ಶೃಂಗೇರಿಯಲ್ಲಿ ನಡೆದ ಯಶಸ್ವಿ ರಕ್ತದಾನ ಶಿಬಿರ..
– ಜಗದ್ಗುರ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಸನ್ಯಾಸ ಸ್ವೀಕಾರ ಸ್ವರ್ಣ ಮಹೋತ್ಸವದ ಪ್ರಯುಕ್ತ ಆಯೋಜಿಸಿದ್ದ ಶಿಬಿರ
– ಸುಮಾರು 93 ಯುನಿಟ್ ರಕ್ತ ಸಂಗ್ರಹ,ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು
NAMMUR EXPRESS NEWS
ಶೃಂಗೇರಿ: ತಾಲೂಕಿನ ಕಾರ್ಮಿಕ ಮಿತ್ರ ವೃಂದ,ರಕ್ತದಾನಿಗಳು ವಾಟ್ಸ್ ಆಪ್ ಗ್ರೂಪ್,ಶ್ರೀಅಭಿನವ ವಿದ್ಯಾತೀರ್ಥ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್,ಶ್ರೀಭಾರತೀ ತೀರ್ಥ ಸದ್ಬಕ್ತ ಸಂಘ,ಜೆಸಿಐ ಘಟಕ,ಶೃಂಗಗಿರಿ ಖಾಸಗಿ ಕಟ್ಟಡ ಗುತ್ತಿಗೆದಾರರ ಸಂಘ,ಕ.ಸಾ.ಪ ಮಹಿಳಾ ಘಟಕ,ಆಟೋ ಚಾಲಕರು ಮತ್ತು ಮಾಲೀಕರ ಸಂಘ ಇವರುಗಳ ಸಹಯೋಗದಲ್ಲಿ ಶೃಂಗೇರಿ ಶ್ರೀಶಾರದಾ ಪೀಠದ ಜಗದ್ಗರು ಶ್ರೀಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ಸನ್ಯಾಸ ಸ್ವೀಕಾರದ ಸ್ವರ್ಣ ಮಹೋತ್ಸವದ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರವನ್ನು ಶ್ರೀಮಠದ ಶಾರದಾ ಕೃಪಾ ಕಟ್ಟಡದಲ್ಲಿ ಹಮ್ಮಿಕೊಳ್ಳಲಾಗತ್ತು. ಈ ಶಿಬಿರವನ್ನು ಶ್ರೀ ಶಾರದಾ ಪೀಠದ ಶ್ರೀಜಗದ್ಗರುಗಳ ಆಪ್ತ ಸಹಾಯಕರಾದ ವೇದಬ್ರಹ್ಮ ಶ್ರೀ ಶಂ ನ ಕೃಷ್ಣಮೂರ್ತಿಗಳವರು ಉದ್ಘಾಟಿಸಿದರು. ಶಿಬಿರದಲ್ಲಿ ಶ್ರೀಮಠದ ಭಕ್ತರು,ಎಲ್ಲಾ ಸಂಘ,ಸಂಸ್ಥೆಗಳ ಕಾರ್ಯಕರ್ತರು,ಪದಾಧಿಕಾರಿಗಳು ಅತಿ ಉತ್ಸಾಹದಿಂದ ಭಾಗವಹಿಸಿ ರಕ್ತದಾನ ಮಾಡಿದರು. ಒಟ್ಟು 93 ಯುನಿಟ್ಗಳಷ್ಟು ರಕ್ತವನ್ನು ದಾನಿಗಳಿಂದ ಸಂಗ್ರಹಿಸಲಾಗಿದೆ. ಈ ಶಿಬಿರ ಯಶಸ್ವಿಯಾಗಿದ್ದು ಸಹಕರಿಸಿದ ಮತ್ತು ರಕ್ತದಾನ ಮಾಡಿದ ಎಲ್ಲಾ ದಾನಿಗಳಿಗೂ ಆಯೋಜಕರು ಧನ್ಯವಾದಗಳನ್ನು ತಿಳಿಸಿದರು.