ, ಧರ್ಮಸ್ಥಳ, ರಾಯಚೂರು, ಶೃಂಗೇರಿ, ಬಳ್ಳಾರಿ, ಹೊರನಾಡು, ಹುಬ್ಬಳ್ಳಿ, ಕುಕ್ಕೆ ಸುಬ್ರಹ್ಮಣ್ಯ, ದಾವಣಗೆರೆ, ಕೊಲ್ಲೂರು, ಕಾರವಾರ, ಹೊಸಪೇಟೆ ಸಹಿತ ಪ್ರಮುಖ ಸ್ಥಳಗಳಿಗೆ ಈ ಬಸ್ ಸೇವೆ ಲಭ್ಯವಿದೆ.
ಹಬ್ಬಕ್ಕೆ ಈಗಾಗಲೇ ಖಾಸಗಿ, ಸರ್ಕಾರಿ ಬಸ್ ಬುಕ್ ಆಗಿವೆ. ರೈಲು ಕೂಡ ರಶ್ ಆಗಿದೆ. ಭಾರೀ ಟ್ರಾಫಿಕ್ ಇರುವ ಕಾರಣ ಊರಿಗೆ ಹೋಗುವವರು ಈಗಲೇ ಪ್ಲಾನ್ ಮಾಡಿಕೊಂಡರೆ ಒಳ್ಳೆಯದು.