ಸ್ತೋತ್ರ ತ್ರಿವೇಣಿಯ ಮಹಾ ಸಮರ್ಪಣೆಗೆ ಭರ್ಜರಿ ತಯಾರಿ..!!
– ಶೃಂಗೇರಿಯಲ್ಲಿ ನಡೆಯಲಿರುವ ಐತಿಹಾಸಿಕ ಬೃಹತ್ ಕಾರ್ಯಕ್ರಮ
– ಜಗದ್ಗುರು ಶ್ರೀಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಸನ್ಯಾಸ ಸ್ವೀಕಾದ ಸ್ವರ್ಣ ಸಂಭ್ರಮದ ಕಾರ್ಯಕ್ರಮ
– ಸುಮಾರು 50,000 ಕ್ಕೂ ಅಧಿಕ ಭಕ್ತರಿಂದ ಏಕಕಾಲಕ್ಕೆ ಏಕಸ್ವರದಲ್ಲಿ ನಡೆಯಲಿರುವ ಸ್ತೋತ್ರ ಪಠಣ
NAMMUR EXPRESS NEWS
ಶೃಂಗೇರಿ: ಶೃಂಗೇರಿ ಶ್ರೀಶಾರದಾ ಪೀಠದಲ್ಲಿ ಜಗದ್ಗುರು ಶ್ರೀಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳ ಸನ್ಯಾಸ ಸ್ವೀಕರಿಸಿ 50 ವರ್ಷ ಪೂರೈಸಿದ ಸ್ವರ್ಣ ಸಂಭ್ರಮದ ಹಿನ್ನೆಲೆಯಲ್ಲಿ “ಸ್ತೋತ್ರ ತ್ರಿವೇಣಿಯ ಮಹಾ ಸಮರ್ಪಣೆ” ಎಂಬ ಐತಿಹಾಸಿಕ ಸ್ತೋತ್ರ ಪಠಣ ಕಾರ್ಯಕ್ರಮವು ಜನವರಿ 11 ನೇ ತಾರೀಖಿನ ಶನಿವಾರದಂದು ಶ್ರೀಮಠದ ನರಸಿಂಹವನದಲ್ಲಿ ನಡೆಯಲಿದೆ. ಇದರ ಪೂರ್ವಭಾವಿಯಾಗಿ ಶ್ರೀಮಠದಿಂದ ಪೂರ್ವಸಿದ್ಧತೆಗಳು ಭರದಿಂದ ಸಾಗಿದೆ,ಸುಮಾರು 12 ಎಕರೆ ಪ್ರದೇಶದಲ್ಲಿ ಸ್ತೋತ್ರ ಸಮರ್ಪಣೆ ನಡೆಯಲಿದ್ದು ಈ ಜಾಗದಲ್ಲಿ ಪೆಂಡಾಲ್,ವಿದ್ಯುತ್ ದೀಪ,ಸಿಸಿ ಕ್ಯಾಮರ,ಚಪ್ಪರ,ಅಲಂಕಾರ ಕಾರ್ಯಗಳು ನಡೆಯುತ್ತಿದೆ.
ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ತಾಲೂಕಿನಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳು,ಮಹಿಳೆಯರು, ಸೇರಿದಂತೆ ಸುಮಾರು 50,000 ಕ್ಕೂ ಅಧಿಕ ಜನ ಭಕ್ತರು ಸ್ತೋತ್ರ ಪಠಣೆಯಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ. ಭಕ್ತರ ಆಗಮನಕ್ಕಾಗಿ ವಿವಿಧ ತಾಲೂಕಿನಿಂದ ಸುಮಾರು 700 ಬಸ್ಗಳ ವ್ಯವಸ್ಥೆ ಮಾಡಲಾಗಿದ್ದು ಬಂದ ವಾಹನಗಳ ಪಾರ್ಕಿಂಗ್ ನಿರ್ವಹಣೆಗಾಗಿ 500,ಬಂದ ಭಕ್ತಾಧಿಗಳಿಗೆ ಊಟದ ವ್ಯವಸ್ಥೆಗಾಗಿ 250 ಕೌಂಟರ್, 2000 ಜನ ಸ್ವಯಂಸೇವಕರ ನಿಯೋಜನೆಯಾಗಿದೆ.ಇದಕ್ಕಾಗಿ ಹಲವು ಸಭೆಗಳು ನಡೆದಿದ್ದು,ಶೃಂಗೇರಿ ಮದುವಣಗಿತ್ತಿಯಂತೆ ಸಿದ್ಧಗೊಳ್ಳುತ್ತಿದೆ. ಈ ಮೂಲಕ ಶೃಂಗೇರಿ ಒಂದು ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದು,ಜಿಲ್ಲೆಯ ಎಲ್ಲಾ ಭಕ್ತಾಧಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಶ್ರೀಮಠದಿಂದ ಮನವಿ ಮಾಡಿದೆ.