ದಕ್ಷಿಣ ಭಾರತದಲ್ಲೇ ಕೊಪ್ಪ ಸ್ಪೋರ್ಟ್ಸ್ ಕ್ಲಬ್ ಟ್ರಸ್ಟ್ ಸಾಧನೆ
– ಕೊಪ್ಪ -ತೀರ್ಥಹಳ್ಳಿ ಗಡಿಯಲ್ಲಿ ಮಲ್ನಾಡ್ ಏಕೋ ಡ್ರೈವ್
– ನಟ ಪ್ರಮೋದ್ ಶೆಟ್ಟಿ ಸೇರಿ ನೂರಾರು ಜೀಪುಗಳ ಸದ್ದು
– ಉದ್ಯಮಿ ವಿಶ್ವನಾಥ ಗದ್ದೆಮನೆ ಉದ್ಘಾಟನೆ
ವಿಶೇಷ ವರದಿ: ಅಮೃತಾ ಕೊಪ್ಪ
ಕೊಪ್ಪ: ದಕ್ಷಿಣ ಭಾರತದಲ್ಲೇ ತಮ್ಮ ಹೊಸ ಅನ್ವೇಷಣೆ ಮತ್ತು ಮೋಟರ್ಸ್ ಕ್ರೀಡೆ ಮೂಲಕ ಹೆಸರು ಮಾಡಿರುವ ” ಕೊಪ್ಪ ಸ್ಪೋರ್ಟ್ಸ್ ಕ್ಲಬ್ ಟ್ರಸ್ಟ್ ” ಇತ್ತೀಚಿಗೆ ಮಲ್ನಾಡ್ ಏಕೋ ಡ್ರೈವ್ -2025 ಆಯೋಜನೆ ಮಾಡಿದ್ದು ರಾಜ್ಯ, ವಿವಿಧ ರಾಜ್ಯಗಳ ಮೋಟಾರ್ಸ್ ಕ್ರೀಡಾ ಉತ್ಸಾಹಿಗಳು ಈ ಮ್ಯಾರಥಾನ್ ಅಲ್ಲಿ ಭಾಗವಹಿಸಿದ್ದರು.
ತೀರ್ಥಹಳ್ಳಿ ಕೊಪ್ಪ ಗಡಿಯಲ್ಲಿರುವ ಗಡಿಕಲ್ ಲಾಲ್ ಬಹದ್ದೂರ್ ಶಾಸ್ತ್ರಿ ಪ್ರೌಢಶಾಲೆ ಮೈದಾನದಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು. ಅಧ್ಯಕ್ಷತೆಯನ್ನು ಕೊಪ್ಪ ಸ್ಪೋರ್ಟ್ ಕ್ಲಬ್ ಟ್ರಸ್ಟ್ ಅಧ್ಯಕ್ಷರಾದ ಸಚಿನ್ ನಂದಿಗೋಡು ವಹಿಸಿದ್ದರು. ಉದ್ಘಾಟನೆಯನ್ನು ವಕೀಲರು, ಉದ್ಯಮಿಗಳು ಹಾಗೂ ಸಮಾಜ ಸೇವಕರಾದ ವಿಶ್ವನಾಥ್ ಗದ್ದೆಮನೆ ಇವರು ನೆರವೇರಿಸಿದರು.
ಸತತವಾಗಿ 8ನೇ ಬಾರಿಗೆ ಆಫ್ ರೋಡ್ ರೇಸ್ ಮಾಡುತ್ತಿರುವ ದಕ್ಷಿಣ ಭಾರತದ ಏಕೈಕ ಸಂಘಟನೆ ಇದಾಗಿದೆ. ರಾಜ್ಯ ಮಟ್ಟದ ಹಾಗೂ ಹೊರ ರಾಜ್ಯ ಗೋವಾ, ಕೇರಳದ ಸುಮಾರು 160 ಜೀಪು, ಥಾರ್ ರೇಸರ್ ಭಾಗವಹಿಸಿದ್ದರು. 4/4 ವಾಹನಗಳಾದ ಥಾರ್, ಜೀಪು, ಫಾರ್ಚುನರ್ ಇದ್ದವು. ಮಲೆನಾಡಿನ ತೋಟ, ಬಯಲು, ಗದ್ದೆಗಳಲ್ಲಿ ಇವುಗಳ ಓಡಾಟ ಗಮನ ಸೆಳೆಯಿತು. ನಟ ಪ್ರಮೋದ್ ಶೆಟ್ಟಿ ಈ ರೇಸ್ ಅಲ್ಲಿ ಭಾಗಿಯಾದರು. ರೈತರ ಭೂಮಿಯಲ್ಲಿ ಬಳಸಿಕೊಂಡು ಸಾರ್ವಜನಿಕರ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು. ಕೇರಳದ ಪ್ರಸಿದ್ಧ ರೇಸರ್, ಆಫ್ ರೋಡ್ ಚಾಂಪಿಯನ್ ಡಾ.ಪಹಾದ್ ಕೂಡ ಭಾಗವಹಿಸಿದ್ದರು.
ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾಲತೇಶ್ ಗೌಡ ಸಿಗಸೆ, ಹಿರೇಕೋಡಿಗೆ ಗ್ರಾಪಂ ಅಧ್ಯಕ್ಷರಾದ ಜಯಲಕ್ಷ್ಮಿ ವೆಂಕಟೇಶ್, ಉಪಾಧ್ಯಕ್ಷ ಅಭಿಷೇಕ್, ಪಿಡಿಒ ಪದ್ಮಲತಾ, ಸದಸ್ಯರಾದ ಬಿ.ಎಂ.ಸಂಜೋಗ್, ದನ್ಯಶ್ರೀ ವಿಶ್ವ, ತ್ರಿಪುರೇಂದ್ರ, ರಾಜೀವಿ, ರವಿ , ರೇಖಾ ಚಂದ್ರು ಪ್ರಮುಖರಾದ ರಮೇಶ್ ಹೊಸಮನೆ, ಪೃಥ್ವಿ ಅಲಿಗೆ ಶೃಂಗೇಶ್, ಬಿಳವಿನಕೊಪ್ಪ, ಮಂಗಳಾ ಪ್ರಸಾದ್ ಉದ್ಘಾಟನೆ ಕಾರ್ಯಕ್ರಮದಲ್ಲಿದ್ದರು.
ಸಮಾರೋಪ ಸಮಾರಂಭ ಕೊಳಾವರ ಹೆರಿಟೇಜ್, ಕೊಳಾವರದಲ್ಲಿ ನಡೆಯಿತು. ಕಾರ್ತಿಕ್ ಕೆ.ಪಿ. ಮೂಡಣಮನೆ ಹೋಂ ಡೆಕೋರ್ ಸುರೇಶ್ ಕಣಗಲ್ ಮಾಲೀಕರು, ಅನ್ನಪೂರ್ಣ ಗ್ರಾನೈಟ್ಸ್, ಕೊಪ್ಪ, ನವೀನ್ ಕುಮಾರ್ ಮಾಲೀಕರು, ಅನ್ನಪೂರ್ಣ ಸೇಲ್ಸ್ ಮತ್ತು ಸರ್ವಿಸ್, ರಹೀಲ್ ಮದ್ದಾಸ್ ಮಾಲೀಕರು, ಮದ್ದಾಸ್ ಸೇಲ್ಸ್ ಕಾರ್ಪೋರೇಷನ್, ಅರ್ಜುನ್ ಕುಮಾರ್ ಮಾಲೀಕರು, ವೀರಭದ್ರೇಶ್ವರ ಅಡಿಕೆ ಮಂಡಿ, ಮಹಮ್ಮದ್ ಷರೀಫ್ ಮಾಲೀಕರು, ಕೆಪಿಜೆ ರೂಫಿಂಗ್ಸ್, ಕೊಪ್ಪ, ನಿಸಾರ್ ನಾರ್ವೆ ಮಾಲೀಕರು, ನಾರ್ವೆ ಏಜೆನ್ಸಿಸ್ ಇದ್ದರು.
ಕೊಪ್ಪ ಸ್ಪೋರ್ಟ್ಸ್ ಕ್ಲಬ್ ಟ್ರಸ್ಟ್ ತಂಡದ ಶ್ರಮ: ಯಾರು ಯಾರು?
ಕೊಪ್ಪ ಸ್ಪೋರ್ಟ್ಸ್ ಕ್ಲಬ್ ಟ್ರಸ್ಟ್ ಸಾಹಸಕ್ರೀಡೆ ಮಾತ್ರ ಅಲ್ಲದೆ ಸಾಮಾಜಿಕ ಸೇವೆಯಲ್ಲೂ ತಾಲೂಕಲ್ಲಿ ಮುಂಚೂಣಿಯಲ್ಲಿದೆ. ಸರ್ಕಾರಿಶಾಲೆ, ಆಸ್ಪತ್ರೆಗಳಿಗೆ ಸಹಾಯ, ಧಾರ್ಮಿಕ ಕೆಲಸಗಳಿಗೂ ಸೇವೆ ನೀಡುತ್ತಿದೆ.
ಸಚಿನ್ ನಂದಿಗೋಡು ಅಧ್ಯಕ್ಷರು, ರೋಹಿತ್ ಬಾಳೆಗದ್ದೆ ಕಾರ್ಯದರ್ಶಿ, ಸುನೀಲ್ ಈ. ಉಪಾಧ್ಯಕ್ಷರು, ಮಂಜುನಾಥ್ ತನೂಡಿ ಖಜಾಂಚಿ , ಹಾಗೂ ಗೌರವ ಅಧ್ಯಕ್ಷರಾದ ಪೃಥ್ವಿರಾಜ್ ಕೌರಿ – ಇಂದ್ರೇಶ್ ಕೆ.ಎನ್ – ಅನುಪ್ ನಾರ್ವೆ, ನಿರ್ದೇಶಕರುಗಳಾದ ಸುಮಿನ್ ನಂದಿಗೋಡು, ವಿಕಾಸ್ ಬೇಗಾನೆ, ಸುದರ್ಶನ್ ಗುಬ್ಬಗದ್ದೆ, ಶ್ರೀಧರ್ ಎಸ್.ಕೆ., ಪ್ರೀತಮ್ ಮಕ್ಕಿಮನೆ, ನೂತನ್ ಬಿ.ಇ., ಅಜಿತ್ ಬಿಕ್ಕಳಿ, ವಿಶ್ವನಾಥ್ ತನೂಡಿ, ಮುಸ್ತಾಫ ಮೊಹಮ್ಮದ್, ಸತ್ಯಜಿತ್ ಬಾಳೆಗದ್ದೆ, ಸಂತೋಶ್ ನಾಯಕ್,ಉದಯಾನಂತ್, ಸಂದೇಶ್ ಕೆ., ಅನುದೀಪ್ ಬಿ.ಎಂ ಸೇರಿ ಅನೇಕರು ಕಾರ್ಯಕ್ರಮ ಯಶಸ್ಸಿಗೆ ಶ್ರಮಿಸಿದ್ದರು.








