ಕೋಣಂದೂರು ಹಾಗೂ ತೀರ್ಥಹಳ್ಳಿಯಲ್ಲಿ ಉಚಿತ ಕಿವಿಯ ಶ್ರವಣ ತಪಾಸಣೆ
– ಸೆ. 28 ಮತ್ತು 29 ರಂದು ಶ್ರವಣ ತಪಾಸಣೆ ಹಾಗೂ ಶ್ರವಣ ಯಂತ್ರಕ್ಕೆ ಸಹಾಯಧನ ಕಾರ್ಯಕ್ರಮ ಹಾಗೂ ವಿತರಣೆ
– ಅಂತಾರಾಷ್ಟ್ರೀಯ ಸಂಸ್ಥೆಯಲ್ಲಿ ಅನುಭವ ಪಡೆದಿರುವ ತಜ್ಞರಿಂದ ಶಿಬಿರ
NAMMUR EXPRESS NEWS
ರೋಟರಿ ಕ್ಲಬ್ ಕೋಣಂದೂರು (ರಿ). ಹಾಗೂ
ತೀರ್ಥಹಳ್ಳಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ನೇತೃತ್ವದಲ್ಲಿ
ಟೀಮ್ ಈಶ್ವರ್ ಮಲ್ಪೆ ಸಹಯೋಗದೊಂದಿಗೆ ಉಚಿತ ಕಿವಿಯ ಶ್ರವಣ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಸಹಾಯಧನ ಕಾರ್ಯಕ್ರಮ ಹಾಗೂ ವಿತರಣೆ ಕಾರ್ಯಕ್ರಮವನ್ನು 28.09.2025 ಭಾನುವಾರ, ಬೆಳಗ್ಗೆ 10:00 ರಿಂದ 5:00 ರವರೆಗೆ ಸ್ಥಳ: ಸಮುದಾಯ ಆರೋಗ್ಯ ಕೇಂದ್ರ, ಕೋಣಂದೂರುರಲ್ಲಿ ಆಯೋಜನೆ ಮಾಡಲಾಗಿದೆ.
ದಿನಾಂಕ : 29.09.2025 ಸೋಮವಾರ ಬೆಳಗ್ಗೆ 10:00 ರಿಂದ 5:00 ರವರೆಗೆ ಸ್ಥಳ: ಲಯನ್ಸ್ ಭವನ ತುಂಗಾ ತೀರ ಮಾಧವ ಮಂದಿರ ಪಕ್ಕ ತೀರ್ಥಹಳ್ಳಿಯಲ್ಲಿ ಕೂಡ ಉಚಿತ ಕಿವಿಯ ಶ್ರವಣ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಸಹಾಯಧನ ಕಾರ್ಯಕ್ರಮ ಹಾಗೂ ವಿತರಣೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.
ಟೀಮ್ ಈಶ್ವರ್ ಮಲ್ಪೆಯವರು ಅನೇಕ ಸಾಮಾಜಿಕ ಕಾರ್ಯವನ್ನು ಮುಂದುವರಿಸಿಕೊಂಡು ಬರುತ್ತಿದ್ದು ಈಗ ನಾವು ಶ್ರವಣದ ಸಮಸ್ಯೆಯಿಂದ (ಕೇಳಿಸಿಕೊಳ್ಳುವ ಸಮಸ್ಯೆ) ಬಳಲುತ್ತಿರುವ ರೋಗಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಉಚಿತ ಶಿಬಿರವನ್ನು ಮಾಡುತ್ತಿದ್ದು ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ನಮ್ಮ ಸಂಸ್ಥೆಯಾದ ಟೀಮ್ ಈಶ್ವರ್ ಮಲ್ಪೆಯವರು ಶ್ರವಣದ ಯಂತ್ರಕ್ಕೆ (Hearing Machine) ಆಗುವ ವೆಚ್ಚದ ಶೇಕಡಾ 40% ಮೊತ್ತವನ್ನು ಭರಿಸಲಾಗುತ್ತಿದ್ದು ರೋಗಿಗಳು ಇವರ ಶಿಬಿರವನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿ ವಿನಂತಿ. ಟೀಮ್ ಈಶ್ವರ್ ಮಲ್ಪೆ ಮತ್ತು ತೀರ್ಥಹಳ್ಳಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ತೀರ್ಥಹಳ್ಳಿ ತಾಲೂಕು ಘಟಕ ಇವರು ಆಯೋಜಿಸಿರುವ ಈ ಶಿಬಿರದಲ್ಲಿ ನಿಮ್ಮ ಪ್ರೀತಿಪಾತ್ರರಿಗೆ ಕೇಳಿಸಿಕೊಳ್ಳುವ ತೊಂದರೆಯವರಿಗೆ ಸಂತೋಷವನ್ನು ನೀಡಿ.
: ಸೂಚನೆಗಳು :
* ನೋಂದಣಿ ಕಡ್ಡಾಯವಾಗಿದೆ ಕರೆಮಾಡಿ ನೋಂದಾಯಿಸಿಕೊಳ್ಳಿ.
* ಹಿರಿಯರಿಗೆ ಮೊದಲ ಆದ್ಯತೆ.
* ಶ್ರವಣ ಪರೀಕ್ಷೆಯ ಯಾವುದಾದರೂ ಹಳೆಯ ವರದಿ (Old Report) ಇದ್ದರೆ ಜೊತೆಯಲ್ಲಿ ತನ್ನಿ.
* ಮೊದಲು ನೋಂದಾಯಿಸುವ 40 ಜನರು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು.
* ಅಂತಾರಾಷ್ಟ್ರೀಯ ಸಂಸ್ಥೆಯಲ್ಲಿ ಅನುಭವ ಪಡೆದಿರುವ ವೈದ್ಯರು ಈ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.
* ಈಶ್ವರ್ ಮಲ್ಪೆ ಟೀಮ್ನವರು ದೇಣಿಗೆ ಮೊತ್ತದಿಂದ 40% ಶ್ರವಣ ಸಾಧನದ ಮೊತ್ತವನ್ನು ಪಾವತಿಸುತ್ತಾರೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 8951804399,
+91 99010 62533
ಸಾರ್ವಜನಿಕರು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು.








