ಅ.19 ರಂದು ಬಿಜೆಪಿ ವತಿಯಿಂದ ಕೊಪ್ಪದಲ್ಲಿ ಬೃಹತ್ ಪ್ರತಿಭಟನೆ
* ಕಾಂಗ್ರೆಸ್ಸಿನವರ ದ್ವೇಷದ ರಾಜಕಾರಣ,ಅಭಿವೃದ್ಧಿ ಕುಂಠಿತ – ದಿನೇಶ್ ಹೊಸೂರು
* ‘ಅಭಿವೃದ್ಧಿ ಮಾಡಿ ಗೂಂಡಾಗಿರಿ ಬಿಡಿ’ ಎಂಬ ಘೋಷವಾಕ್ಯದಡಿಯಲ್ಲಿ ಪ್ರತಿಭಟನೆ
NAMMMUR EXPRESS NEWS
ಕೊಪ್ಪ: ಕ್ಷೇತ್ರದಲ್ಲಿ ಕಾಂಗ್ರೆಸ್ಸಿನವರ ಗೂಂಡಾ ಪ್ರವೃತ್ತಿ ಹೆಚ್ಚಾಗಿದ್ದು ಹಾಗೂ ಕ್ಷೇತ್ರದ ಅಭಿವೃದ್ಧಿಯಲ್ಲಿ ಕುಂಠಿತವಾಗಿರುವುದನ್ನು ವಿರೋಧಿಸಿ ನಾಳೆ ಅ.19ರ ಭಾನುವಾರ ಕೊಪ್ಪ ಬಸ್ ನಿಲ್ದಾಣದ ಆವರಣದಲ್ಲಿ ಬಿಜೆಪಿ ವತಿಯಿಂದ ಶೃಂಗೇರಿ ವಿಧಾನಸಭಾ ಕ್ಷೇತ್ರ ಮಟ್ಟದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕೊಪ್ಪ ಬಿಜೆಪಿ ತಾಲೂಕು ಅಧ್ಯಕ್ಷರಾದ ದಿನೇಶ್ ಹೊಸೂರು ತಿಳಿಸಿದ್ದಾರೆ.
ಕೊಪ್ಪದ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ವಿರೋಧ ಪಕ್ಷವಾದ ಬಿಜೆಪಿ ಕಾರ್ಯಕರ್ತರ ಆತ್ಮಸ್ಥೆರ್ಯ ಕುಗ್ಗಿಸುವ ಕೆಲಸಕ್ಕೆ ಮುಂದಾಗುತ್ತಿದೆ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡಬೇಕಾದ ಕ್ಷೇತ್ರದ ಶಾಸಕರು ಹಾಗೂ ಅವರ ಹಿಂಬಾಲಕರು ದ್ವೇಷದ ರಾಜಕಾರಣ ಮಾಡುವದರಲ್ಲಿ ಮುಳುಗಿದ್ದಾರೆ,ಇದರಿಂದ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗಿದೆ, ಕಾಂಗ್ರೆಸ್ಸಿನ ಎಲ್ಲಾ ಜನವಿರೋಧಿ ನಡೆಯನ್ನು ವಿರೋಧಿಸಿ ಭಾನುವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ‘ಅಭಿವೃದ್ಧಿ ಮಾಡಿ ಗೂಂಡಾಗಿರಿ ಬಿಡಿ’ ಎಂಬ ಘೋಷ ವಾಕ್ಯದಡಿಯಲ್ಲಿ ಪ್ರತಿಭಟನೆ ನಡೆಯಲಿದ್ದು ಇದರಲ್ಲಿ ಎಲ್ಲರೂ ಭಾಗವಹಿಸುವಂತೆ ದಿನೇಶ್ ವಿನಂತಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಎಸ್.ಎನ್. ರಾಮಸ್ವಾಮಿ, ಪುಣ್ಯಪಾಲ್, ಎಚ್.ಎಂ. ರವಿಕಾಂತ್, ಶೃಂಗೇರಿ ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ನೂತನ್ ಕುಮಾರ್, ಕೊಪ್ಪ ಮಂಡಲದ ಕಾರ್ಯದರ್ಶಿಗಳಾದ ಬಿ.ಎನ್. ಬಿಷೇಜ್ ಭಟ್, ಅರುಣ್ ಶಿವಪುರ ಮುಂತಾದವರು ಭಾಗವಹಿಸಿದ್ದರು.







