ಕಾಫಿನಾಡಲ್ಲಿ ಬಿಂಡಿಗ ಶ್ರೀದೇವೀರಮ್ಮ ಜಾತ್ರಾ ಮಹೋತ್ಸವ
* ವರ್ಷಕ್ಕೊಮ್ಮೆ ದರ್ಶನ ನೀಡುವ ತಾಯಿ ದರ್ಶನಕ್ಕೆ ಬೆಟ್ಟ ಹತ್ತೋದು ಯಾವಾಗ?
* ಪ್ರಸಿದ್ಧ ಶ್ರೀದೇವೀರಮ್ಮ ದರ್ಶನಕ್ಕೆ ಈ ಬಾರಿ ಇರುವ ಮಾರ್ಗಸೂಚಿಗಳೇನು ?
NAMMMUR EXPRESS NEWS
ಚಿಕ್ಕಮಗಳೂರು: ಕಾಫಿನಾಡಿನ ಶಕ್ತಿ ದೇವತೆ ಬಿಂಡಿಗ ಶ್ರೀದೇವಿರಮ್ಮ ಜಾತ್ರಾ ಮಹೋತ್ಸವ ಅ.19 ರಿಂದ ಚಿಕ್ಕಮಗಳೂರಿನ ಮಲ್ಲೇನಹಳ್ಳಿಯಲ್ಲಿ ಆರಂಭವಾಗಲಿದೆ. ವರ್ಷಕ್ಕೊಮ್ಮೆ ದರ್ಶನ ನೀಡುವ ಬೆಟ್ಟದ ಶ್ರೀ ದೇವೀರಮ್ಮ ದರ್ಶನ ಪಡೆಯಲು ಸಾವಿರಾರು ಜನ ಭಕ್ತಾಧಿಗಳು ಪಾಲ್ಗೊಳ್ಳಲಿದ್ದಾರೆ. ಈ ಬಾರಿಯ ದೇವೀರಮ್ಮ ದರ್ಶನಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಂಡಿರುವ ಜಿಲ್ಲಾಡಳಿತವು ಭಕ್ತಾಧಿಗಳ ಸುರಕ್ಷತೆಯ ದೃಷ್ಠಿಯಿಂದ ಹಲವು ಮಾರ್ಗಸೂಚಿಗಳನ್ನು ಜಾರಿ ಮಾಡಿದೆ.
* ಬೆಟ್ಟದ ಶ್ರೀದೇವೀರಮ್ಮ ದರ್ಶನದ ವಿಶೇಷತೆಗಳೇನು ?
ವರ್ಷಕ್ಕೊಮ್ಮೆ ದರ್ಶನ ನೀಡುವ ಶ್ರೀದೇವೀರಮ್ಮ ತಾಯಿಯ ದರ್ಶನದಲ್ಲಿ ಹಲವು ವಿಶೇಷತೆಗಳು ಕೂಡಿದೆ.
ಸುಮಾರು 3000 ಅಡಿ ಎತ್ತರದಲ್ಲಿರುವ ತಾಯಿ ದೇವೀರಮ್ಮನ ದರ್ಶನ ಪಡೆಯಲು ಭಕ್ತರು ಚಪ್ಪಲಿ ಹಾಕದೇ ಬರಿಗಾಲಿನಲ್ಲಿ ಬೆಟ್ಟ ಹತ್ತೋದು ಇಲ್ಲಿನ ವಿಶೇಷವಾಗಿದೆ. ಇದೇ ಸಮಯ ಮಲ್ಲೇನಹಳ್ಳಿಯ ಬಿಂಡಿಗದಲ್ಲಿರುವ ದೇವೀರಮ್ಮನ ದೇವಾಲಯದಲ್ಲಿ ಮೂರು ದಿನಗಳ ವಿಶೇಷ ಪೂಜೆ ನೆರವೇರಲಿದೆ.
ಕಳೆದ ಮೂರು ದಿನಗಳಿಂದ ಮಳೆಯಾಗುತ್ತಿದ್ದು ಇದು ಮತ್ತೆ ಮುಂದುವರೆಯುವುದಾ ಎಂಬ ಅನುಮಾನ ಈಗ ಭಕ್ತರಲ್ಲಿ ಮನೆಮಾಡಿದೆ.
* ಬೆಟ್ಟದ ದೇವೀರಮ್ಮ ದರ್ಶನಕ್ಕಿರುವ ಮಾರ್ಗಸೂಚಿಗಳೇನು ?
ಪ್ರಸಿದ್ಧ ದೇವೀರಮ್ಮ ದರ್ಶನ ಪಡೆಯಲು ಭಕ್ತಾಧಿಗಳು ಸುಮಾರು 3000 ಅಡಿ ಎತ್ತರ ಬೆಟ್ಟ ಹತ್ತಬೇಕು. ವರ್ಷಕ್ಕೊಮ್ಮೆ ದರ್ಶನ ನೀಡುವ ದೇವೀರಮ್ಮನ ದರ್ಶನಕ್ಕಾಗಿ ಸಾವಿರಾರು ಭಕ್ತಾಧಿಗಳು ಬರಲಿದ್ದು,ಜೊತೆಗೆ ಮಳೆಯೂ ಕೂಡ ಶುರುವಾಗಿದೆ ಈ ಹಿನ್ನೆಲೆಯಲ್ಲಿ ಭಕ್ತಾಧಿಗಳ ಸುರಕ್ಷತೆಯ ಹಿತದೃಷ್ಠಿಯಿಂದ ಜಿಲ್ಲಾಡಳಿತವು ಅನೇಕ ಮುಂಜಾಗ್ರತ ಕ್ರಮಕೈಗೊಂಡಿದ್ದು,ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಅ.19 ರ ಭಾನುವಾರ ಬೆಟ್ಟದ ಮೇಲೆ ಬೆಳಗ್ಗೆ 7 ರಿಂದ 9 ರ ವರೆಗೆ ವಿಶೇಷ ಪೂಜೆ ನಡೆಯಲಿದ್ದು, ತದನಂತರ ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಮಾತ್ರ ಬೆಟ್ಟ ಹತ್ತಲು ಅವಕಾಶವಿರುತ್ತದೆ.
ಮರು ದಿನ ಅಂದರೆ ಅ.20 ರ ನರಕ ಚತುರ್ದಶಿಯಂದು ಬೆಳಗ್ಗೆ 7 ರಿಂದ ಮದ್ಯಾಹ್ನ 3 ಗಂಟೆ ವರೆಗೆ ಮಾತ್ರ ಶ್ರೀ ದೇವಿರಮ್ಮನ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈ ಬಾರಿ ಭಾನುವಾರ ಅಂದ್ರೆ 19 ನೇ ತಾರೀಕು ಯಾವುದೇ ಕಾರಣಕ್ಕೂ ರಾತ್ರಿ ಬೆಟ್ಟ ಹತ್ತದಂತೆ ನಿಷೇಧ ಹೇರಲಾಗಿದೆ.
ಈ ಬಾರಿ ಪ್ರಸಿದ್ಧ ಬಿಂಡಿಗ ದೇವೀರಮ್ಮನ ಜಾತ್ರಾ ಮಹೋತ್ಸವ ಅ.19 ರಿಂದ ಅ.23ರವರೆಗೆ ನಡೆಯಲಿದ್ದು,
ಪ್ರತಿ ವರ್ಷ 60-70 ಸಾವಿರಕ್ಕೂ ಹೆಚ್ಚು ಭಕ್ತರು 5 ಕಿ.ಮೀ. ಬೆಟ್ಟ ಹತ್ತಿ ದೇವೀರಮ್ಮನ ದರ್ಶನ ಪಡೆಯುತ್ತಾರೆ.
15 ವರ್ಷ ಮೇಲ್ಪಟ್ಟು 60 ವರ್ಷ ಒಳಗಿನವರು ಮಾತ್ರ ಬೆಟ್ಟ ಹತ್ತಬೇಕು, ಪ್ರವಾಸಿ ತಾಣ ಹಾಗೂ ಭಕ್ತರ ನಡುವೆ ಜನಸಂದಣಿ ತಡೆಗೆ ಜಿಲ್ಲಾಡಳಿತ ಕ್ರಮ ವಹಿಸಲಿದೆ. ಅ.19ರ ಬೆಳಗ್ಗೆ 6 ಗಂಟೆಯಿಂದ ಅ.20ರ ಸಂಜೆ 6 ಗಂಟೆವರೆಗೆ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಗಾಳಿಕೆರೆ, ದತ್ತಪೀಠ ಮತ್ತು ಮಾಣಿಕ್ಯಾಧಾರ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಬರದಂತೆ ಮನವಿ ಮಾಡಲಾಗಿದೆ.
ತರೀಕೆರೆ-ಲಿಂಗದಳ್ಳಿ-ಸಂತವೇರಿ ಮಾರ್ಗವಾಗಿ ಬರುವವರು ತಮ್ಮ ವಾಹನಗಳನ್ನು ಕುಮಾರ ಗಿರಿಯಲ್ಲಿ ಪಾರ್ಕಿಂಗ್ ಮಾಡುವುದು.
ಚಿಕ್ಕಮಗಳೂರು-ಕೈಮರ ಮಾರ್ಗವಾಗಿ ಬಿಂಡಿಗ ಮಲ್ಲೇನಹಳ್ಳಿಗೆ ಬರುವ ಸಾರ್ವಜನಿಕರು ಕಡ್ಡಾಯವಾಗಿ ತಮ್ಮ ವಾಹನಗಳನ್ನು ನಿಗದಿ ಪಡಿಸಿರುವ ಮಲ್ಲೇನಹಳ್ಳಿ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುು ಆವರಣದಲ್ಲಿ ಪಾರ್ಕಿಂಗ್ ಮಾಡುವುದು. ಹಾಗೂ ಯಾವುದೇ ಕಾರಣಕ್ಕೂ ರಸ್ತೆಯ ಬದಿಯಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಕೂಡದು.
ಹೋಂ ಸ್ಟೇ, ರೆಸಾರ್ಟ್ ಬುಕ್ ಮಾಡಿರುವವರಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. ರಾಜ್ಯ ಹೆದ್ದಾರಿ ತರೀಕೆರೆ ಮಾರ್ಗವನ್ನು ಬಿಂಡಿಗ ದೇವೀರಮ್ಮನ ಭಕ್ತರಿಗೆ ಜಿಲ್ಲಾಡಳಿತ ಮೀಸಲಿಟ್ಟಿದೆ.
ಅನ್ಯ ಕಾರ್ಯದ ನಿಮಿತ್ತ ಚಿಕ್ಕಮಗಳೂರಿಗೆ ಬರುವವರು ಕಡ್ಡಾಯವಾಗಿ ಕಡೂರು ಮಾರ್ಗದಲ್ಲಿ ಬರುವಂತೆ ಸೂಚನೆ ನೀಡಲಾಗಿದೆ.
ಒಟ್ಟಿನಲ್ಲಿ ಬಿಂಡಿಗ ಶ್ರೀದೇವೀರಮ್ಮನ ದರ್ಶನ ಮಾಡುವ ಭಕ್ತಾಧಿಗಳು ಜಿಲ್ಲಾಡಳಿತ ಜಾರಿಗೊಳಿಸಿದ ಮಾರ್ಗಸೂಚಿಗಳನ್ನು ಅನುಸರಿಸಿ ಸುರಕ್ಷಿತವಾಗಿ ದರ್ಶನ ಮಾಡಬೇಕಾಗಿದೆ.
* ಬೆಟ್ಟದ ಮೇಲೆ ಪ್ಲಾಸ್ಟಿಕ್ ತೆಗೆದುಕೊಂಡು ಹೋಗಬೇಡಿ
ದೇವೀರಮ್ಮನ ದರ್ಶನಕ್ಕಾಗಿ ಬೆಟ್ಟ ಹತ್ತುವ ಭಕ್ತಾಧಿಗಳಲ್ಲಿ ವಿನಂತಿ ಬೆಟ್ಟ ಹತ್ತುವಾಗ ಅಥವಾ ಬೆಟ್ಟದ ಮೇಲೆ ಯಾರೂ ದಯವಿಟ್ಟು ಪ್ಲಾಸ್ಟಿಕ್ ತೆಗೆದುಕೊಂಡ ಹೋಗ್ಬೇಡಿ ಹಾಗೂ ಬೆಟ್ಟದ ಮೇಲೆ ಪ್ಲಾಸ್ಟಿಕ್ ಎಸೆಯ ಬೇಡಿ ಈ ಮೂಲಕ ಅಲ್ಲಿನ ಪರಿಸರದ ಪಾವಿತ್ರತೆ ಹಾಳು ಮಾಡಬೇಡಿ ಇದು ನಮ್ಮೂರ್ ಎಕ್ಸ್ಪ್ರೆಸ್ ಕಳಕಳಿ.








