ಕಾಫಿನಾಡಲ್ಲಿ ಭಾರೀ ಮಳೆ,ಕಳಸದಲ್ಲಿ ಸಿಡಿಲಿಗೆ ಯುವಕ ಬಲಿ
* ತಾಲೂಕಿನ ಗುಮ್ಮಾನ್ ಖಾನ್ ಎಸ್ಟೇಟ್ನಲ್ಲಿ ಘಟನೆ
* ಅಸ್ಸಾಂ ಮೂಲದ ಕಾರ್ಮಿಕ ಕುಟುಂಬದ ಬಾಲಕ
NAMMMUR EXPRESS NEWS
ಕಳಸ: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಗುಡುಗು ಸಹಿತ ವಿಪರೀತ ಮಳೆಯಾಗುತ್ತಿದ್ದು, ಸಿಡಿಲು ಬಡಿದು ಬಾಲಕನೊಬ್ಬ ಮೃತಪಟ್ಟ ಘಟನೆ ಕಳಸ ತಾಲೂಕಿನ ಗಮ್ಮಾನ್ ಖಾನ್ ಎಸ್ಟೇಟ್ನಲ್ಲಿ ನಡೆದಿದೆ.
ಮೃತ ಬಾಲಕನನ್ನು ಅಸ್ಸಾಂ ಮೂಲದ ಮೌರುದ್ದೀನ್ (16) ಎಂದು ಗುರುತಿಸಲಾಗಿದೆ. ಕಾಫಿತೋಟದ ಕೆಲಸಕ್ಕಾಗಿ ಕುಟುಂಬವು ಅಸ್ಸಾಂನಿಂದ ಬಂದಿತ್ತು.
ಕಳೆದ ಹಲವು ದಿನಗಳಿಂದ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಗುಡುಗು,ಸಿಡಿಲು ಸಹಿತ ವಿಪರೀತ ಮಳೆಯಾಗುತ್ತಿದ್ದು,ಇದರಿಂದ ಜನಜೀವನ ಅಸ್ಥವ್ಯಸ್ಥಗೊಂಡಿದೆ. ರೈತರಿಗೂ ತೀವ್ರ ತೊಂದರೆಯಾಗಿದೆ. ಈ ಮಧ್ಯೆ ಮಲೆನಾಡಿನಾದ್ಯಂತ ಇನ್ನೂ ಮೂರುದಿನಗಳ ಕಾಲ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಇದರಿಂದ ರೈತರು ತೀವ್ರ ಆತಂಕಕ್ಕೀಡಾಗಿದ್ದಾರೆ.







