1000 ಕೋಟಿಯತ್ತ ಕಾಂತಾರ ಚಾಪ್ಟರ್ -1
* 8 ದಿನದಲ್ಲೇ 500 ಕೋಟಿ ಕ್ಲಬ್ ಸೇರಿದ ಸಿನಿಮಾ
* ದೇವಸ್ಥಾನಕ್ಕೆ ಭೇಟಿ ಕೊಟ್ಟ ರಿಷಭ್ ಶೆಟ್ಟಿ
* 2ನೇ ವಾರವೂ ರಾಜ್ಯದಲ್ಲಿ ಎಲ್ಲಾ ಕಡೆ ಅದೇ ಜೋಷ್
NAMMMUR EXPRESS NEWS
ಬೆಂಗಳೂರು: ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಸಿನಿಮಾ ವ್ಯಾಪಕವಾಗಿ ಮೆಚ್ಚುಗೆ ಗಳಿಸುತ್ತಿದೆ. ಸಿನಿಮಾಗೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿರುವುದಷ್ಟೇ ಅಲ್ಲದೆ ಬಾಕ್ಸ್ ಆಫೀಸ್ ಕಲೆಕ್ಷನ್ ಏರುತ್ತಲೇ ಇದೆ. ಸಿನಿಮಾ ಮೊದಲ ದಿನವೇ 89 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಸಿನಿಮಾ ಬಿಡುಗಡೆಗೊಂಡ ಒಂದೇ ವಾರದಲ್ಲಿ ಕಾಂತಾರದ ದಾಖಲೆ ಮುರಿದು,ಇದೀಗ ಮೂವಿ 8 ದಿನದಲ್ಲಿ 500 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ 1000 ಕೋಟಿಯತ್ತ ಮುನ್ನುಗ್ಗುತ್ತಿದೆ.
* ಪೋಸ್ಟರ್ ಶೇರ್ ಮಾಡಿಕೊಂಡ ಹೊಂಬಾಳೆ ಫಿಲ್ಮ್ಸ್
ಹೊಂಬಾಳೆ ಫಿಲ್ಮ್ಸ್ ಪೋಸ್ಟರ್ ಶೇರ್ ಮಾಡಿಕೊಂಡಿದ್ದು ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಅಪ್ಡೇಟ್ ಅನ್ನು ಜನರೊಂದಿಗೆ ಶೇರ್ ಮಾಡಿದೆ. 8 ದಿನಗಳಲ್ಲಿ ಸಿನಿಮಾ 509.25 ಕೋಟಿ ರೂಪಾಯಿ ಗಳಿಸಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ರಿಲೀಸ್ ಆಗಿ 12 ದಿನ ಕಳೆದರು ಕೂಡಾ ಸಿನಿಮಾಗೆ ಜನರ ಕ್ರೇಜ್ ಕಡಿಮೆಯಾಗಿಲ್ಲ. ಸಿನಿಮಾ ಟಿಕೆಟ್ ಕೂಡಾ ಎಲ್ಲೂ ಸಿಗದಷ್ಟರ ಮಟ್ಟಿಗೆ ಜನರು ಬಂದು ಸಿನಿಮಾ ನೋಡುತ್ತಿದ್ದಾರೆ.
* ದೇವಸ್ಥಾನಕ್ಕೆ ಭೇಟಿ ಕೊಟ್ಟ ನಟ ರಿಷಬ್
ಸಿನಿಮಾ 500 ಕೋಟಿ ಕ್ಲಬ್ ಸೇರಿದ ಬೆನ್ನಲ್ಲೇ ರಿಷಬ್ ಶೆಟ್ಟಿ ಇತ್ತೀಚೆಗೆ ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ಕೊಟ್ಟರು. ಸಿನಿಮಾ ಬಿಡುಗಡೆಯಾದ ನಂತರ ಅವರು ಪ್ರಚಾರದ ಜೊತೆ ದೇವಸ್ಥಾನಕ್ಕೂ ಭೇಟಿ ಕೊಡುತ್ತಿದ್ದಾರೆ. ತಮ್ಮ 2022 ರ ಹಿಟ್ ಚಿತ್ರದ ಪ್ರೀಕ್ವೆಲ್ ಚಿತ್ರವಾದ ಕಾಂತಾರ ಅಧ್ಯಾಯ 1 ರ ಯಶಸ್ಸಿನ ಸಂಭ್ರಮದಲ್ಲಿದ್ದಾರೆ.
ಸಿನಿಮಾ ಬಿಡುಗಡೆಗೂ ಮೊದಲು ದಾಖಲೆಯ ಲಾಭದಲ್ಲಿದ್ದ ಕಾಂತಾರ 1 ಸಿನಿಮಾ 120 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಿದ್ದು , ಪ್ರೈಮ್ 125 ಕೋಟಿಗೆ ಖರೀಸಿದಿಸಿ ಈಗಾಗಲೇ ಲಾಭದಲ್ಲಿದೆ. ಇದಿಷ್ಟೇ ಅಲ್ಲ ಡಿಜಿಟಲ್ ಮತ್ತು ಸ್ಯಾಟಲೈಟ್ ತಮಿಳು, ತೆಲುಗು , ಮಲೆಯಾಳಂ ಡಿಸ್ಟ್ರಿಬ್ಯೂಷನ್ ರೈಟ್ಸ್ ಎಲ್ಲವೂ ಸೇರಿ ಈಗಾಗಲೇ 400 ಕೋಟಿ ದಾಖಲೆ ಬರೆದಿತ್ತು.
ಇದೀಗ ಕಾಂತಾರ 1 ಪ್ರಪಂಚದಾದ್ಯಂತ 600 ಕೋಟಿ ದಾಟಿ ಕಲೆಕ್ಷನ್ ಮಾಡೋ ಮೂಲಕ ಮುನ್ನುಗ್ಗುತ್ತಿದೆ. ಇದರ ಜೊತೆಗೆ ರಿಷಬ್ ಶೆಟ್ಟಿ ಎರಡು ಬಾರಿ 400 ಕೋಟಿ ಕಲೆಕ್ಷನ್ ಮಾಡಿ ಗೆದ್ದ ಮೊದಲ ನಟ ಅನ್ನೋ ದಾಖಲೆ ಬರೆದಿದ್ದಾರೆ.
ಕಾಂತಾರ ಚಾಪ್ಟರ್ ಒನ್ ಚಿತ್ರದ ಒಂದು ಸ್ಪೆಷಲ್ ಸ್ಕ್ರೀನಿಂಗ್ ಆಗಿದೆ. ಮುಂಬೈಯಲ್ಲಿಯೇ ಆದ ಈ ಸ್ಕ್ರೀನಿಂಗ್ ಬಳಿಕ ಪಾರ್ಟಿ ಕೂಡ ನಡೆದಿದೆ. ಈ ಪಾರ್ಟಿಯನ್ನ ಬಾಲಿವುಡ್ ನಟ ಸುನೀಲ್ ಶೆಟ್ಟಿ ಕೊಟ್ಟಿದ್ದಾರೆ. ಸುನೀಲ್ ಶೆಟ್ಟಿ ಕೊಟ್ಟಿರೋ ಪಾರ್ಟಿಗೆ, ರಿಷಬ್ ಶೆಟ್ರು ಮತ್ತು ಪ್ರಗತಿ ಶೆಟ್ರು ತಮ್ಮ ಎಂದಿನ ಸಾಂಪ್ರದಾಯಿಕ ಉಡುಪಿನಲ್ಲಿಯೇ ಹೋಗಿದ್ದಾರೆ. ಕಾಂತಾರ ಟೀಮ್ನ ಇತರ ಸದಸ್ಯರಿಗೂ ಈ ಪಾರ್ಟಿಗೆ ಆಹ್ವಾನ ಇತ್ತು.
ಒಟ್ಟಿನಲ್ಲಿ ಯಶಸ್ವಿ ಪ್ರದರ್ಶನಗೊಂಡು 1000 ಕೋಟಿಯತ್ತ ದಾಪುಗಾಲಿಟ್ಟುರುವ ಕಾಂತಾರ ಚಾಪ್ಟರ್ 1,ಹಲವು ದಾಖಲೆಗಳನ್ನು ಪುಡಿ ಮಾಡಿ ಈ ವರ್ಷದ ದೊಡ್ಡ ಸಿನಿಮಾವಾಗಿ ಹೊಸ ದಾಖಲೆಗಳನ್ನು ಬರೆದಿದೆ. ‘ಛಾವಾ’ ಚಿತ್ರದ ದಾಖಲೆಯನ್ನು ಮುರಿಯಲು ಇನ್ನು ಕೇವಲ 400 ಕೋಟಿಯಷ್ಟೇ ಬಾಕಿಯಿದೆ.








