ಪತ್ನಿಯನ್ನೇ ಕೊಂದು ಕೊಳವೆ ಬಾವಿಯಲ್ಲಿ ಹೂತಿದ್ದ ಪತಿ
* ಒಂದೂವರೆ ತಿಂಗಳ ಹಿಂದೆ ನಡೆದಿದ್ದ ಪ್ರಕರಣ ಭೇದಿಸಿದ ಪೊಲೀಸರು
* ಪ್ರಕರಣ ಸಂಬಂಧ ಪತಿ,ಅತ್ತೆ,ಮಾವರನ್ನು ವಶಕ್ಕೆ ಪಡೆದ ಪೊಲೀಸರು
NAMMMUR EXPRESS NEWS
ಕಡೂರು: ತಾಲ್ಲೂಕಿನ ಕಸಬಾ ಹೋಬಳಿಯ ಆಲಘಟ್ಟ ಗ್ರಾಮದಲ್ಲಿ ಸುಮಾರು ಒಂದೂವರೆ ತಿಂಗಳ ಹಿಂದೆ ಪತ್ನಿಯನ್ನು ಕೊಂದು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮದ ನಿವಾಸಿ ಮೃತಳ ಪತಿ ವಿಜಯ್ಕುಮಾರ್, ಅತ್ತೆ ತಾಯಮ್ಮ, ಮಾವ ಗೋವಿಂದಪ್ಪ ಅವರನ್ನು ಕಡೂರು ಪೊಲೀಸರು ಮಂಗಳವಾರ ವಶಕ್ಕೆ ಪಡೆದಿದ್ದಾರೆ.
ಆಲಘಟ್ಟದ ವಿಜಯಕುಮಾರ್ ತಾಲ್ಲೂಕಿನ ಚಿಕ್ಕಂಗಳ ಗ್ರಾಮದ ಸಮೀಪ ಪರದೇಶಿಹಾಳ್ನ ಭಾರತಿ ಎಂಬುವರನ್ನು ಆರು ವರ್ಷಗಳ ಹಿಂದೆ ವಿವಾಹವಾಗಿದ್ದರು. ಪದೇ ಪದೇ ವರದಕ್ಷಿಣೆಗಾಗಿ ಪೀಡಿಸುತ್ತಿದ್ದ ಆರೋಪಿ ವಿಜಯ್ಕುಮಾರ್ ಪತ್ನಿಯ ಮೇಲೆ ಹಲ್ಲೆ ಕೂಡ ನಡೆಸುತ್ತಿದ್ದನು. ಕೆಲ ತಿಂಗಳ ಹಿಂದೆ ಕಾರು ಖರೀದಿಸಿದ್ದ ಆರೋಪಿಯು ತವರುಮನೆಯಿಂದ ಹಣ ತರುವಂತೆ ಪತ್ನಿಯನ್ನು ಒತ್ತಾಯಿಸುತ್ತಿದ್ದನು. ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಪತ್ನಿ ಭಾರತಿಯ ಬಾಯಿಗೆ ಬಟ್ಟೆ ತುರುಕಿ ಹೊಡೆದು ಆಕೆಯು ಮೃತಪಟ್ಟ ಬಳಿಕ ಜಮೀನಿನಲ್ಲಿ ಕೊರೆಸಿ ವಿಫಲವಾಗಿದ್ದ ಕೊಳವೆಬಾವಿಯಲ್ಲಿ ಶವವನ್ನು ಹೂತಿಟ್ಟು ಕಡೂರು ಪೊಲೀಸ್ ಠಾಣೆಯಲ್ಲಿ ಆಕೆ ನಾಪತ್ತೆಯಾಗಿದ್ದಾಳೆ ಎಂದು ದೂರು ಕೂಡ ಸಲ್ಲಿಸಿದ್ದನು.
ಪತ್ನಿಯ ಪೋಷಕರು ಕೇಳಿದರೆ ಸಂಬಂಧಿಕರಿಗೆ ಹುಷಾರಿಲ್ಲವೆಂದು ಶಿವಮೊಗ್ಗಕ್ಕೆ ಹೋಗಿದ್ದಾಳೆ ಇತ್ಯಾದಿ ಸಬೂಬು ಹೇಳಿ ಜಾರಿಕೊಳ್ಳುತ್ತಿದ್ದನು. ಈತನ ಅನುಮಾನಾಸ್ಪದ ಹೇಳಿಕೆಗಳು ಹಾಗೂ ನಡವಳಿಕೆಯಿಂದ ಸಂಶಯಗೊಂಡ ಪೊಲೀಸರು ಖಚಿತ ಸುಳಿವಿನ ಮೇರೆಗೆ ಗ್ರಾಮದಲ್ಲಿ ವಿಚಾರಿಸಲಾಗಿ ಈತನೇ ಹತ್ಯೆ ಮಾಡಿ ಶವವನ್ನು ಹೂತಿಟ್ಟು ಪೊಲೀಸರಿಗೆ ಸುಳ್ಳು ದೂರು ಮಾಡಿ ಶವವನ್ನು ಹೂತಿಟ್ಟು ಪೊಲೀಸರಲ್ಲಿ ಸುಳ್ಳು ದೂರು ದಾಖಲಿಸಿರುವುದು ಬೆಳಕಿಗೆ ಬಂದಿದೆ. ವರದಕ್ಷಿಣೆಗಾಗಿ ಪತ್ನಿಯನ್ನು ಪೀಡಿಸಿ ಹತ್ಯೆ ಮಾಡಿದ ಹಿನ್ನೆಲೆ ಹಾಗೂ ಅವನಿಗೆ ಸಹಕರಿಸಿದ ದೂರಿನ ಹಿನ್ನೆಲೆಯಲ್ಲಿ ಮೃತ ಭಾರತಿಯ ಪತಿ, ಅತ್ತೆ ಮತ್ತು ಮಾವನನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.







