ಕರಾವಳಿ ಟಾಪ್ ನ್ಯೂಸ್
– ಕರಾವಳಿಯಲ್ಲಿ ಲವ್ ಜಿಹಾದ್?!
– ಬಿ.ಸಿ.ರೋಡು: ಅಯ್ಯೋ ಟ್ರಾಫಿಕ್ ಜಾಮ್
– ಮಂಗಳೂರು: ಗೋಮಟೇಶ್ವರ ಎಕ್ಸ್ಪ್ರೆಸ್ ರೈಲು ಮಂಗಳೂರು ಸೆಂಟ್ರಲ್ಗೆ ಇನ್ನು ಬರಲ್ಲ
NAMMUR EXPRESS NEWS
ಮೂಡುಬಿದಿರೆ: ವಿದ್ಯಾಗಿರಿಯ ಕೆಫೆಯೊಂದರಲ್ಲಿ ಜೈನ ವಿದ್ಯಾರ್ಥಿನಿಯೊಂದಿಗೆ ಅನ್ಯಕೋಮಿನ ಯುವಕ ಚೆಲ್ಲಾಟವಾಡಿರುವುದು ಮೂಡುಬಿದಿರೆ ಬಜರಂಗದಳದ ಮಿಂಚಿನ ಕಾರ್ಯಾಚರಣೆಯಿಂದ ಬೆಳಕಿಗೆ ಬಂದಿದೆ.
ಈ ಮೂಲಕ ಜೈನಕಾಶಿ ಮೂಡುಬಿದಿರೆಯಲ್ಲಿ ಲವ್ ಜಿಹಾದ್ ಇನ್ನೂ ಜೀವಂತವಾಗಿದೆ ಎನ್ನುವುದಕ್ಕೆ ಸಂಶಯ ಮೂಡುತ್ತಿದೆ. ಮೂಡುಬಿದಿರೆ ಸಮೀಪದ ತೋಡಾರಿನಲ್ಲಿರುವ ಯೆನೆಪೋಯ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ, ಮೂಡುಬಿದಿರೆ ನಗರದ ನಿವಾಸಿಯಾದ ಯುವತಿ ಅನ್ಯಕೋಮಿನ ಯುವಕ, ಇನ್ನೊಬ್ಬಳು ಅನ್ಯಕೋಮಿನ ಯುವತಿಯೊಂದಿಗೆ ವಿದ್ಯಾಗಿರಿಯಲ್ಲಿರುವ ಕೆಫೆಗೆ ಬಂದಿದ್ದರು. ಗ್ಲಾಸ್ ಅಳವಡಿಸಲಾಗಿರುವ ಸ್ಥಳದಲ್ಲಿ ಕೂತು ಮೈ-ಕೈ ಮುಟ್ಟಿಕೊಂಡು, ಸಾರ್ವಜನಿಕ ಸ್ಥಳದಲ್ಲೇ ಚಕ್ಕಂದ ಮಾಡುತ್ತಿರುವುದು ಗಮನಕ್ಕೆ ಬಂದ ಕೂಡಲೇ ಮೂಡುಬಿದಿರೆ ಬಜರಂಗದಳದ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ವಿಚಾರಿಸುವಾಗ ಯುವಕ ಸ್ಥಳದಿಂದ ಪರಾರಿಯಾಗಿರುತ್ತಾನೆ.ಯುವತಿಯು ನಾವು ಸ್ನೇಹಿತರು. ಯಾವುದೇ ವಿಚಾರಗಳು ನಮ್ಮ ನಡುವಲ್ಲಿ ಇಲ್ಲ ಎಂದು ಹೇಳಿ ತಪ್ಪಿಸಿಕೊಂಡಿರುತ್ತಾಳೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಇದೀಗ ಸಾರ್ವಜನಿಕ ವಲಯದಲ್ಲಿ ಲವ್ ಜಿಹಾದ್ ಶಂಕೆ ವ್ಯಕ್ತವಾಗುತ್ತಿದೆ.
– ಬಿ.ಸಿ.ರೋಡು: ಅಯ್ಯೋ ಟ್ರಾಫಿಕ್ ಜಾಮ್!
ಬಂಟ್ವಾಳ: ಬಿ.ಸಿ.ರೋಡು-ಅಡ್ಡಹೊಳೆ ಚತುಷ್ಪಥ ಹೆದ್ದಾರಿ ಕಾಮಗಾರಿಯ ಭಾಗವಾಗಿ ಬಿ.ಸಿ.ರೋಡು ಸರ್ಕಲ್ ಬಳಿ ಕಾಮಗಾರಿ ಹಿನ್ನೆಲೆಯಲ್ಲಿ ಸಂಚಾರದ ಪಥ ಬದಲಿಸಿದ ಹಿನ್ನೆಲೆ ನ. 26ರಂದು ಮಧ್ಯಾಹ್ನದ ವೇಳೆಗೆ ಸುಮಾರು 1 ತಾಸುಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿದೆ. ಬಿ.ಸಿ.ರೋಡು ಸರ್ಕಲ್ ಬಳಿಕ ಕಾಮಗಾರಿಗಾಗಿ ಪದೇ ಪದೇ ಸಂಚಾರ ಪಥ ಬದಲಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ವಾಹನ ಚಾಲಕರಿಗೆ ಗೊಂದಲ ಉಂಟಾಗುತ್ತಿದೆ. ನ. 26ಬೆಳಗ್ಗಿನಿಂದ ಮತ್ತೆ ಪಥ ಬದಲಾವಣೆಗೊಂಡಿದ್ದು, ಮಧ್ಯಾಹ್ನದ ವೇಳೆ ರಾಷ್ಟ್ರೀಯ ಹೆದ್ದಾರಿ ಜತೆಗೆ ಧರ್ಮಸ್ಥಳ ಹೆದ್ದಾರಿ, ಬಂಟ್ವಾಳ ಪೇಟೆ ಸಂಪರ್ಕ ರಸ್ತೆಯಲ್ಲೂ ಟ್ರಾಫಿಕ್ ಜಾಮ್ ಉಂಟಾಯಿತು. ಇದೇ ಸಂದರ್ಭದಲ್ಲಿ ಟಿಪ್ಪರೊಂದು ಕಾರಿಗೆ ಢಿಕ್ಕಿಯಾಗಿ ಮತ್ತಷ್ಟು ಹೊತ್ತು ಟ್ರಾಫಿಕ್ ಜಾಮ್ ಮುಂದುವರಿಯಿತು. ಅ ಬಳಿಕ ಸಂಚಾರ ಪೊಲೀಸರು ಸ್ಥಳಕ್ಕಾಗಮಿಸಿ ಸಂಚಾರ ದಟ್ಟಣೆ ನಿಯಂತ್ರಿಸಿದರು.
– ಗೋಮಟೇಶ್ವರ ಎಕ್ಸ್ಪ್ರೆಸ್ ರೈಲು ಮಂಗಳೂರು ಸೆಂಟ್ರಲ್ಗೆ ಇನ್ನು ಬರಲ್ಲ
ಮಂಗಳೂರು: ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ 2 ಹೆಚ್ಚುವರಿ ಪ್ಲಾಟ್ಫಾರ್ಮ್ಗಳು ಸೇರ್ಪಡೆ ಎನೋ ಆಗಿವೆ. ಆದರೂ ಬೆಂಗಳೂರು, ಮುಂಬಯಿಯ ರೈಲುಗಳು ಇಲ್ಲಿಗೆ ವಿಸ್ತರಣೆಯಾಗದ ಕಾರಣ ರಾಜ್ಯದ ಹಿತಾಸಕ್ತಿಯನ್ನು ದಕ್ಷಿಣ ರೈಲ್ವೇ ಮತ್ತೆ ಅವಗಣಿಸಿದೆ ಎಂಬ ಸಂದೇಹ ಉದ್ಭವಿಸಿದೆ. ಕೆಲವು ತಿಂಗಳ ಹಿಂದೆಯಷ್ಟೇ ಮಂಗಳೂರು ಸೆಂಟ್ರಲ್ ನಿಲ್ದಾಣದ ನಂ. 4 ಮತ್ತು 5 ಪ್ಲಾಟ್ಫಾರ್ಮ್ ಗಳು ಪೂರ್ಣಗೊಂಡಾಗ ಈ ಭಾಗಕ್ಕೆ ಬೆಂಗಳೂರು, ಮುಂಬಯಿಯ ರೈಲುಗಳು ವಿಸ್ತರಣೆಯಾಗುತ್ತವೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ವಾರಕ್ಕೆ ಮೂರು ಬಾರಿ ಸಂಚರಿಸುವ ನಂ. 16575/76 ಗೋಮಟೇಶ್ವರ ಎಕ್ಸ್ಪ್ರೆಸ್ ಹಗಲು ರೈಲನ್ನು ಮಂಗಳೂರು ಸೆಂಟ್ರಲ್ಗೆ ವಿಸ್ತರಿಸುವಂತೆ ಕೇಳಿಕೊಂಡಿದ್ದರು. ಆದರೆ ಜೂನ್ 3 ರಂದು ಇದೇ ಅಧಿಕಾರಿಗಳು, ವಿಸ್ತರಣೆಯ ಪ್ರಸ್ತಾವನೆ ಯನ್ನು ರದ್ದುಪಡಿಸುವಂತೆ ದಕ್ಷಿಣ ರೈಲ್ವೇ ಮಂಡಳಿಗೆ ಪತ್ರ ಬರೆದಿರುವುದು ಬಹಿರಂಗಗೊಂಡಿದೆ. ಮಂಗಳೂರು-ತಾಂಬರಂ, ಮಂಗಳೂರು-ಬರೌನಿ ರೈಲುಗಳ ಸಂಚಾರದಿಂದಾಗಿ ಸೆಂಟ್ರಲ್ನಲ್ಲಿ ಕರ್ನಾಟಕದ ರೈಲುಗಳಿಗೆ ಜಾಗವಿಲ್ಲ. ಹೊಸದಾಗಿ ಓಡಾಟ ನಡೆಸಲಿರುವ ಮಂಗಳೂರು -ರಾಮೇಶ್ವರಂ ರೈಲು ಸಂಚಾರದಿಂದ ಗೋಮಟೇಶ್ವರ ಎಕ್ಸ್ಪ್ರಸ್ ರೈಲಿನ ವಿಸ್ತರಣೆ ಅಸಾಧ್ಯ ಎಂದು ಪತ್ರದಲ್ಲಿ ಹೇಳಲಾಗಿದೆ.