ಹಿರಿಯ ಸಹಕಾರಿ ಮಹಾಬಲ ಜಿ ಎಸ್ ರವರಿಗೆ ಸಹಕಾರ ರತ್ನ ಪ್ರಶಸ್ತಿ
* ನ.14 ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ
* ಕೇಂದ್ರೀಯ ಕಾಫಿ ಮಂಡಳಿಯ ಉಪಾಧ್ಯಕ್ಷರಾಗಿದ್ದ ಮಹಾಬಲ ಜಿ ಎಸ್
NAMMMUR EXPRESS NEWS
ಕೊಪ್ಪ: ಕರ್ನಾಟಕ ರಾಜ್ಯ ಸಹಾಕಾರ ಮಹಾಮಂಡಳ ನಿ. ವತಿಯಿಂದ ಕೊಡಮಾಡುವ ‘ಸಹಕಾರ ರತ್ನ’ ಪ್ರಶಸ್ತಿಯನ್ನು ಹಿರಿಯ ಸಹಕಾರಿಗಳು, ಕೇಂದ್ರೀಯ ಕಾಫಿ ಮಂಡಳಿಯ ಉಪಾಧ್ಯಕ್ಷರಾದ ಮಹಾಬಲ ಜಿ ಎಸ್ ಇವರಿಗೆ ದೊರತಿದೆ.
ಮಹಾಮಂಡಳಿಯು ರಾಜ್ಯ ಸಹಕಾರ ಚಳುವಳಿಯ ಬೆಳವಣಿಗೆಗೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ಈ ಗೌರವವನ್ನು ಪ್ರತಿ ವರ್ಷ ನೀಡುತ್ತಿದೆ.
ಈ ಬಾರಿ ಜಿ ಎಸ್ ಮಹಾಬಲ ರವರಿಗೆ ಪ್ರಶಸ್ತಿ ಲಭಿಸಿರುವುದು ಅವರ ಆಪ್ತ ವಲಯದಲ್ಲಿ ಸಂತೋಷವನ್ನುಂಟು ಮಾಡಿದ್ದು, ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ.
ಸಹಕಾರಿ ರತ್ನ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವ ಹಿರಿಯ ಸಹಕಾರಿಗಳಾದ ಜಿ ಎಸ್ ಮಹಾಬಲ ರವರಿಗೆ ನಮ್ಮೂರ್ ಎಕ್ಸ್ಪ್ರೆಸ್ ವತಿಯಿಂದ ಅಭಿನಂದನೆಗಳು.








