- ಆರೋಗ್ಯ ತುರ್ತು ಪರಿಸ್ಥಿತಿ ಸೃಷ್ಠಿ ಆತಂಕ ಸಾಧ್ಯತೆ
- 2 ತಿಂಗಳ ಸಂಬಳ ಬಾಕಿ: ಗುರುವಾರದಿಂದಲೇ ಬಂದ್ ಸಾಧ್ಯತೆ: ಸರ್ಕಾರ ಸಮಸ್ಯೆ ಬಗೆಹರಿಸಲಿ…!
NAMMUR EXPRESS NEWS
ಬೆಂಗಳೂರು: 108 ಆಂಬುಲೆನ್ಸ್ ಸಿಬ್ಬಂದಿ ಬಾಕಿ ವೇತನ ಬಿಡುಗಡೆಗೆ ಒತ್ತಾಯಿಸಿ ಗುರುವಾರದಿಂದ ಮುಷ್ಕರ ನಡೆಸುತ್ತಿದ್ದಾರೆ. ಹೀಗಾಗಿ ಗುರುವಾರ ದಿಂದ ರಾಜ್ಯಾಧ್ಯಂತ ಆಂಬುಲೆನ್ಸ್ ಸೇವೆ ಸ್ಥಗಿತಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.
108 ಆಂಬುಲೆನ್ಸ್ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಪರಮಶಿವಯ್ಯ ಅವರು ಮಾತನಾಡಿ, ಕಳೆದ ಎರಡು ತಿಂಗಳಿನಿಂದ ರಾಜ್ಯದಲ್ಲಿ ಆಂಬುಲೆನ್ಸ್ ಸೇವೆ ಒದಗಿಸುತ್ತಿರುವಂತ ಜಿವಿಕೆ ವೇತನವನ್ನು ಬಾಕಿ ಉಳಿಸಿಕೊಂಡಿದೆ. ವೇತನವಿಲ್ಲದೇ ನೌಕರರು ಸಂಕಷ್ಟಕ್ಕೆ ಸಿಲುಕುವಂತೆ ಆಗಿದೆ. ಈ ಹಿಂದೆ ಅನೇಕ ಬಾರಿ ವೇತನ ಬಿಡುಗಡೆಗೆ ಕೋರಿದ್ದರೂ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಗುರುವಾರ ಸಂಜೆಯೊಳಗೆ ಸಂಬಳ ನೀಡದೇ ಇದ್ದರೇ ಆಂಬುಲೆನ್ಸ್ ಸೇವೆ ಸ್ಥಗಿತಗೊಳಿಸೋದಾಗಿ ಎಚ್ಚರಿಸಿದ್ದಾರೆ.
ನಮಗೆ ಬಾಕಿ ವೇತನ ನೀಡಬೇಕು. ಗುರುವಾರದ ಒಳಗೆ ನೀಡದೇ ಇದ್ದರೇ ರಾಜ್ಯಾಧ್ಯಂತ ಆಂಬುಲೆನ್ಸ್ ಸೇವೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗುತ್ತದೆ. ಆಂಬುಲೆನ್ಸ್ ಸೇವೆ ಸ್ಥಗಿತದಿಂದ ಆರೋಗ್ಯ ತುರ್ತು ಪರಿಸ್ಥಿತಿ ಉಂಟಾದರೇ ಅದಕ್ಕೆ ಜಿವಿಕೆ ಸಂಸ್ಥೆಯೇ ನೇರ ಕಾರಣ ಎಂಬುದಾಗಿ ಹೇಳಿದರು. ಮತ್ತೊಂದೆಡೆ ಮುಷ್ಕರ, ಆಂಬುಲೆನ್ಸ್ ಸೇವೆ ಸ್ಥಗಿತಗೊಳಿಸುವಂತ ಎಚ್ಚರಿಕೆ ನೀಡಿರುವಂತ ನೌಕರರೊಂದಿಗೆ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಸೇವೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ಮುಂದುವರೆಸಿಕೊಂಡು ಹೋಗುವಂತೆ, ಬಾಕಿ ವೇತನ ಬಿಡುಗಡೆ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿಯೂ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಕಳೆದ ತಿಂಗಳು 108 ತಂತ್ರಜ್ಞಾನ ಸೇವೆ ವ್ಯತ್ಯಾಸ ಉಂಟಾಗಿ ಸಾವಿರಾರು ಮಂದಿಗೆ ತೊಂದರೆ ಉಂಟಾಗಿತ್ತು. ಸರ್ಕಾರ ತಕ್ಷಣ ಮಧ್ಯ ಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂಬುದು ನಮ್ಮೂರ್ ಎಕ್ಸ್ ಪ್ರೆಸ್ ಮನವಿ.