ಕರೋನಾ ವೇಳೆ ಅಕ್ರಮದ ನ್ಯಾಯಾಂಗ ತನಿಖೆ!
– ಆರೋಗ್ಯ ಇಲಾಖೆ ಅಧಿಕಾರಿಗಳು, ಆಗಿನ ಸಚಿವ ಸುಧಾಕರ್ ಎದೆಯಲ್ಲಿ ಢವ ಢವ
– ಆಗ ನಡೆದಿತ್ತಾ ಭಾರೀ ಗೋಲ್ ಮಾಲ್..?
NAMMUR EXPRESS NEWS
ಬೆಂಗಳೂರು: ಕರೋನಾ ಸಂದರ್ಭದಲ್ಲಿ ನಡೆದ ಅಕ್ರಮದ ತನಿಖೆಗೆ ಸರ್ಕಾರ ಮುಂದಾಗಿದ್ದು, ಸರ್ಕಾರದ ಮಾಜಿ ಆರೋಗ್ಯ ಸಚಿವ ಡಾ.ಸುಧಾಕರ್ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ಎದೆಯಲ್ಲಿ ನಡುಕ ಆರಂಭವಾಗಿದೆ.
ಕೋವಿಡ್ ಅಕ್ರಮದ ಬೆನ್ನು ಬಿದ್ದಿರುವ ಸಿದ್ದರಾಮಯ್ಯ ಸರ್ಕಾರ ತನಿಖೆಗೆ ಆದೇಶಿಸಿದೆ. ಈ ಮಧ್ಯೆ ಆರೋಗ್ಯ ಇಲಾಖೆಯಿಂದ ಅಕ್ರಮದ ಟರ್ಮ್ಸ್ ರೆಫೆರೆನ್ಸ್ ವರದಿ ಸಲ್ಲಿಕೆಯಾಗಿದೆ. ಈ ವರದಿಯಲ್ಲಿ ಕೊವಿಡ್ ಟಾಪ್ 5 ಹಗರಣಗಳ ಆರೋಪದ ಕುರಿತು ಮಾಹಿತಿ ನೀಡಲಾಗಿದೆ. ಸಿದ್ಧರಾಮಯ್ಯನವರು ನಿವೃತ್ತ ಜಡ್ಜ್ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಆದೇಶ ಮಾಡಿದ್ದರು.ಈ ಹಿನ್ನೆಲೆ ಆರೋಗ್ಯ ಇಲಾಖೆಗೆ ಟರ್ಮ್ಸ್ ರೆಫೆರೆನ್ಸ್ ವರದಿ ಸಲ್ಲಿಕೆಗೆ ಸೂಚನೆ ನೀಡಲಾಗಿತ್ತು.ಈ ಬಗ್ಗೆ ತನಿಖೆ ಶುರುವಾಗಿದ್ದು ಈಗ ಆರೋಗ್ಯ ಇಲಾಖೆಯಿಂದ ಟರ್ಮ್ಸ್ ರೆಫೆರೆನ್ಸ್ ವರದಿ ನೀಡಿದೆ.
ವರದಿಯಲ್ಲಿ ಏನೇನಿದೆ?
1. ಪಿಪಿಇ ಕಿಟ್ ಖರೀದಿ ಅವ್ಯವಹಾರದ ಬಗ್ಗೆ ಮಾಹಿತಿ
2. ಕೊವಿಡ್ ಅವಧಿಯಲ್ಲಿನ ಔಷಧಿ ಖರೀದಿ ಕುರಿತು
ವರದಿ ಸಲ್ಲಿಕೆ
3. ಟೆಸ್ಟಿಂಗ್ ಕಿಟ್ ಹಾಗೂ ಗೋಲ್ ಮಾಲ್
4 . ಆಸ್ಪತ್ರೆಯ ಬೆಡ್ ಉಪಕರಣಗಳ ಖರೀದಿ
5 . ಆಕ್ಸಿಜನ್ ಹಾಗೂ ಆಕ್ಸಿಜನ್ ಖರೀದಿ ಘಟಕಗಳ ಲೋಪದೋಷ ಹಾಗೂ ಹೆಚ್ಚುವರಿ ಉಪಕರಣಗಳ ಖರೀದಿ ವಿಚಾರದಲ್ಲಿನ ಅವ್ಯವಹಾರದ ತನಿಖೆಗೆ ವರದಿ.
ಹೀಗೆ ಸವಿಸ್ತಾರವಾಗಿ ಯಾವೆಲ್ಲ ವಿಚಾರಗಳಲ್ಲಿ ಅವ್ಯವಹಾರ ನಡೆದಿದೆ ಎಂಬುದನ್ನು ಉಲ್ಲೇಖಿಸಿ ಆರೋಗ್ಯ ಇಲಾಖೆ ಟರ್ಮ್ಸ್ ಹಾಗೂ ರೆಫೆರೆನ್ಸ್ ವರದಿಯನ್ನ ನ್ಯಾಯಂಗ ಸಮಿತಿಗೆ ಸಲ್ಲಿಕೆ ಮಾಡಿದೆ. ಈ ಪ್ರಮುಖ 5 ಅಂಶಗಳ ಜೊತೆಗೆ ಇನ್ನೂ ಅನೇಕ ವರದಿಗಳನ್ನು ಸೇರಿಸಿ ಪ್ರಸ್ತಾಪ ಆರೋಗ್ಯ ಇಲಾಖೆ ಪ್ರಸ್ತಾಪ ಕಳುಹಿಸಿದೆ. ಈ ಎಲ್ಲ ವಿಚಾರಗಳು ತನಿಖೆಗೆ ಒಳಪಡ್ತಿರೋದು ಬಿಜೆಪಿ ಅವಧಿಯಲ್ಲಿ ಹಾಗೂ ಕೊರೋನಾ ಸಂದರ್ಭದಲ್ಲಿ ಅವ್ಯಹಾರ ಎಸಗಿದ ಅಧಿಕಾರಿಗಳ ಎದೆಯಲ್ಲಿ ನಡುಕ ಮೂಡಿಸಿದೆ.