ನಾಯಿಯ ಅಳು ಕೆಟ್ಟ ಶಕುನವೇ?!
• ನೈಸರ್ಗಿಕ ವಿಕೋಪ ಘಟನೆಗಳ ಗ್ರಹಿಕೆ ನಾಯಿಗೆ ಸಾಧ್ಯ!
• ನಾಯಿಗಳು ರಾತ್ರಿ ಅತ್ತರೆ ಕಷ್ಟ ಬರುತ್ತಾ?
NAMMUR EXPRESS NEWS
ಬೆಂಗಳೂರು: ಸಾಮಾನ್ಯವಾಗಿ ನಾಯಿಗಳು ರಾತ್ರಿ ವೇಳೆ ಕೆಟ್ಟದ್ದಾಗಿ ಕೂಗುತ್ತವೆ. ಇದನ್ನು ಹಿರಿಯರು ಕೆಟ್ಟ ಶಕುನ ಎಂದು ಭಾವಿಸುತ್ತಾರೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಾಯಿಗಳ ಅಳುವುದು, ಆರ್ಥಿಕ ನಷ್ಟವನ್ನು ಸೂಚಿಸುತ್ತದೆ. ಭವಿಷ್ಯದಲ್ಲಿ ಕೆಲವು ಕೆಲಸಗಳಿಂದ ನಷ್ಟವಾಗುವ ಸಾಧ್ಯತೆಯಿದೆ ಎಂಬುವುದನ್ನು ತಿಳಿಸುತ್ತದೆ.
ಮನೆಯ ಹೊರಗೆ ನಾಯಿ ಅಳುತ್ತಿದ್ದರೆ, ಅವರು ಕೆಲವು ಕೆಟ್ಟ ಸುದ್ದಿಗಳನ್ನು ಕೇಳಬೇಕಾಗುತ್ತದೆ. ಮನೆಯ ಸುತ್ತಲೂ ನಕಾರಾತ್ಮಕ ಶಕ್ತಿ ಇದ್ದರೂ ನಾಯಿಗಳು ಕೂಗುತ್ತವೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.
ನಾಯಿಗಳು ಮುಂಬರುವ ನೈಸರ್ಗಿಕ ಘಟನೆಗಳನ್ನು ಮುಂಚಿತವಾಗಿ ಗ್ರಹಿಸಬಲ್ಲವು ಎಂದು ಸಹ ಹೇಳಲಾಗುತ್ತದೆ.
ಭೂಕಂಪ, ನೈಸರ್ಗಿಕ ವಿಕೋಪ ಸೇರಿ ಕೆಟ್ಟ ಘಟನೆಗಳು ಘಟಿಸುವ ಬಗ್ಗೆ ನಾಯಿಗಳಿಗೆ ಗೊತ್ತಾಗುತ್ತದಂತೆ. ಹಾಗಾಗಿ ನಾಯಿಗಳು ಮುಂಚಿತವಾಗಿ ಅಳಲು ಪ್ರಾರಂಭಿಸುತ್ತವೆ ಎಂದು ಹೇಳಲಾಗುತ್ತದೆ. ಕೆಲವು ನಂಬಿೆಗಳ ಪ್ರಕಾರ, ನಾಯಿಗಳು ತಮಮ ಸುತ್ತಲೂ ಕೆಲವು ದುಷ್ಟ ಶಕ್ತಿಗಳು ಇದ್ದಾಗ ಹೆಚ್ಚು ಅಳುತ್ತವೆ ಎಂದು ಸಹ ಹೇಳಲಾಗುತ್ತದೆ. ಅದಕ್ಕಾಗಿಯೇ ಮನೆಯ ಸುತ್ತಲೂ ನಾಯಿಗಳು ಅಳುತ್ತಿದ್ದರೆ ಅವುಗಳನ್ನು ಅಲ್ಲಿಂದ ಓಡಿಸುತ್ತಾರೆ. ಆದರೆ ನಾಯಿ ಅಳುವುದು ಒಳ್ಳೆಯದಲ್ಲ ಎಂದು ಹಿರಿಯರು ಹೇಳುತ್ತಾರೆ. ರಾತ್ರಿಯಲ್ಲಿ ನಾಯಿಗಳು ಅಳುವುದನ್ನು ಕೆಟ್ಟ ಶಕುನವೆಂದು ಪರಿಗಣಿಸಲಾಗುತ್ತದೆ.