- ಅದು ಮಾನವೀಯ ನೆಲೆಯಲ್ಲಿ ನೀಡುವ ವಿನಾಯ್ತಿ
NAMMUR EXPRESS NEWS
ನವದೆಹಲಿ: ‘ಅನುಕಂಪದ ಆಧಾರದಲ್ಲಿ ನೀಡುವ ಸರ್ಕಾರಿ ನೌಕರಿಯು ಹಕ್ಕಲ್ಲ’ ಎಂಬ ಮಹತ್ವದ ತೀರ್ವನ್ನು ಸುಪ್ರೀಂಕೋರ್ಟ್ ನೀಡಿದೆ. ‘ಅನುಕಂಪದ ನೌಕರಿ ಒಂದು ರೀತಿಯ ವಿನಾಯ್ತಿಯೇ ವಿನಃ ಅದು ಹಕ್ಕು ಅಲ್ಲ, ಕುಟುಂಬದ ಸದಸ್ಯ ಹಠಾತ್ ನಿಧನರಾದಾಗ, ಆದ ಹಾನಿಯಿಂದ ಚೇತರಿಸಿಕೊಳ್ಳಲು ಕುಟುಂಬಕ್ಕೆ ಅವಕಾಶ ನೀಡುವ ಉದ್ದೇಶದಿಂದ ಮಾತ್ರ ಅದನ್ನು ನೀಡಲಾಗುತ್ತದೆ’ ಎಂದು ಅದು ಅಭಿಪ್ರಾಯಪಟ್ಟಿದೆ.
ಕೇರಳ ಹೈಕೋರ್ಟ್, ಈ ಹಿಂದೆ ಮಹಿಳೆ ಯೊಬ್ಬರನ್ನು ಅನುಕಂಪದ ಆಧಾರದಲ್ಲಿ ನೇಮಿಸಿಕೊಳ್ಳಬೇಕು ಎಂದು ಸರ್ಕಾರಿ, ಸ್ವಾಮ್ಯದ ರಸಗೊಬ್ಬರ ಹಾಗೂ ರಾಸಾಯನಿಕ ಕಂಪನಿ ಟ್ರಾವಂಕೋರ್ ಲಿ.ಗೆ ಸೂಚಿಸಿತ್ತು.