ಬ್ರಹ್ಮಾವರದಲ್ಲಿ ಹಲಸು ಮತ್ತು ಹಣ್ಣು ಮೇಳದ ರಂಗು!
– ಮೇಳ ಉದ್ಘಾಟನೆ: ಜೂ.1,2ರಂದು ಇರುತ್ತೆ
– ರೋಟರಿ ಕ್ಲಬ್ ಬ್ರಹ್ಮಾವರ, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ಸೇರಿ ಅನೇಕ ಸಂಘ ಸಂಸ್ಥೆಗಳ ಸಹಯೋಗ
– ಮೇಳಕ್ಕೆ ಭೇಟಿ ನೀಡಿ… ರೀಲ್ಸ್ ಮಾಡಿ.. ಬಹುಮಾನ ಗೆಲ್ಲಿ!
NAMMUR EXPRESS NEWS
ಬ್ರಹ್ಮಾವರ: ಕರಾವಳಿಯ ಬ್ರಹ್ಮಾವರದಲ್ಲಿ ಹಲಸು ಹಾಗೂ ಹಣ್ಣಿನ ಮೇಳದ ಸಂಭ್ರಮ ಶುರುವಾಗಿದೆ. ಮೇ 31ರಿಂದ ಜೂ.2ರವರೆಗೆ ಹಲಸಿನ ಮೇಳ ಜತೆ ಹಣ್ಣುಗಳ ಮೇಳ ಸಾವಿರಾರು ಜನರನ್ನು ಕೈ ಬೀಸಿ ಕರೆಯುತ್ತಿದೆ. ರೋಟರಿ ಕ್ಲಬ್ ಬ್ರಹ್ಮಾವರ, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ದಕ್ಷಿಣಕನ್ನಡ, ಉಡುಪಿ ಜಿಲ್ಲೆ ಬ್ರಹ್ಮಾವರ ವಲಯ, ಮಂಗಳೂರಿನ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ ಮತ್ತು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಹಾಗೂ ಡಿಪ್ಲೋಮಾ ಕೃಷಿ ಮಹಾ ವಿದ್ಯಾಲಯದ ಜಂಟಿ ಆಶ್ರಯದಲ್ಲಿ ಹಲಸು ಮತ್ತು ಹಣ್ಣು ಮೇಳ 31ರಿಂದ ಜೂನ್ 2ರವರೆಗೆ ಬ್ರಹ್ಮಾವರದ ಎಸ್.ಎಂ.ಎಸ್ ಸಮುದಾಯ ಭವನ ವಠಾರದಲ್ಲಿ ನಡೆಯಲಿದೆ.
ಬ್ರಹ್ಮಾವರ ರೋಟರಿ ಕ್ಲಬ್ ಅಧ್ಯಕ್ಷ ಉದಯಕುಮಾರ್ ಮಾಹಿತಿ ನೀಡಿ, ಮೇಳದಲ್ಲಿ ವಿಶೇಷ ಆಕರ್ಷಣೆಯಾಗಿ ಬಯಲುಸೀಮೆಯ ಸಿಹಿಯಾದ ಮಾವಿನ ಹಣ್ಣು ಹಾಗೂ ಕೆಂಪು ಹಲಸು ವಿವಿಧ ತಳಿಯ ಹಣ್ಣಿನ ಹಾಗೂ ಹೂವಿನ ಕಸಿ ಗಿಡಗಳು ದೊರಕಲಿದೆ. ಅಲ್ಲದೆ ನೂರಾರು ಮಳಿಗೆಗಳು, ಹಲವಾರು ತಿನಿಸುಗಳು, ಹಣ್ಣಿನ ಬಗೆ ಬಗೆಯ ಐಸ್ ಕ್ರೀಮ್ ಗಳು, ಹಲಸಿನ ಹೋಳಿಗೆ, ವಿವಿಧ ಹಣ್ಣುಗಳು, ತರಕಾರಿ ಬೀಜಗಳು, ಹಣ್ಣಿನ ಉತ್ಪನ್ನಗಳು, ಆಯುರ್ವೇದಿಕ್ ಹಾಗೂ ಗೃಹ ತಯಾರಿಕೆಯ ಉತ್ಪನ್ನಗಳು ದೊರಕಲಿದೆ ಎಂದರು.
ಮೂರು ದಿನಗಳ ಕಾಲ ನಡೆಯವ ಹಲಸು ಮತ್ತು ಹಣ್ಣು ಮೇಳದಲ್ಲಿ ಕೋಲಾರ, ರಾಮನಗರ ಹಾಗೂ ಮಲೆನಾಡು ಹಾಗೂ ಸ್ಥಳೀಯ ಪ್ರದೇಶದಿಂದ ಮಾವು, ಹಲಸು ಹಾಗೂ ಇತರ ಹಣ್ಣುಗಳ ಹಲವಾರು ಸ್ಟಾಲ್ ಗಳು ಅಲ್ಲದೇ ರೈತರಿಗೆ ಮಾಹಿತಿ ನೀಡಲು ಸತತ 3 ದಿನವೂ ರೈತ ಮಾಹಿತಿ ಕೇಂದ್ರ ಮತ್ತು ಕಾರ್ಯಾಗಾರ, ವಿಚಾರಗೋಷ್ಟಿಗಳು ನಡೆಯಲಿದೆ ಎಂದು ತಿಳಿಸಿದರು. ಅಲ್ವಿನ್ ಅಂದ್ರಾದೆ, ಡಾ.ಬಿ.ಧನಂಜಯ, ಆರೂರು ಶ್ರೀಧರ ಶೆಟ್ಟಿ, ಸಂಕಯ್ಯ ಶೆಟ್ಟಿ, ಗಣೇಶ ಶೆಟ್ಟಿ ಸೇರಿದಂತೆ ಅನೇಕರು ಈ ಮೇಳದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.
ಹಣ್ಣು ಮೇಳದ ರೀಲ್ಸ್ ಮಾಡಿ ಆಕರ್ಷಕ ಬಹುಮಾನ ಗೆಲ್ಲಿ
– ಫೇಸ್ಬುಕ್, ಯೂಟ್ಯೂಬ್ ಲೈವ್ ಮಾಡಿ ಬಹುಮಾನಗಳನ್ನು ಗೆಲ್ಲಿ
ಮೇ 31ರ ಶುಕ್ರವಾರ ದಿಂದ ಜೂನ್ 2ರ ಭಾನುವಾರದವರೆಗೆ ಮೂರು ದಿನಗಳ ಕಾಲ ಹಲಸು ಮತ್ತು ಹಣ್ಣುಗಳ ನಡೆಸಲಾಗುವುದು. ಬೆಳಗ್ಗೆ 9:00 ರಿಂದ ಸಂಜೆ 7:00ವರೆಗೆ ಎಸ್ಎಂಎಸ್ ಸಮುದಾಯ ಭವನ ಬ್ರಹ್ಮಾವರದಲ್ಲಿ ನಡೆಯಲಿದೆ. ಈ ಪ್ರಯುಕ್ತ ರೀಲ್ಸ್ ಸ್ಪರ್ಧೆ ಏರ್ಪಡಿಸಲಾಗಿದ್ದು, 3 ದಿನ ನಡೆಯುವ ಹಲಸು ಮೇಳದ ರೀಲ್ಸ್ ಮಾಡಿ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶ ನೀಡಲಾಗಿದೆ.
– 3 ದಿನಗಳ ಕಾಲ ನಡೆಯುವ ಹಣ್ಣು ಮೇಳದ ರೀಲ್ಸ್ ಮಾಡಿ ಕಳಿಸುವುದು
– ರೀಲ್ಸ್ ಒಂದು ನಿಮಿಷ ಮೀರುವಂತಿಲ್ಲ
– ವಿಭಿನ್ನ ಮತ್ತು ಕ್ರಿಯೆಟಿವಿಟಿಗೆ ಆಧ್ಯತೆ ನೀಡಲಾಗುವುದು
– ಸೊಷಿಯಲ್ ಮೀಡಿಯಾದ ಯಾವುದೇ ಅಕೌಂಟ್ನಲ್ಲಿ ಅತೀ ಹೆಚ್ಚು ವೀಕ್ಷಣೆಯಾದ 2 ರೀಲ್ಸ್ ಗಳಿಗೆ ಮೊಸ್ಟ್ ವಿವ್ಸ್ ಬಹುಮಾನ ಹಾಗೂ ಸದ್ಗುರು ಆಯುರ್ವೇದ ಇವರಿಂದ ಆಕರ್ಷಕ ಗಿಫ್ಟ್ ಹ್ಯಾಂಪರ್ಸ್
– ಸಂಘಟಕರ ಮೆಚ್ಚುಗೆ ಗಳಿಸಿದ 2 ರೀಲ್ಸ್ ಗಳಿಗೆ ಬಹುಮಾನ ಹಾಗೂ ಸದ್ಗುರು ಆಯುರ್ವೇದ ಇವರಿಂದ ಆಕರ್ಷಕ ಗಿಫ್ಟ್ ಹ್ಯಾಂಪರ್ಸ್
– ರೀಲ್ಸ್ ನ ಲಿಂಕ್ ಕಳುಹಿಸಲು ಹಾಗೂ ಮೊಸ್ಟ್ ವಿವ್ಸ್ ಸ್ಕ್ರೀನ್ ಶಾಟ್ ಕಳುಹಿಸಲು ಜೂನ್ 10 2024 ಕೊನೆಯ ದಿನಾಂಕ
– ವಿವರಗಳಿಗೆ ಹಾಗೂ ಲಿಂಕ್ ಕಳುಹಿಸಲು 9448252468 (ಅಲ್ವಿನ್ ಆಂದ್ರಾದೆ) ವಾಟ್ಸಪ್ ಮಾಡಿ