- ಕೊಲೆ ಮಾಡಿ ನಾಪತ್ತೆ ದೂರು ದಾಖಲಿಸಿದ..!
- ಆಸ್ತಿ ಕಲಹದಿಂದ ಹತ್ಯೆ: ಚಿಕ್ಕೋಡಿಯಲ್ಲಿ ಘಟನೆ
ಚಿಕ್ಕೋಡಿ: ಆಸ್ತಿ ಆಸೆಗೆ ಅಣ್ಣನ ಮಗನನ್ನೆ ಕೊಂದ ಚಿಕ್ಕಪ್ಪ ಇದೀಗ ಪೋಲೀಸ್ ಅತಿಥಿಯಾದ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ ನಡೆದಿದೆ. ಅಚ್ಚರಿ ಎಂದರೆ ಕೊಲೆ ಮಾಡಿ ನಾಪತ್ತೆ ದೂರು ದಾಖಲಿಸಿದ್ದ. ಕಾಣೆಯಾದ ಯುವಕನ ಕುರಿತು ದೂರು ನೀಡಿದ ಆತನ ಚಿಕ್ಕಪ್ಪನೇ ಕೊಲೆ ಮಾಡಿದ ಪ್ರಕರಣವನ್ನು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಗ್ರಾಮೀಣ ಠಾಣೆಯ ಪೆÇಲೀಸರು ಭೇದಿಸಿದ್ದಾರೆ. ನಿಪ್ಪಾಣಿ ತಾಲೂಕಿನ ಬೆನಾಡಿ ಗ್ರಾಮದ ವಿಶಾಲ ಅಲಿಯಾಸ್ ಅಪ್ಪಾಸೋ ಮಹೇಶ್ ಪಾಟೀಲ(25) ಕೊಲೆಯಾದ ಯುವಕ. ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಚಿಕ್ಕಪ್ಪ ಬೆನಾಡಿ ಗ್ರಾಮದ ಸತೀಶ್ ದಾದಾಸಾಹೇಬ ಪಾಟೀಲ(45), ಅಮೋಲ ಪ್ರಕಾಶ ವಡ್ಡರ(36), ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕಾಗಲ್ ತಾಲ್ಲೂಕಿನ ಹೊನ್ನಳಿ ಗ್ರಾಮದ ದಿಲೀಪ ಪರಶುರಾಮ ವಡ್ಡರ(38), ಬಾಬಾಸಾಹೇಬ ಪಾಂಡುರಂಗ ಕಾಂಬಳೆ(47) ಮತ್ತು ಕರವೀರ ತಾಲೂಕಿನ ಖಬವಡೆ ಗ್ರಾಮದ ವಿಕಾಸ ವಕೀಲ ಪಾಟೀಲ(25) ಬಂಧಿತ ಆರೋಪಿತರು. ಕೊಲೆ ಆರೋಪದಡಿ ಐವರನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಎಲ್ಲೆಡೆ ಕರೋನಾ ಬಳಿಕ ಆಸ್ತಿ ಕಲಹಗಳು ಹೆಚ್ಚಾಗಿದ್ದು, ಕೊಲೆ, ಗಲಾಟೆ ಹೆಚ್ಚಿದೆ.