ಆರೋಗ್ಯ ಎಕ್ಸ್ ಪ್ರೆಸ್!
ತಲೆಯಲ್ಲಿ ಹೇನಿನ ಸಮಸ್ಯೆ ಇದ್ಯಾ? ಹಾಗಾದ್ರೆ ಇಲ್ಲಿದೆ ಮನೆಮದ್ದುಗಳು
NAMMUR EXPRESS NEWS
ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ತಲೆ ಕೂದಲಿಗೆ ಹೇನುಗಳು ಬೀಳುವುದು ಸಾಮಾನ್ಯ. ಬಹಳ ಬೇಗನೆ ಇವುಗಳು ಮಕ್ಕಳಿಂದ ದೊಡ್ಡವರಿಗೆ ಮತ್ತು ದೊಡ್ಡವರಿಂದ ಮಕ್ಕಳಿಗೆ ಹರಡಿ ಬಿಡುತ್ತವೆ. ಯಾರಿಗೆ ತಲೆಯಲ್ಲಿ ಅತಿಯಾಗಿ ಹೇನುಗಳು ಕಂಡುಬರುತ್ತವೆ ಅವರಿಗೆ ಜೀವನದಲ್ಲಿ ಕೆಟ್ಟದಾಗುತ್ತದೆ ಎಂಬ ನಂಬಿಕೆ ಇದೆ.
ಚಿಕ್ಕಮಕ್ಕಳಲ್ಲಿ ತಲೆಯಲ್ಲಿ ಹೇನುಗಳು ಹೆಚ್ಚಾಗಿ ಕಂಡು ಬರುವುದರಿಂದ ಅವರಿಗೆ ಕಬ್ಬಿಣದಂಶದ ಕೊರತೆ ಉಂಟಾಗಿ ಅನಿಮಿಯ ಸಮಸ್ಯೆ ಎದುರಾಗುತ್ತದೆ. ಇದೇ ರೀತಿ ಗರ್ಭಿಣಿ ಮಹಿಳೆಯರಿಗೂ ಕೂಡ ರಕ್ತ ಸಂಚಾರದಲ್ಲಿ ಕಬ್ಬಿಣದ ಅಂಶ ಕಡಿಮೆಯಾಗುವಂತೆ ಹೇನುಗಳು ಮಾಡುತ್ತವೆ.
ಜೊತೆಗೆ ತಲೆಯಲ್ಲಿ ವಿಪರೀತ ಹೇನುಗಳು ಇದ್ದಾಗ ಆಗಾಗ ಕಚ್ಚುತ್ತಾ ಇರುತ್ತವೆ ಮತ್ತು ಇದರಿಂದ ವಿಪರೀತ ಕಿರಿಕಿರಿ ಉಂಟಾಗುತ್ತದೆ. ಹಾಗಾಗಿ ಇವುಗಳಿಂದ ಹೇಗಾದರೂ ಮಾಡಿ ಮುಕ್ತಿ ಸಿಕ್ಕರೆ ಸಾಕು ಎನಿಸುತ್ತದೆ.
* ಕೊಬ್ಬರಿ ಎಣ್ಣೆ ಮತ್ತು ಕರ್ಪೂರ
ತಲೆ ಹೇನುಗಳ ನಿವಾರಣೆಗೆ ಮಾಡಬಹುದಾದ ಅತ್ಯಂತ ಸರಳ ಪರಿಹಾರ ಇದು ಎಂದು ಹೇಳಬಹುದು. ಬಹು ಕಡಿಮೆ ಖರ್ಚಿನಲ್ಲಿ ತಲೆ ಹೇನುಗಳ ನಿವಾರಣೆ ಆಗುತ್ತದೆ. ಸಾಧಾರಣವಾಗಿ ಕೊಬ್ಬರಿ ಎಣ್ಣೆ ಮತ್ತು ಕರ್ಪೂರ ಎಲ್ಲರ ಮನೆಯಲ್ಲೂ ಇರುತ್ತದೆ.
ಹಾಗಾಗಿ ಇವುಗಳ ಮಿಶ್ರಣ ಹೇನುಗಳು ನಾಶವಾಗುವಂತೆ ಮಾಡುತ್ತದೆ. ಆಂಟಿ ಪ್ಯಾರಾಸೈಟ್ ಗುಣಲಕ್ಷಣಗಳು ಕರ್ಪೂರದಲ್ಲಿ ಕಂಡುಬರುತ್ತವೆ.
ಚಿಕ್ಕ ಮಕ್ಕಳ ತಲೆಕೂದಲನ್ನು ಪುಷ್ಟೀಕರಿಸಿ ಯಾವುದೇ ರಾಸಾಯನಿಕ ಶಾಂಪುಗಳು ಮಾಡದಂತಹ ಕೆಲಸವನ್ನು ಕೊಬ್ಬರಿ ಎಣ್ಣೆ ಮತ್ತು ಕರ್ಪೂರ ಮಾಡಿ ಮುಗಿಸುತ್ತದೆ. ನೆತ್ತಿಯ ಭಾಗದ ರಕ್ಷಣೆ ಜೊತೆಗೆ ಹೇನುಗಳ ನಿವಾರಣೆ ಕೂಡ ಇದರಿಂದ ಆಗುತ್ತದೆ ಎಂದು ಹೇಳಬಹುದು.
ತಲೆಯಲ್ಲಿ ಹೇನುಗಳ ನಿವಾರಣೆಗೆ ಕೊಬ್ಬರಿ ಎಣ್ಣೆ ಮತ್ತು ಕರ್ಪೂರ ಬಳಕೆ ಮಾಡುವುದು ಹೇಗೆ?
ಮೊದಲು ಸ್ವಲ್ಪ ತೆಂಗಿನ ಎಣ್ಣೆಯನ್ನು ತೆಗೆದುಕೊಂಡು ಅದಕ್ಕೆ ಕರ್ಪೂರವನ್ನು ಜಜ್ಜಿ ಪುಡಿ ಮಾಡಿ ಹಾಕಿ
ಎರಡನ್ನು ಸಹ ಚೆನ್ನಾಗಿ ಮಿಶ್ರಣ ಮಾಡಿ ತಲೆ ಕೂದಲಿನ ಬೇರುಗಳಿಗೆ ಅನ್ವಯವಾಗುವಂತೆ ಹಚ್ಚಿ. ಇದರಿಂದ ಕೇವಲ ಹೇನುಗಳು ಮಾತ್ರವಲ್ಲದೆ ತಲೆ ಕೂದಲಿನಲ್ಲಿ ಕಂಡುಬರುವ ಹೇನುಗಳ ಮೊಟ್ಟೆಗಳು ಸಹ ಇಲ್ಲವಾಗುತ್ತದೆ.
ಮೆಂತ್ಯ ಕಾಳುಗಳು
ಮೆಂತ್ಯ ಕಾಳುಗಳಲ್ಲಿ ಕೀಟನಾಶಕ ಗುಣಗಳು, ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ಫಂಗಲ್ ಗುಣಲಕ್ಷಣಗಳು ಅಪಾರ ಪ್ರಮಾಣದಲ್ಲಿ ಕಂಡುಬರುತ್ತವೆ. ಮೆಂತೆ ಕಾಳುಗಳನ್ನು ಇಡೀ ರಾತ್ರಿ ನೆನೆಹಾಕಿ ಬೆಳಗ್ಗೆ ರುಬ್ಬಿ ಪೇಸ್ಟ್ ತಯಾರು ಮಾಡಿಕೊಳ್ಳಿ.
ಕೊಬ್ಬರಿ ಎಣ್ಣೆಯ ಜೊತೆಗೆ ಮೆಂತ್ಯೆ ಕಾಳುಗಳ ಪೇಸ್ಟ್ ಮಿಶ್ರಣ ಮಾಡಿ ತಲೆಗೆ ಹಚ್ಚಿಕೊಂಡು ಸುಮಾರು ಅರ್ಧ ದಿನ ಹಾಗೆ ಬಿಟ್ಟು ನಂತರ ತಲೆಸ್ನಾನ ಮಾಡುವುದರಿಂದ ಅತ್ಯದ್ಭುತ ಪರಿಹಾರವನ್ನು ಕಂಡುಕೊಳ್ಳಬಹುದು. ಮೆಂತ್ಯ ಕಾಳುಗಳ ಪೇಸ್ಟ್ ಜೊತೆಗೆ ಸ್ವಲ್ಪ ಕರ್ಪೂರವನ್ನು ಸಹ ಬಳಕೆ ಮಾಡಬಹುದು.
ಬೆಳ್ಳುಳ್ಳಿ ಮತ್ತು ನಿಂಬೆ ಹಣ್ಣಿನ ಜ್ಯೂಸ್
ಬೆಳ್ಳುಳ್ಳಿಯ ಗಾಢವಾದ ವಾಸನೆ ಹೇನುಗಳಿಗೆ ಆಗಿಬರುವುದಿಲ್ಲ. ಇದರ ಜೊತೆಗೆ ನಿಂಬೆಹಣ್ಣಿನ ಔಷಧೀಯ ಪ್ರಭಾವಗಳು ಬೆರೆಯುವುದರಿಂದ ದಪ್ಪ ಹೇನುಗಳು ಮತ್ತು ಅವುಗಳ ಮೊಟ್ಟೆಗಳು ನಾಶವಾಗುತ್ತವೆ. ಮುಂದೆ ಎಂದು ಸಹ ತಲೆಗೆ ಹೇನು ಬೀಳದೆ ಇರುವಂತೆ ಇವುಗಳ ರಕ್ಷಣೆ ಮಾಡುತ್ತವೆ.
ಸೀತಾಫಲ ಹಣ್ಣು
ಸೀತಾಫಲ ಹಣ್ಣು ತಿನ್ನಲು ಬಹಳ ರುಚಿ ಇರುತ್ತದೆ. ಆದರೆ ಇವುಗಳ ಬೀಜಗಳಲ್ಲಿ ಅಪಾರ ಪ್ರಮಾಣದ ಔಷಧೀಯ ಅಂಶಗಳು ಇರುತ್ತವೆ ಎಂದು ಹೇಳುತ್ತಾರೆ.
ಅದರಲ್ಲೂ ತಲೆಗೆ ಬೀಳುವ ಹೇನುಗಳಿಗೆ ರಾಮಬಾಣವಾಗಿ ಇದು ಕೆಲಸ ಮಾಡುತ್ತದೆ. ಬಹಳ ಬೇಗನೆ ತಲೆ ಹೇನುಗಳಿಂದ ಮುಕ್ತಿ ಪಡೆಯಲು ನೀವು ಸೀತಾಫಲ ಹಣ್ಣುಗಳ ಬೀಜಗಳನ್ನು ಪೌಡರ್ ರೂಪದಲ್ಲಿ ಮಾಡಬಹುದು.
ಬೇವಿನ ಎಣ್ಣೆ
ಬೇವಿನ ಎಣ್ಣೆಯಲ್ಲಿ ಅಧಿಕ ಪ್ರಮಾಣದ ಆಂಟಿ ಬ್ಯಾಕ್ಟೀರಿಯಲ್ ಮತ್ತು anti-microbial ಗುಣಲಕ್ಷಣಗಳಿವೆ. ಇದರಿಂದ ಹೇನುಗಳ ಪರಿಣಾಮಕಾರಿ ನಿವಾರಣೆಯಲ್ಲಿ ಬೇವಿನ ಎಣ್ಣೆ ಅತ್ಯದ್ಭುತವಾಗಿ ಕೆಲಸ ಮಾಡುತ್ತದೆ ಎಂದು ಹೇಳಬಹುದು.
ಸಾಕಷ್ಟು ಆಯುರ್ವೇದಿಕ ಅಂಗಡಿಗಳಲ್ಲಿ ಬೇವಿನ ಎಣ್ಣೆ ಸಿಗುತ್ತದೆ. ಒಂದು ವೇಳೆ ನಿಮಗೆ ಹಸಿ ಬೇವಿನಸೊಪ್ಪು ಲಭ್ಯವಿದ್ದರೆ, ಅದನ್ನು ಚೆನ್ನಾಗಿ ಜಜ್ಜಿ ಪೇಸ್ಟ್ ತಯಾರು ಮಾಡಿಕೊಂಡು ತಲೆಗೆ ಹಚ್ಚಿ. ಬೇಕೆಂದರೆ ಇದಕ್ಕೆ ತುಳಸಿ ಎಲೆಗಳನ್ನು ಸಹ ಹಾಕಿಕೊಳ್ಳಬಹುದು.








