- ಖಡಕ್ ವಾರ್ನಿಂಗ್ಗೆ ಸಚಿವ ಮುನಿರತ್ನ ಯೂಟರ್ನ್
- ಉರಿಗೌಡ-ನಂಜೇಗೌಡ ಸಿನಿಮಾಗೆ ಬ್ರೇಕ್
- ಕೇಸ್ ಕೊಡಲು ಬಂದವಳನ್ನೇ ರೂಂಗೆ ಕರೆದ ಇನ್ಸ್ ಪೆಕ್ಟರ್!
NAMMUR EXPRESS NEWS
ಬೆಂಗಳೂರು: ನಿರ್ಮಲಾನಂದನಾಥಶ್ರೀಗಳು ಸಚಿವ ಮುನಿರತ್ನಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದು, ಸ್ವಾಮೀಜಿ ಖಡಕ್ ವಾರ್ನಿಂಗ್ಗೆ ಮುನಿರತ್ನ ಯೂಟರ್ನ್ ಹೊಡೆದಿದ್ಧಾರೆ.
ಉರಿಗೌಡ-ನಂಜೇಗೌಡ ಸಿನಿಮಾಗೆ ಬ್ರೇಕ್ ಹಾಕಲಾಗಿದೆ. ಈ ಸಿನಿಮಾ ಭಾರೀ ಕೋಲಾಹಲಕ್ಕೆ ಕಾರಣವಾಗಿತ್ತು. ಉರಿಗೌಡ-ನಂಜೇಗೌಡ ಸಿನಿಮಾ ವಿರುದ್ಧ ಒಕ್ಕಲಿಗರು ಆಕ್ರೋಶಗೊಂಡಿದ್ದರು. ಒಕ್ಕಲಿಗ ಮುಖಂಡರು ಚುಂಚನಗಿರಿ ಸ್ವಾಮೀಜಿಗೆ ದೂರು ನೀಡಿದ್ದಾರೆ. ಯಾವುದೇ ಕಾರಣಕ್ಕೂ ಸಿನಿಮಾ ಮಾಡದಂತೆ ಸೂಚಿಸಲು ಆಗ್ರಹಿಸಿದ್ದರು, ಕೇವಲ ಜಾಹಿರಾತಿಗಷ್ಟೇ ಸೀಮಿತವಾದ ಉರಿಗೌಡ-ನಂಜೇಗೌಡ ಸಿನಿಮಾವಾಗಿದೆ.
ಒಕ್ಕಲಿಗರ ಆಕ್ರೋಶ, ನಿರ್ಮಲಾನಂದನಾಥಶ್ರೀಗಳ ವಾರ್ನಿಂಗ್ಗೆ ಯೂಟರ್ನ್ ಹೊಡೆದಿದ್ದು, ಉರಿಗೌಡ-ನಂಜೇಗೌಡ ಸಿನಿಮಾ ಮಾಡದೇ ಇರಲು ನಿರ್ಧಾರ ಮಾಡಿದ್ದಾರೆ. ಮುನಿರತ್ನ ಕೆಲ ಹೊತ್ತಿನ ಹಿಂದೆ ಶ್ರೀಗಳನ್ನು ಭೇಟಿಯಾಗಿದ್ದರು.
ಕೇಸ್ ಕೊಡಲು ಬಂದವಳನ್ನೇ ರೂಂಗೆ ಕರೆದ ಇನ್ಸ್ ಪೆಕ್ಟರ್: ರಾಜಧಾನಿಯಲ್ಲಿ ಕೇಸ್ ಕೊಡಲು ಬಂದವಳನ್ನೇ ಇನ್ಸ್ ಪೆಕ್ಟರ್ ರೂಂಗೆ ಕರೆದಿದ್ದಾರೆ. ಮಗಳ ವಯಸ್ಸಿನ ಯುವತಿ ಮೇಲೆ ಇನ್ಸ್ ಪೆಕ್ಟರ್ ಕಣ್ಣು ಬಿದ್ದಿದೆ. ಆ ಮಹಿಳೆ
ಚಾಟಿಂಗ್ ಸಮೇತ ಇನ್ಸ್ ಪೆಕ್ಟರ್ ಮೇಲೆ DCPಗೆ ದೂರು ನೀಡಿದ್ದಾರೆ. ಕೊಡಿಗೆಹಳ್ಳಿ ಠಾಣೆ ಇನ್ಸ್ ಪೆಕ್ಟರ್ ರಾಜಣ್ಣ ಮೇಲೆ ದೂರು ದಾಖಲಾಗಿದೆ.
ಠಾಣೆಯಲ್ಲೇ ಇನ್ಸ್ಪೆಕ್ಟರ್ ರೂಂ ಕೀ, ಡ್ರೈ ಫ್ರೂಟ್ಸ್ಟ್ ಕವರ್ ಕೊಟ್ಟಿದ್ದಾರೆ. ಯುವತಿ ವೀರೇಂದ್ರ ಬಾಬುಗೆ 15 ಲಕ್ಷ ಹಣ ಕೊಟ್ಟು ಮೋಸ ಹೋಗಿದ್ದರು. ಹಾಗಾಗಿ ಯುವತಿ ವಂಚನೆ ಮಾಡಿದ್ದಾನೆ ಎಂದು ಕೊಡಿಗೆಹಳ್ಳಿ ಠಾಣೆಗೆ ಬಂದಿದ್ದರು. ಈ ವೇಳೆ ಇನ್ಸ್ಪೆಕ್ಟರ್ ರಾಜಣ್ಣ ಯುವತಿಯ ಫೋನ್ ನಂಬರ್ ಪಡೆದಿದ್ದು, ಪದೇ ಪದೇ ಮೀಟ್ ಮಾಡು ಬಾ ಎಂದು ಪುಸಲಾಯಿಸಿದ್ದರು.
ಕಳೆದ ತಿಂಗಳು 24ರಂದು ಠಾಣೆಗೆ ಬಂದಾಗ ಯುವತಿಗೆ ಆಮಿಷ ಒಡ್ಡಿದ್ದು, ನೀನು ರೂಮಿಗೆ ಹೋಗಿರು ನಾನು ಬರ್ತಿನಿ ಎಂದು ರಾಜಣ್ಣ ಹೇಳಿದ್ದಾರೆ. ರಾಜಣ್ಣ ಪತ್ನಿಯಿಂದ ದೂರವಾಗಿ ಒಬ್ಬಂಟಿಯಾಗಿದ್ದು, ಕೀ ಕವರ್ ಕೊಟ್ಟ ಕೂಡಲೇ ಯುವತಿ ಕಣ್ಣೀರು ಹಾಕುತ್ತಾ ಠಾಣೆಯಿಂದ ಓಡಿದ್ದಾರೆ. ಯುವತಿ ಮಹಿಳಾ ಸಬ್ ಇನ್ಸ್ ಪೆಕ್ಟರ್ ಗೆ ಕರೆ ಮಾಡಿ ಈ ವಿಚಾರ ತಿಳಿಸಿದ್ದು, ಈ ವಿಚಾರ ಇಲ್ಲಿಗೇ ಬಿಟ್ಟುಬಿಡಿ ದೊಡ್ಡದಾಗುತ್ತೆ ಎಂದು ಲೇಡಿ ಪಿಎಸ್ಐ ಹೇಳಿದ್ದಾರೆ. ಯುವತಿ ಚಿಕ್ಕಮಗಳೂರಿಗೆ ಹೋಗಿ ಆಪ್ತರ ಸಲಹೆ ಮೇರೆಗೆ ಡಿಸಿಪಿ ಮೊರೆಹೋಗಿದ್ದು, ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮಿ ಪ್ರಸಾದ್ಗೆ ದೂರು ನೀಡಿದ್ದಾರೆ. ಕೇಸ್ ತನಿಖೆ ಮಾಡಲು ಯಲಹಂಕ ಎಸಿಪಿಗೆ ಡಿಸಿಪಿ ಆದೇಶ ನೀಡಿದ್ದಾರೆ. ಎಸಿಪಿ ಠಾಣೆಯ ಸಿಸಿಟಿವಿ ಫುಟೇಜ್ ಪರಿಶೀಲನೆ ಮಾಡಿದ್ದು, ದೂರು ದಾಖಲಿಸಿ ಇನ್ಸ್ ಪೆಕ್ಟರ್ ಮೇಲೆ ತನಿಖೆ ಮಾಡಲು ನಿರ್ಧಾರ ಮಾಡಿದ್ದಾರೆ.