ಹಾಸನ, ಮೈಸೂರು ಜಿಲ್ಲೆಯಲ್ಲಿ ಚಿರತೆ ಕಾಟ!
– ಶ್ರವಣಬೆಳಗೊಳ ಹೋಬಳಿ ಕೆಂಪಿನ ಕೋಟೆ ಗ್ರಾಮದಲ್ಲಿ ದನ, ನಾಯಿಗಳು ಬಲಿ
– ಜನತೆಗೆ ಭಯ: ಅರಣ್ಯ ಇಲಾಖೆ ವಿರುದ್ಧ ಆಕ್ರೋಶ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ : ಹಾಸನ ವರದಿ
ಹಾಸನ: ಹಾಸನ ಜಿಲ್ಲೆಯ ಹಲವೆಡೆ ಚಿರತೆ ಕಾಟ ಹೆಚ್ಚಾಗಿದೆ. ಚಿರತೆ ಭಯ ಜನರಿಗೆ ಹೊಲಗಳಿಗೆ ಹೋಗಲು ಹಿಂಜರಿಕೆ ಉಂಟು ಮಾಡುವಂತಾಗಿದೆ. ಈ ನಡುವೆ ಚನ್ನರಾಯಪಟ್ಟಣ ತಾಲೂಕು ಶ್ರವಣಬೆಳಗೊಳ ಹೋಬಳಿ ಕೆಂಪಿನ ಕೋಟೆ ಗ್ರಾಮದಲ್ಲಿ ಮನೆಯ ಮುಂದೆ ಕಟ್ಟಿದ್ದ ನಾಯಿ ಮೇಲೆ ದಾಳಿ ಮಾಡಿದ ಚಿರತೆ ಚಿರತೆಗಳು ದಾಳಿ ಮಾಡಿ ಸಾಯಿಸಿವೆ. ಆಗಾಗ್ಗೆ ಗ್ರಾಮಕ್ಕೆ ನುಗ್ಗಿ ಕರುಗಳು ಮತ್ತು ನಾಯಿಗಳ ಮೇಲೆ ದಾಳಿ ಮಾಡುವುದರಿಂದ ಕೆಂಪಿನ ಕೋಟೆ ಜನರು ಆತಂಕಕ್ಕೊಳಗಾಗಿದ್ದಾರೆ. ಹಗಲು ಹೊತ್ತಿನಲ್ಲಿಯೇ ಚಿರತೆಗಳು ಕಾಣಿಸಿಕೊಳ್ಳುತ್ತಿರುವುದರಿಂದ ಊರಿನ ಜನರು ಆತಂಕ ಪಡುತ್ತಿದ್ದಾರೆ.ಅರಣ್ಯ ಇಲಾಖೆ ಬೋನ್ಗಳನ್ನು ಇಟ್ಟು ಸೆರೆ ಹಿಡಿಯಬೇಕು ಎಂಬ ಅಗ್ರಹ ವ್ಯಕ್ತವಾಗಿದೆ.
ಮೈಸೂರಿನ ಹುಣಸೂರಲ್ಲಿ ಮೇಕೆ ಬಲಿ
ಹಾಡಹಗಲೇ ಜಮೀನಿನಲ್ಲಿ ಮೇಯುತ್ತಿದ್ದ ಮೇಕೆಗಳ ಮೇಲೆ ದಾಳಿ ನಡೆಸಿರುವ ಚಿರತೆ ಎರಡು ಮೇಕೆಯನ್ನು ಕೊಂದು ಹಾಕಿರುವ ಘಟನೆ ಹುಣಸೂರು ತಾಲ್ಲೂಕಿನ ಕೊಳ್ಳಗಟ್ಟದಲ್ಲಿ ನಡೆದಿದೆ. ಬಿಳಿಕೆರೆ ಹೋಬಳಿಯ ಕೊಳಗಟ್ಟ ಗ್ರಾಮದ ಕುಮಾರ್ರಿಗೆ ಸೇರಿದ ಮೇಕೆಗಳು ಇವಾಗಿದ್ದು, ತಮ್ಮ ಜಮೀನಿನಲ್ಲಿ ಮೇಯಲು ಬಿಟ್ಟದ್ದ ಮೇಕೆಗಳ ಮೇಲೆ ಚಿರತೆಯು ದಾಳಿ ನಡೆಸಿದೆ.