ಉಡುಪಿ, ದಕ್ಷಿಣ ಕನ್ನಡದಲ್ಲಿ ಮಳೆ!
– ಹಗಲು ರಾತ್ರಿ ಮಳೆ: ಜನರ ಪರದಾಟ
– ಎಲ್ಲಾ ರಸ್ತೆಗಳಲ್ಲಿ ಹೊಂಡ ಗುಂಡಿ ಜನರಿಗೆ ಕಷ್ಟ
NAMMUR EXPRESS NEWS
ಮಂಗಳೂರು/ಉಡುಪಿ: ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಸೋಮವಾರ ಉತ್ತಮ ಮಳೆಯಾಗಿದೆ. ಮಂಗಳವಾರ ಮುಂಜಾನೆ ವೇಳೆ ಅಲ್ಲಲ್ಲಿ ಮಳೆ ಸುರಿದಿದೆ.
ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಮಧ್ಯಾಹ್ನ ಬಳಿಕ ಸಾಧಾರಣ ಮಳೆಯಾಗಿದೆ. ಪುತ್ತೂರು, ಬೆಳ್ಳಾರೆ ಭಾಗದಲ್ಲಿ ಬಿರುಸಿನ ಮಳೆಯಾಗಿದೆ. ಬಂಟ್ವಾಳದಲ್ಲಿ ರಾತ್ರಿ ಮಳೆ ಆರಂಭವಾಗಿದೆ. ಮಂಗಳೂರು ನಗರ, ಗ್ರಾಮಾಂತರ ಭಾಗದಲ್ಲಿ ಹಗಲು ವೇಳೆಯಲ್ಲಿ ಒಂದರೆಡು ಬಾರಿ ಮಳೆಯಾಗಿದ್ದು, ಸಂಜೆ, ರಾತ್ರಿ ವೇಳೆ ಮಳೆ ಪ್ರಮಾಣ ತುಸು ಹೆಚ್ಚಾಗಿದೆ. ಉಡುಪಿ, ಕಾರ್ಕಳ, ಹೆಬ್ರಿ ಭಾಗದಲ್ಲಿ ಬೆಳಗ್ಗೆ ಭಾರೀ ಮಳೆಯಾಗಿದೆ. ಕಳೆದ ಕೆಲವು ದಿನಗಳಿಂದ ರಾತ್ರಿ- ಮುಂಜಾನೆ ವೇಳೆ ಸುರಿಯುತ್ತಿದೆ. ಹಗಲು ವೇಳೆಯಲ್ಲೂ ಮಳೆಯಲ್ಲೂ ಸ್ವಲ್ಪ ಮಳೆಯಾಗಿರುವುದರಿಂದ ವಾತಾವರಣ ತುಸು ತಂಪಾಗಿದೆ. ಸದ್ಯ ಸೆ. 25ಕ್ಕೆ ಎಲ್ಲೊ ಅಲರ್ಟ್ ನೀಡಲಾಗಿದೆ.
ಕರಾವಳಿ ರಸ್ತೆಗಳ ಕಥೆ ಕೇಳೋರು ಇಲ್ಲ!
ಕರಾವಳಿ ಪ್ರವಾಸಿ ತಾಣಗಳ ಊರು. ಲಕ್ಷ ಲಕ್ಷ ಜನ ಪ್ರವಾಸಿಗರು ಕರಾವಳಿ ಕಡೆ ಬರುತ್ತಾರೆ. ಆದರೆ ಇತ್ತ ಸಕಲಲೇಶಪುರದಿಂದ ಮಂಗಳೂರು, ಮೂಡಬಿದಿರೆ, ಕಾರ್ಕಳ ಭಾಗದಲ್ಲಿ ರಸ್ತೆ ಸಂಪೂರ್ಣ ಹಾಳಾಗಿದೆ.