ಹೊಸದುರ್ಗದಲ್ಲಿ ದೇವಾಂಗ ಸಮುದಾಯದ ಕಾರ್ಯಕ್ರಮ
– ಮಕ್ಕಳಿಗೆ ಸಂಸ್ಕಾರವಿಲ್ಲದ ಶಿಕ್ಷಣ ನೀಡಿದರೆ ತಂದೆ ತಾಯಿಗಳು ವೃದ್ಧಾಶ್ರಮಕ್ಕೆ ಸೇರುವ ಅನಿವಾರ್ಯತೆ ಬರುತ್ತದೆ
– ದೇವಲ ಪ್ರತಿಭಾ ಪುರಸ್ಕಾರದಲ್ಲಿ ಶಾಸಕ ಬಿಜಿ ಗೋವಿಂದಪ್ಪ ಕಳವಳ
NAMMUR EXPRESS NEWS
ಹೊಸದುರ್ಗ: ಪೋಷಕರು ಹಾಗೂ ಶಿಕ್ಷಕರು ತಮ್ಮ ಮಕ್ಕಳಿಗೆ ವಿದ್ಯೆ ಜೊತೆಗೆ ಸಂಸ್ಕಾರದ ಪಾಠ ಕಳಿಸುವುದು ಬಹಳ ಮುಖ್ಯ. ಏಕೆಂದರೆ ಸಂಸ್ಕಾರ ಇಲ್ಲದೇ ಹೋದರೆ ಭವಿಷ್ಯದ ಜೀವನ ಕಷ್ಟವಾಗುತ್ತದೆ. ಇಂದು ಪೋಷಕರು ತಾವು ದುಡಿದ ಹಣ ಖರ್ಚು ಮಾಡಿ, ಮಕ್ಕಳಿಗೆ ವಿದ್ಯೆ ಕೊಟ್ಟು ಸಂಸ್ಕಾರ ಕಲಿಸದಿದ್ದರೆ ತಾವು ವಯಸ್ಸಾದಾಗ ವೃದ್ಧಾಶ್ರಮಕ್ಕೆ ಹೋಗಬೇಕಾಗುತ್ತದೆ. ಇದರಿಂದ ಕುಟುಂಬ ಹಾಗೂ ಸಮಾಜಕ್ಕೆ ನಷ್ಟ ಉಂಟಾಗುತ್ತದೆ ಎಂದು ಶಾಸಕ ಬಿ ಜಿ ಗೋವಿಂದಪ್ಪ ತಿಳಿಸಿದ್ದಾರೆ.
ನಗರದ ಬನಶಂಕರಿ ಸಂಭೋಗಾಯ ಭವನದಲ್ಲಿ ತಾಲೂಕು ದೇವಾಂಗ ಸಂಘ, ದೇವಾಂಗ ಸಮಾಜ ಹಾಗೂ ದೇವಾಂಗ ನೌಕರರ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ಪ್ರತಿಭಾನ್ವಿತರಿಗೆ ಸನ್ಮಾನ ಹಾಗೂ ಸಮಾಜದ ನಿವೃತ್ತ ನೌಕರರಿಗೆ ಅಭಿನದಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೊಸದುರ್ಗ ದೇವಾಂಗ ಸಮಾಜದ ಅಧ್ಯಕ್ಷ ಡಿ.ಆರ್.ಗೋವಿಂದರಾಜು ಮಾತನಾಡಿ, ಹಣ, ಆಸ್ತಿ ಮಾಡುವುದೊಂದೇ ಮುಖ್ಯವಲ್ಲ. ಸಮಾಜ ಅಂತ ಬಂದಾಗ ಪಕ್ಷಬೇಧ ಮರೆತು ಸಂಘಟಿತರಾಗಿ ಒಗ್ಗಟ್ಟು ಪ್ರದರ್ಶಿಸಿದಲ್ಲಿ ಮಾತ್ರ ಮುಂದಿನ ದಿನದಲ್ಲಿ ಸಮುದಾಯದ ಅಭಿವೃದ್ಧಿ ಸಾಧ್ಯ. ನೌಕರರ ಸಂಘದಿಂದ ನಡೆಸುತ್ತಿರುವ ಇಂತಹ ಮುಖ್ಯವಾದ ಕಾರ್ಯಕ್ರಮಕ್ಕೆ ಸ್ಥಳೀಯವಾಗಿ ಇರುವ ನೌಕರರು, ಅವರ ಮಕ್ಕಳು ಬರದಿದ್ದರೆ ಹೇಗೆ?. ಮುಂದಿನ ದಿನದಲ್ಲಿ ಈ ರೀತಿ ಆಗದಂತೆ ಎಲ್ಲರೂ ಜಾಗೃತರಾಗಬೇಕು ಎಂದು ತಿಳಿಸಿದರು.
ದೇವಾಂಗ ಸಂಘದ ತಾಲೂಕು ಅಧ್ಯಕ್ಷ ಗೋ.ತಿಪ್ಪೇಶ್ ಮಾತನಾಡಿ, ಪ್ರತಿಭೆ ಯಾರಪ್ಪನ ಸ್ವತ್ತು ಅಲ್ಲ. ಪ್ರತಿಭಾನ್ವಿತರಲ್ಲಿರುವ ಪ್ರತಿಭೆಯನ್ನು ಯಾರು ಅಪಹರಿಸಲು ಸಾಧ್ಯವಿಲ್ಲ. ಪ್ರತಿಭಾನ್ವಿತರ ಗುರುತಿಸಿ ಸನ್ಮಾನಿಸುವ ಇಂತಹ ಸಮಾಜಮುಖಿ ಕಾರ್ಯ ನಡೆಸುತ್ತಿರುವುದು ಮೆಚ್ಚುಗೆ ಸಂಗತಿ ಎಂದರು.
ಬನಶಂಕರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ. ಮಂಜುನಾಥ್, ವಿಧಾನಸೌಧ ಉಪಕಾರ್ಯದರ್ಶಿ ಬಿ.ಆರ್.ಮಂಜುನಾಥ್, ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಆರ್.ರಾಜೇಶ್, ಸನ್ ಪ್ರಾಜೆಕ್ಟ್ ಉದ್ಯಮಿ ಎಚ್.ಸಿ.ಪ್ರಭಾಕರ್, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಡಿ.ಆರ್.ನಾಗೇಶಪ್ಪ, ರಾಜ್ಯ ದೇವಾಂಗ ಸಂಘದ ನಿರ್ದೇಶಕ ಎಂ.ಆರ್.ಶಾಂತಪ್ಪ, ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದೇವಾಂಗ ನೌಕರರ ಸಂಘದ ಅಧ್ಯಕ್ಷ ಎಸ್.ಚಂದ್ರಶೇಖರ್ ಅವರು ಮಾತನಾಡಿದರು.
ಸಮಾರಂಭದಲ್ಲಿ ಶಾಸಕರಾದ ಬಿ.ಜಿ.ಗೋವಿಂದಪ್ಪ, ಸಮಾಜ ಸೇವಕ ಟಿ.ಮಂಜುನಾಥ್, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಡಿ.ಆರ್.ನಾಗೇಶಪ್ಪ, ಶಿವಮೊಗ್ಗ ಹಾಲು ್ಪಾದಕರ ಒಕ್ಕೂಟದ ನಿರ್ದೇಶಕ ಬಿ.ಆರ್.ರವಿಕುಮಾರ್, ಹೊಸದುರ್ಗ ಪುರಸಭೆ ಉಪಾಧ್ಯಕ್ಷೆ ಗೀತಾ ಆಸಂದಿ ಗಜೇಂದ್ರ, ಬೆಲಗೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸವಿತಾ ರಂಗಸ್ವಾಮಿ ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಮಾರಂಭದಲ್ಲಿ ಪುರಸಭೆ ಸದಸ್ಯರಾದ ದಾಳಿಂಬೆ ಗಿರೀಶ್, ಮೇಘಾ ರಾಮಚಂದ್ರ, ರಾಮಚಂದ್ರಪ್ಪ, ಭದ್ರಾ ಮೇಲ್ದಂಡೆ ಎಂಜಿನಿಯರ್ ಪ್ರಕಾಶ್, ಡಾ.ಜಿ.ನಾಗರಾಜು, ಗೌಡ್ರು ರಂಗನಾಥ್, ಕಮಲ್ ರಾಮಚಂದ್ರ, ಶಾಂತಮೂರ್ತಿ, ದೇವಾಂಗ ನೌಕರರ ಸಂಘದ ಉಪಾಧ್ಯಕ್ಷ ಎಸ್.ಸುರೇಶ್ ನೀರಗುಂದ, ಕಾರ್ಯದರ್ಶಿ ಎಸ್.ಮಂಜುನಾಥ್, ಖಜಾಂಚಿ ಎ.ಟಿ.ವೆಂಕಟೇಶ್, ಅನಂತ್, ರವಿಶಂಕರ್, ಮಹೇಶ್, ಡಿ.ಎನ್.ಬಾಲಚಂದ್ರ ಸೇರಿ ನೌಕರರು, ಮುಖಂಡರು ಹಾಜರಿದ್ದರು.