ಆರೋಗ್ಯ ಎಕ್ಸ್ ಪ್ರೆಸ್!
ಹಿಮ್ಮಡಿ ಕಾಲು ಒಡೆದಿದ್ರೆ, ಒಂದೇ ವಾರದಲ್ಲಿ ಗುಣಪಡಿಸಲು ಇದನ್ನು ಟ್ರೈ ಮಾಡಿ
NAMMUR EXPRESS NEWS
ಸರಿಯಾಗಿ ಹಣ್ಣಾದ ಎರಡು ಬಾಳೆಹಣ್ಣನ್ನು ಒಂದು ಬೌಲ್ ಅಲ್ಲಿ ಕಿವುಚಿಕೊಂಡು ಪಾದಗಳಿಗೆ, ಬೆರಳುಗಳ ಮಧ್ಯೆ ಹಾಗೂ ಹಿಮ್ಮಡಿ ಸೇರಿದಂತೆ ಪಾದದ ಎಲ್ಲಾ ಭಾಗಗಳಿಗೆ ಚೆನ್ನಾಗಿ ಉಜ್ಜಿಕೊಳ್ಳಿ.. ಪ್ರತಿದಿನ ಮಲಗುವ ಮುನ್ನ ಈ ಕ್ರಮವನ್ನು ಅನ್ವಯಿಸುವುದರಿಂದ ಪಾದದ ಆರೋಗ್ಯ ಉತ್ತಮವಾಗಿರುತ್ತದೆ.
ಪಾದವು ದೇಹ ನಿಲ್ಲುವುದಕ್ಕೆ ಅನುಕೂಲ ಕಲ್ಪಿಸುವ ಒಂದು ಅಂಗ. ಪಾದದಲ್ಲಿ ಇರುವ ಪ್ರತಿಯೊಂದು ಬೆರಳು, ಹಿಮ್ಮಡಿಯು ವಿಶೇಷ ಚಕ್ರಗಳನ್ನು ಒಳಗೊಂಡಿದ್ದು, ಅವು ದೇಹದ ಆರೋಗ್ಯಕ್ಕೆ ಅನುವುಮಾಡಿಕೊಡುತ್ತವೆ. ನೆಲದ ಸ್ಪರ್ಶವನ್ನು ಸದಾ ಪಡೆದುಕೊಳ್ಳುವ ಪಾದಗಳಿಗೆ ಧೂಳು, ಕೊಳಕು ಹಾಗೂ ಅನಾಹುತಗಳು ಉಂಟಾಗುವುದು ಸಾಮಾನ್ಯವಾದ ಸಂಗತಿ. ಈ ಹಿನ್ನೆಲೆಯಲ್ಲಿಯೇ ಪಾದಗಳು ಬಿರುಕು ಹಾಗೂ ನೋವು ಉಂಟಾಗುತ್ತವೆ. ಅವು ನಡೆಯುವಾಗ ಹಾಗೂ ಮಲಗಿರುವಾಗ ಸಾಕಷ್ಟು ನೋವನ್ನು ಉಂಟುಮಾಡುವುದು. ಅಲ್ಲದೆ ನೋಡುಗರಿಗೂ ಒಂದು ಬಗೆಯ ಶುಚಿತ್ವ ಇಲ್ಲ ಎನ್ನುವ ಭಾವನೆಯನ್ನು ಮೂಡಿಸುವುದು.
ಪಾದವು ತಕ್ಷಣಕ್ಕೆ ಯಾರಿಗೂ ಕಾಣಿಸದೆ ಇರುವ ಅಂಗ ಆಗಿರಬಹುದು, ಆದರೆ ಅದರ ರಕ್ಷಣೆ ಹಾಗೂ ಕಾಳಜಿಯನ್ನು ಅಗತ್ಯವಾಗಿ ಕೈಗೊಳ್ಳಬೇಕು. ಇಲ್ಲವಾದರೆ ಹಿಮ್ಮಡಿ ಒಡೆತ ಅಥವಾ ಸೀಳು ಶಾಶ್ವತವಾಗಿ ಉಳಿದುಕೊಳ್ಳುವುದು. ಪಾದಗಳಲ್ಲಿ ತೇವಾಂಶದ ಪ್ರಮಾಣ ಕಡಿಮೆ ಪ್ರಮಾಣದಲ್ಲಿ ಇರುತ್ತವೆ. ಅವು ಧೂಳು ಮತ್ತು ಗಾಳಿಗೆ ಹೆಚ್ಚು ಕಾಲ ತೆರೆದೇ ಇರುವುದರಿಂದ ಹಿಮ್ಮಡಿಯ ಆರೋಗ್ಯವು ಬಹುಬೇಗ ಹಾಳಾಗುತ್ತದೆ. ಸದಾ ಕಾಲ ಮಣ್ಣಿನಿಂದ ಕೂಡಿರುವ ಹಿಮ್ಮಡಿಯ ಬಿರುಕು ಕೆಲವೊಮ್ಮೆ ನಮಗೆ ಮುಜುಗರವನ್ನುಂಟುಮಾಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.
* ಜೇನು ಮತ್ತು ಸಕ್ಕರೆ ಸ್ಕ್ರಬ್
ವಾರದಲ್ಲಿ ಎರಡು ಬಾರಿ ಒಂದು ಚಮಚ ಜೇನಿಗೆ ಒಂದು ಸಕ್ಕರೆ ಹಾಕಿ ಐದೈದು ನಿಮಿಷ ಸ್ಕ್ರಬ್ ಮಾಡಿ. ನಂತರ ಕಾಲುಗಳನ್ನು ಹದ ಬಿಸಿ ನೀರಿನಲ್ಲಿ ತೊಳೆದು, ಟವಲ್ನಿಂದ ಒರೆಸಿ ಪೆಟ್ರೋಲಿಯಂ ಜೆಲ್ಲಿ ಹಚ್ಚಿ. ಪೆಟ್ರೋಲಿಯಂ ಜೆಲ್ಲಿಯನ್ನು ಪ್ರತೀದಿನ ಹಚ್ಚಿದರೆ ಬಿರುಕು ಉಂಟಾಗುವುದಿಲ್ಲ.
* ಪೆಟ್ರೋಲಿಯಂ ಜೆಲ್ಲಿ ಮತ್ತು ಗ್ಲಿಸರಿನ್
ಪೆಟ್ರೋಲಿಯಂ ಜೆಲ್ಲಿ ಜತೆಗೆ ಸ್ವಲ್ಪ ಗ್ಲಿಸರಿನ್ ಹಚ್ಚಿದರೆ ಮತ್ತಷ್ಟು ಒಳ್ಳೆಯದು. ರಾತ್ರಿ ಮಲಗುವಾಗ ಕಾಲು-ಕೈಗಳಿಗೆ ಗ್ಲಿಸರಿನ್ ಹಚ್ಚಿ ಮಲಗಿದರೆ ಕೈ-ಕಾಲಿನ ತ್ವಚೆ ಮೇಲೆ ಬಿಳಿ-ಬಿಳಿ ಉಂಟಾಗುವುದಿಲ್ಲ.








