ಮನೆಯಲ್ಲಿಯೇ ಗಾಂಜಾ ಬೆಳೆದವ ಜೈಲಿಗೆ..!!
– ತಾಲೂಕಿನಲ್ಲಿ ದಿನೇ ದಿನೇ ಹೆಚ್ಚುತ್ತಿದೆ ಗಾಂಜಾ ಗುಂಗು
– ಗಾಂಜಾ ಪಿಡುಗನ್ನು ಬುಡಸಮೇತ ಕಿತ್ತೊಗೆಯುವಂತೆ ಸಾರ್ವಜನಿಕರ ಆಗ್ರಹ
NAMMUR EXPRESS NEWS
ಮೂಡಿಗೆರೆ: ಬೇಲೂರು ರಸ್ತೆಯಲ್ಲಿರುವ ತನ್ನ ಮನೆಯ ಟೆರೆಸ್ ಮೇಲೆಯೇ ಗಾಂಜಾ ಗಿಡವೊಂದನ್ನು ಬೆಳೆದಿದ್ದ ಆರೋಪಿಯನ್ನು ಬಂಧಿಸಿ ಅಬಕಾರಿ ಪೊಲೀಸರು ಜೈಲಿಗೆ ಕಳಿಸಿದ್ದಾರೆ. ಪೃಥ್ವಿ ಎಂ ಗೌಡ ಬಿನ್ ಮಹಿಪಾಲ್ ಬಂಧಿತ ಯುವಕ. ತನ್ನ ಮನೆಯಲ್ಲಿಯೇ ಗಾಂಜಾ ಬೆಳೆದಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅಬಕಾರಿ ಉಪ ಅಧೀಕ್ಷಕರಾದ ಕೀರ್ತಿ ಕುಮಾರ್,ಅಬಕಾರಿ ನಿರೀಕ್ಷಕರಾದ ಲೋಕೇಶ.ಸಿ ರವರುಗಳ ನೇತೃತ್ವದ ತಂಡ ಯುವಕನ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ನಡೆಸಿದ ಪೋಲೀಸ್ ತಂಡಕ್ಕೆ ಮನೆಯ ಟೆರೇಸ್ ಮೇಲೆ ಬೆಳೆಯಲಾಗಿದ್ದ 707 ಗ್ರಾಂ ತೂಕದ ಗಾಂಜಾ ಗಿಡವನ್ನು ವಶಕ್ಕೆ ಪಡೆದು ಆರೋಪಿ ಪೃಥ್ವಿ ಎಂ ಗೌಡ ಬಿನ್ ಮಹಿಪಾಲ್ ವಿರುದ್ಧ ಎನ್.ಡಿ.ಪಿ.ಎಸ್ ಕಾಯಿದೆ ಅಡಿ ದೂರು ದಾಖಲಿಸಿ ಅರೆಸ್ಟ್ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮೂಡಿಗೆರೆ ತಾಲೂಕಿನಲ್ಲಿ ಗಾಂಜಾ ಗುಂಗು ಜೋರಾಗಿಯೇ ನಡೆಯುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ಹದ್ದಿನ ಕಣ್ಣಿಟ್ಟಿರುವ ಅಬಕಾರಿ ಪೊಲೀಸರು ಇನ್ನು ಸಕ್ರೀಯರಾಗಿ ಕರ್ತವ್ಯ ನಿರ್ವಹಿಸಿ ಗಾಂಜಾ ಪ್ರಕರಣವನ್ನು ಬೇರು ಸಮೇತ ಕಿತ್ತು ಹಾಕುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.