ಸುಧೀಕ್ಷಾ ಎಸ್ ಪೈ ಅವರಿಗೆ ಡಾಕ್ಟರೇಟ್ ಪದವಿ
– ಬಾಳೆಹೊನ್ನೂರಿನ ಸುಧಾ ಹಾಗೂ ಸುರೇಂದ್ರ ಪೈ ಪುತ್ರಿ ಸಾಧನೆ
– ಕ್ರಿಯೇಟಿವ್ ಪಿಯು ಕಾಲೇಜಲ್ಲಿ ಆಂಗ್ಲ ಭಾಷಾ ಉಪನ್ಯಾಸಕರಾಗಿ ಸೇವೆ
NAMMUR EXPRESS NEWS
ಕಾರ್ಕಳ/ ಕೊಪ್ಪ: ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರಿನ ಸುಧಾ ಸುರೇಂದ್ರ ಪೈ ಇವರ ಮಗಳಾದ ಸುಧೀಕ್ಷಾ ಎಸ್ ಪೈ ಇವರು ಪಿ. ಎಚ್. ಡಿ ಗೌರವಕ್ಕೆ ಭಾಜನರಾಗಿದ್ದಾರೆ.
“ಅಸೈಕೊ ಅನಲಿಟಿಕಲ್ ಅನಾಲಿಸಿಸ್ ಆಫ್ ವಿಮೆನ್ ಪ್ರೋಟಗೋನಿಸ್ಟ್ ಇನ್ ಸೆಲೆಕ್ಟ್ ನೋವೆಲ್ಸ್ ಆಫ್ ಪ್ರೀತಿ ಶೆಣೈ”ಎಂಬುದರ ಮೇಲೆ ಅಕ್ಟೋಬರ್- 4- 2025 ರಂದು ಶ್ರೀನಿವಾಸ್ ವಿಶ್ವವಿದ್ಯಾನಿಲಯ ಮಂಗಳೂರು ಇಲ್ಲಿ ಪ್ರೊಫೆಸರ್ ಲೂಡ್ಸ್ ಸ್ವಾಮಿ ಇವರ ಮಾರ್ಗದರ್ಶನದಲ್ಲಿ ಮಹಾ ಪ್ರಬಂಧ ಮಂಡಿಸಿ ಪಿ. ಎಚ್. ಡಿ ಪದವಿಯನ್ನ ಪಡೆದಿರುತ್ತಾರೆ.
ನಿಟ್ಟೆ ಮಹಾಲಿಂಗ ಅಡ್ಯಂತಾಯ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ 7 ವರ್ಷಗಳ ಕಾಲ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸಿರುತ್ತಾರೆ. ಇವರು ನಿವೃತ್ತ ಮುಖ್ಯೋಪಾಧ್ಯಾಯನಿ ಪೂರ್ಣಿಮಾ ರಮೇಶ್ ಶೆಣೈಯವರ ಸೊಸೆಯಾಗಿದ್ದು ಪ್ರಸ್ತುತ ತಮ್ಮ ಪತಿಯವರಾದ ಮಹೇಶ ಶೆಣೈ ಅವರೊಂದಿಗೆ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸುಧೀಕ್ಷಾ ಎಸ್ ಪೈ ಅವರಿಗೆ ಕುಟುಂದವರು, ಸ್ನೇಹಿತರು, ಕ್ರಿಯೇಟಿವ್ ಆಡಳಿತ ಮಂಡಳಿ, ಸಿಬ್ಬಂದಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.








