ಹಾಸನ -ಮೈಸೂರು ಟಾಪ್ ನ್ಯೂಸ್
ಸ್ಟೇರಿಂಗ್ ಕಟ್ ಆಗಿ ಗದ್ದೆಗೆ ನುಗ್ಗಿದ ಬಸ್!
– 30 ಮಂದಿ ಪ್ರಯಾಣಿಕರಿಗೆ ಗಾಯ
– ಮೈಸೂರು ಜಿಲ್ಲೆ ಕೆ.ಆರ್.ನಗರದ ಕೆಸ್ತೂರು ಗೇಟ್ ಬಳಿ ಘಟನೆ
ಗ್ರಾಮಕ್ಕೆ ನುಗ್ಗಿದ ಒಂಟಿ ಸಲಗ: ಕಾಡಿಗೆ ಅಟ್ಟಿದ ಗ್ರಾಮಸ್ಥರು
– ಬೈಕ್ ಪುಡಿ ಮಾಡಿದ ಆನೆ: ಗ್ರಾಮಸ್ಥರಿಗೆ ಜೀವ ಭಯ
NAMMUR EXPRESS NEWS
ಮೈಸೂರು: 30ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಕೆಎಸ್ಆರ್ಟಿಸಿ ಬಸ್ವೊಂದು ಸ್ಟೇರಿಂಗ್ ಕಟ್ಟಿಂಗ್ ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ನುಗ್ಗಿದೆ. ಘಟನೆಯಲ್ಲಿ 30 ಪ್ರಯಾಣಿಕರು ಗಾಯಗೊಂಡಿದ್ದು, ಐವರು ಗಂಭೀರ ಗಾಯಗೊಂಡಿದ್ದಾರೆ. ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಕೆಸ್ತೂರು ಗೇಟ್ ಬಳಿ ನಡೆದಿದೆ.
ಗ್ರಾಮಕ್ಕೆ ನುಗ್ಗಿದ ಒಂಟಿ ಸಲಗ, ಮತ್ತೆ ಕಾಡಿಗೆ ಅಟ್ಟಿದ ಗ್ರಾಮಸ್ಥರು!
ಮೈಸೂರು : ಒಂಟಿಸಲಗವೊಂದು ಗ್ರಾಮಕ್ಕೆ ನುಗ್ಗಿ ದಾಂಧಲೆ ಮಾಡಿದ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ವೀರನ ಹೊಸಹಳ್ಳಿಯ ಅರಣ್ಯ ವಲಯದ ಹೊಸಹಳ್ಳಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ. ಹೀಗಾಗಿ ಗ್ರಾಮಸ್ಥರೇ ಒಂಟಿಸಲಗವನ್ನ ಮತ್ತೆ ಕಾಡಿಗೆ ಅಟ್ಟಿದ್ದಾರೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಹಾಗೂ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಲ್ಲಿ ಪ್ರತಿದಿನ ಕಾಡು ಪ್ರಾಣಿಗಳ ಉಪಟಳ ಹೆಚ್ಚಾಗಿದೆ. ಅಲ್ಲದೇ ತಮ್ಮ ಜಾನುವಾರುಗಳಿಗೂ ತೊಂದರೆ ಆಗುತ್ತಿದ್ದು, ಜೊತೆಗೆ ರೈತರು ಬೆಳೆದ ಬೆಳೆಗಳು ಸಹ ನಾಶವಾಗುತ್ತಿವೆ.
ಹೊಸಹಳ್ಳಿ ಗ್ರಾಮಕ್ಕೆ ಸೋಮವಾರ ಸಂಜೆ ಒಂಟಿ ಸಲಗವೊಂದು ಆಹಾರ ಅರಸಿ ಬಂದಿದ್ದು, ಗ್ರಾಮದಲ್ಲಿ ಕೆಲವು ನಾಯಿಗಳ ಮೇಲೆ ದಾಳಿ ಮಾಡಲು ಮುಂದಾಗಿದೆ. ಆಗ ಹೊಸಹಳ್ಳಿ ಗ್ರಾಮಸ್ಥರು ಆನೆಯನ್ನು ಓಡಿಸಲು ಪ್ರಯತ್ನಪಟ್ಟಿದ್ದು, ಆಗ ಆನೆ ಬೈಕ್ವೊಂದನ್ನ ಜಖಂ ಮಾಡಿದೆ.ಒಂಟಿ ಸಲಗ ಗ್ರಾಮಕ್ಕೆ ನುಗ್ಗಿರುವ ಈ ವಿಚಾರವನ್ನ ಅರಣ್ಯ ಇಲಾಖೆಗೆ ತಿಳಿಸಿದ್ದು, ಅರಣ್ಯ ಸಿಬ್ಬಂದಿ ಬರುವುದು ತಡವಾಗಿದ್ದರಿಂದ ಗ್ರಾಮಸ್ಥರೇ ಒಂಟಿಸಲಗವನ್ನ ಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.