ಇಸಿಐಎಲ್ನಲ್ಲಿ ಐಟಿಐ ಅಭ್ಯರ್ಥಿಗಳಿಗೆ ಉದ್ಯೋಗ
– ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ
– ಅರ್ಜಿ ಸಲ್ಲಿಕೆಗೆ ಕೊನೆಯ ದಿನ: 10.10.2023
NAMMUR EXPRESS NEWS
ಬೆಂಗಳೂರು: ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಇಸಿಐಎಲ್) ಸಂಸ್ಥೆಯು ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಟ್ರೇಡ್ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಅಭ್ಯರ್ಥಿಗಳು ಇಲ್ಲಿ ನೀಡಲಾದ ಮಾಹಿತಿಗಳ ಅನ್ವಯ ಅರ್ಜಿ ಸಲ್ಲಿಸಬಹುದು.
ವಿಭಾಗವಾರು ಹುದ್ದೆಗಳು:
ಇಎಂ 190, ಎಲೆಕ್ಟ್ರಿಷಿಯನ್ 80, ಫಿಟ್ಟರ್ 80, ಟರ್ನರ್ 20
ಮೆಕ್ಯಾನಿಸ್ಟ್ 15, ಮೆಕ್ಯಾನಿಸ್ಟ್ (ಜಿ) 10, ಕೋಪಾ 40, ವೆಲ್ಡರ್ 25
ಪೈಂಟರ್ 4, ಇತರೆ 20
ಅರ್ಜಿ ಸಲ್ಲಿಕೆ ವಿಧಾನ: ಇಸಿಐಎಲ್ನ ವೆಬ್ಸೈಟ್ಗೆ ಲಾಗಿನ್ ಮಾಡಿಕೊಂಡು ಅರ್ಜಿ ವಿಭಾಗದಲ್ಲಿ ಕ್ಲಿಕ್ಕಿಸಬೇಕು
ಆನ್ಲೈನ್ ನಮೂನೆಯ ಅರ್ಜಿ ದೊರೆಯಲಿದ್ದು, ಭರ್ತಿ ಮಾಡಿ ಅದೇ ವೆಬ್ಸೈಟ್ನಲ್ಲಿ ಕಳುಹಿಸಬೇಕು
ಅರ್ಹತೆಗಳೇನೇನು?:
ವಿದ್ಯಾರ್ಹತೆ: ಅಭ್ಯರ್ಥಿ ಐಟಿಐ ತೇರ್ಗಡೆಯಾಗಿರಬೇಕು. ಜತೆಗೆ ಎನ್ಸಿವಿಟಿ ಪ್ರಮಾಣ ಪತ್ರ ಇರಬೇಕಿದ್ದು, ಅರ್ಜಿ ಸಲ್ಲಿಕೆ ವೇಳೆ ದಾಖಲೆಗಳ ಜತೆಗೆ ಸಲ್ಲಿಸಬೇಕು.
ವಯೋಮಿತಿ: 18 ವರ್ಷ ಪೂರೈಸಿದ ಎಲ್ಲ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸಾಮಾನ್ಯ ವರ್ಗದ ಅಭ್ಯರ್ಥಿಗೆ ಗರಿಷ್ಠ 25 ವರ್ಷ, ಒಬಿಸಿಗಳಿಗೆ 28 ವರ್ಷ, ಎಸ್ಸಿ/ ಎಸ್ಟಿಗಳಿಗೆ 30 ವರ್ಷ ಗರಿಷ್ಠ ವಯೋಮಿತಿಯಾಗಿದೆ.
ಆಯ್ಕೆ ಹೇಗೆ?:
– ಅಭ್ಯರ್ಥಿಗಳ ಆಯ್ಕೆಯು ಪ್ರಮುಖವಾಗಿ ಐಟಿಐ ಅಂಕಗಳ ಆಧಾರದಲ್ಲಿ ನಡೆಯಲಿದೆ
– ಶೇ.70 ಹುದ್ದೆಗಳನ್ನು ಸರ್ಕಾರಿ ಐಟಿಐ ಕಾಲೇಜು ಅಭ್ಯರ್ಥಿಗಳಿಗೆ ಹಾಗೂ ಶೇ.30 ಹುದ್ದೆಗಳನ್ನು ಖಾಸಗಿ ಐಟಿಐ ಕಾಲೇಜುಗಳ ಅಭ್ಯರ್ಥಿಗಳಿಗೆ ನೀಡಲಾಗುತ್ತದೆ.
– ಅ.16ರಿಂದ ಅ.21ವರೆಗೆ ದಾಖಲೆಗಳ ಪರಿಶೀಲನೆ ನಡೆಯಲಿದೆ. ಈ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.
ಇಎಂ ಹುದ್ದೆಗಳಿಂದ ಕೋಪಾ ಹುದ್ದೆಗಳ ತನಕ 8,050 ರೂ., ಉಳಿದ ಎಲ್ಲ ವಿಭಾಗಗಳ ಹುದ್ದೆಗೆ ಮಾಸಿಕವಾಗಿ 7,700 ಸ್ಟೈಪೆಂಡ್ ನೀಡಲಾಗುತ್ತದೆ. ಅಪ್ರೆಂಟಿಶಿಪ್ ಅವಧಿ ಆಯ್ಕೆಯಾದ ಅಭ್ಯರ್ಥಿಗೆ ಒಂದು ವರ್ಷದ ಅವಧಿಗೆ ಅಪ್ರೆಂಟಿಶಿಪ್ ಅವಧಿ ಇರಲಿದ್ದು, ಈ ವರ್ಷದ ನವೆಂಬರ್ನಿಂದ ತರಬೇತಿ ಪ್ರಾರಂಭವಾಗಲಿದೆ. ಅಪ್ರೆಂಟಿಸ್ನ ಕಾರ್ಯಗಳು ಕಾರ್ಯಾಗಾರಗಳಲ್ಲಿ ಭಾಗವಹಿಸುತ್ತಾ ಕರ್ತವ್ಯಗಳನ್ನು ನಿರ್ವಹಿಸಬೇಕು. ಜತೆಗೆ ಸಂಸ್ಥೆಯ ರಕ್ಷಣಾ ಕಾರ್ಯವಿಧಾನಗಳ ಜವಾಬ್ದಾರಿಯೂ ಇವರದ್ದಾಗಿದ್ದು, ವಿವಿಧ ಅಸೈನ್ಮೆಂಟ್ಗಳಿಗಾಗಿ ಸೈಟ್ಗಳಿಗೆ ಭೇಟಿ ನೀಡುವುದು ಅಪ್ರೆಂಟಿಸ್ಗಳ ಕಾರ್ಯವಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನ: 10.10.2023