- ಹವಾಮಾನ ವೈಪರೀತ್ಯದಿಂದ ಜನ ಕಂಗಾಲು
- ಅನಾರೋಗ್ಯ ಹೆಚ್ಚಳ: ಆಸ್ಪತ್ರೆಗಳು ಫುಲ್ ಫುಲ್
NAMMUR EXPRESS NEWS
ಬೆಂಗಳೂರು: ಅಯ್ಯೋ ಹಗಲು ವೇಳೆ ಎಲ್ಲೆಲ್ಲೂ ಬಿಸಿಲೋ ಬಿಸಿಲು. ಬಿಸಿಲಿನ ಝಳವನ್ನೂ ತಡೆಯೋಕೆ ಸಾಧ್ಯವೇ ಇಲ್ಲ ಎಂಬಷ್ಟು ಮೈಸುಡುವ ಬಿಸಿಲಿನ ಜೊತೆಗೆ ಸೆಕೆಯ ಬೇಗೆಗೆ ಜನರು ತತ್ತರಿಸಿ ಹೋಗಿದ್ದಾರೆ. ಇನ್ನು ಶಿವರಾತ್ರಿ ಮುಗಿದರೂ ಚಳಿ ಬಿಟ್ಟಿಲ್ಲ.
ಮೈ ಕೊರೆಯುವ ಚಳಿ ಜನರಿಗೆ ಗಾಬರಿ ಹುಟ್ಟಿಸಿದೆ. ಚಳಿ ಕಾರಣ ಅನಾರೋಗ್ಯ ಹೆಚ್ಚಳವಾಗುತ್ತಿದೆ. ಮಕ್ಕಳು ಸೇರಿ ಎಲ್ಲರೂ ಜ್ವರ, ಶೀತದಿಂದ ಬಳಲುತ್ತಿದ್ದಾರೆ.
ಕರಾವಳಿಯ ಜನತೆ ಬಿಸಿಲಿನ ಧಗೆಗೆ ಹೈರಾಣಾಗಿದ್ದರೆ ಬೆಂಗಳೂರು ಮತ್ತೆ ಕೆಲ ಕಡೆಗಳಲ್ಲಿ ಕಳೆದ ಎರಡು ಮೂರು ದಿನಗಳಿಂದ ಬೆಳಗ್ಗೆ ಮತ್ತು ರಾತ್ರಿ ತಂಪು ವಾತಾವರಣದ ಮೋಡ ಕವಿದ ವಾತಾವರಣ ಕಂಡುಬರುತ್ತಿದೆ. ಈ ನಡುವೆ ಈ ಹವಾಮಾನದ ಪರಿಣಾಮ ಅನಾರೋಗ್ಯ ಸಮಸ್ಯೆಗಳು ಹೆಚ್ಚು ಕಂಡುಬರುತ್ತಿವೆ.
ಒಂದೆಡೆ ಮೈ ಸುಡುವ ಬಿಸಿಲಿನ ಶಾಖ ಮತ್ತೊಂದೆಡೆ ಎಚ್3ಎನ್2 ವೈರಸ್ ಹರಡುವಿಕೆ ಹೆಚ್ಚಾಗುತ್ತಿದೆ.
ಆಸ್ಪತ್ರೆಗಳು ಫುಲ್ ಫುಲ್: ಅರೋಗ್ಯ ಸಿಬ್ಬಂದಿ ಕೊರತೆ
ರಾಜ್ಯದಲ್ಲಿ ಹವಾಮಾನ ಏರುಪೇರು ಕಾರಣ ಜನರಲ್ಲಿ ಅನಾರೋಗ್ಯ ಹೆಚ್ಚಳವಾಗಿದೆ. ಎಲ್ಲೆಡೆ ಆಸ್ಪತ್ರೆಗಳು ಜನರಿಂದ ತುಂಬಿ ಹೋಗಿವೆ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ.