- ಹೆಣ ಇಟ್ಕೊಂಡು ಬೇರೆ ಹುಡ್ಗೀರ್ ರಾಸಲೀಲೆ
- ಯುವತಿಯ ಕುತ್ತಿಗೆ ಸೀಳಿ ಕೊಂದು ಮೃತದೇಹದ ಜೊತೆಗೆ ವಿಡಿಯೋ!
- ದೇಶದಲ್ಲಿ ಹೆಚ್ಚಾಯ್ತು ಕ್ರೂರ ಅಪರಾಧ
NAMMUR EXPRESS NEWS
ನವ ದೆಹಲಿ: ಮದುವೆಯಾಗಲು ಒತ್ತಾಯಿಸಿದಳು ಎನ್ನುವ ಕಾರಣಕ್ಕೆ ತನ್ನ ಪ್ರೇಯಸಿ ಶ್ರದ್ಧಾಳನ್ನು ಹತ್ಯೆಗೈದು 35 ತುಂಡು ಮಾಡಿದ್ದ ದೆಹಲಿಯ ಅಫ್ತಾಬ್ ಪೊನಾವಾಲನ ವಿರುದ್ಧ ದೇಶದಲ್ಲಿ ಕಿಚ್ಚು ಎದ್ದಿದೆ.
ಈ ನಡುವೆ ಆತನ ಮತ್ತಷ್ಟು ಲೈಂಗಿಕ ಹಪಾಹಪಿ, ದುಷ್ಕೃತ್ಯಗಳು ಬೆಳಕಿಗೆ ಬಂದಿವೆ. ಪ್ರೇಯಸಿ ದೇಹವನ್ನು ಕತ್ತರಿಸಿ ಫ್ರಿಡ್ಜ್ ನಲ್ಲಿ ಇಟ್ಟಿದ್ದ ಸಮಯದಲ್ಲೂ ಅಫ್ತಾಬ್ ಮತ್ತಷ್ಟು ಯುವತಿಯರ ಜೊತೆ ಡೇಟಿಂಗ್ ನಡೆಸಿ, ಅವರನ್ನು ಮನೆಗೆ ಕರೆತಂದು ಲೈಂಗಿಕ ಚಟುವಟಿಕೆ ನಡೆಸಿದ್ದ ಎಂಬ ವಿಷಯ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಶ್ರದ್ಧಾ ಹತ್ಯೆಯಾದ 15 – 20 ದಿನಗಳಲ್ಲಿ ಅಫ್ತಾಬ್ ಬಂಬಲ್ ಡೇಟಿಂಗ್ ಆಪ್ ನಲ್ಲಿ ಮತ್ತಷ್ಟು ಯುವತಿಯರ ಸ್ನೇಹ ಬೆಳೆಸಿದ್ದು ಪತ್ತೆಯಾಗಿದೆ.
ಯುವತಿಯ ಕತ್ತು ಸೀಳಿ ಶವದೊಂದಿಗೆ ವಿಡಿಯೋ
- ಪ್ರಿಯತಮನೇ ಕೊಲೆಗಾರನಾದ:
ಮಧ್ಯಪ್ರದೇಶದಲ್ಲಿ ವ್ಯಕ್ತಿಯೊಬ್ಬ ಯುವತಿಯ ಕುತ್ತಿಗೆ ಸೀಳಿ ಕೊಂದು, ಆಕೆಯ ಮೃತದೇಹದ ಜೊತೆಗೆ ವಿಡಿಯೋ ಚಿತ್ರೀಕರಿಸಿಕೊಂಡಿದ್ದಾನೆ. ಆ ವಿಡಿಯೋವನ್ನು ತಾನೇ ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದಾನೆ.
ಈ ಘಟನೆ ನಡೆದು 1 ವಾರ ಕಳೆದಿದ್ದರೂ ಶಿಲ್ಪಾ ಝರಿಯಾ ಎಂಬ 25 ವರ್ಷದ ಯುವತಿಯನ್ನು ಕತ್ತು ಸೀಳಿ ಕೊಲೆ ಮಾಡಿರುವುದಾಗಿ ವಿಡಿಯೋ ಅಪ್ಲೋಡ್ ಮಾಡಿರುವ ಅಭಿಜಿತ್ ಪಾಟಿದಾರ್ಗಾಗಿ ಪೊಲೀಸರು ಇನ್ನೂ ಹುಡುಕಾಟ ನಡೆಸುತ್ತಲೇ ಇದ್ದಾರೆ. ಜಬಲ್ಪುರದ ಮೇಖಾ ರೆಸಾರ್ಟ್ನಲ್ಲಿರುವ ಕೊಠಡಿಯಿಂದ ಆ ಯುವತಿಯ ಶವವನ್ನು ವಶಪಡಿಸಿಕೊಳ್ಳಲಾಗಿದೆ.
ಯಾರೂ ನಂಬಿಕೆಗೆ ದ್ರೋಹ ಮಾಡಬೇಡಿ ಎಂದು ಆ ವ್ಯಕ್ತಿ ಆಕ್ರೋಶದಿಂದ ಆ ಹೆಣದೊಂದಿಗೆ ವಿಡಿಯೋ ಶೂಟ್ ಮಾಡಿದ್ದಾನೆ. ನಿಮ್ಮ ಮೇಲಿಟ್ಟ ನಂಬಿಕೆಗೆ ಮೋಸ ಮಾಡಬೇಡಿ ಎಂದು ಹೇಳುವ ಆ ಯುವಕ ಹಾಸಿಗೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವತಿಯ ಶವವನ್ನು ತೋರಿಸುತ್ತಾನೆ. ಆಕೆಯ ಕುತ್ತಿಗೆ ಸೀಳಿ ಕೊಂದಿರುವುದು ಆ ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತದೆ.
ಮೂಲಗಳ ಪ್ರಕಾರ, ಪಾಟ್ನಾದ ವ್ಯಾಪಾರಿಯಾಗಿರುವ ಅಭಿಜಿತ್ ಗೆಳೆಯ ಜಿತೇಂದ್ರ ಆ ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಆಕೆ ಜಿತೇಂದ್ರ ಅವರಿಂದ ಸುಮಾರು 12 ಲಕ್ಷ ರೂ. ಸಾಲ ಪಡೆದು ಜಬಲ್ಪುರಕ್ಕೆ ಪರಾರಿಯಾಗಿದ್ದಳು. ಹೀಗಾಗಿ, ಜಿತೇಂದ್ರನ ಸೂಚನೆ ಮೇರೆಗೆ ಆ ಯುವತಿಯನ್ನು ಅಭಿಜಿತ್ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಪೊಲೀಸ್ ಸೈಬರ್ ಸೆಲ್ ಜೊತೆಗೆ 4 ವಿಶೇಷ ತಂಡಗಳು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.