- 20 ಜನರಿಗೆ ಗಾಯ: ಜೀವ ಉಳಿಸಿದ ಚಾಲಕ
- ಸೊರಬದಲ್ಲಿ ಹೆಜ್ಜೇನು ಹೊಡೆದು ಗಂಡ ಹೆಂಡತಿಗೆ ಸ್ಥಿತಿ ಗಂಭೀರ
- ಹೊಸನಗರದ ಸೊನಲೆಯಲ್ಲಿ ಬಕೆಟ್ ನೀರಿಗೆ ಬಿದ್ದು ಮಗು ಸಾವು
NAMMUR EXPRESS NEWS
ತೀರ್ಥಹಳ್ಳಿ: ಆಗುಂಬೆ ಘಾಟಿಯಲ್ಲಿ ಖಾಸಗಿ ಬಸ್ ಬ್ರೇಕ್ ಫೇಲ್ ಆಗಿ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಬುಧವಾರ ಸಂಜೆ ನಡೆದಿದ್ದು ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ.
ಪ್ರವಾಸಿಗರನ್ನು ಕರೆದೊಯ್ಯುತಿದ್ದ ಖಾಸಗಿ ಬಸ್ ಆಗುಂಬೆ ಘಾಟಿಯ 12 ನೇ ತಿರುವಿನಲ್ಲಿ ಬ್ರೇಕ್ ವಿಫಲವಾಗಿಮರಕ್ಕೆ ಡಿಕ್ಕಿ ಹೊಡೆದಿದೆ.ಘಾಟಿ ರಸ್ತೆಯ 11ನೇ ತಿರುವಿನಲ್ಲಿ ಖಾಸಗಿ ಮಿನಿ ಬಸ್ ಬ್ರೇಕ್ ವೈಫಲ್ಯಗೊಂಡಿದ್ದು ಚಾಲಕನ ಸಮಯ ಪ್ರಜ್ಞೆಯಿಂದ ಸಂಭವನೀಯ ದೊಡ್ಡ ದುರಂತ ತಪ್ಪಿದೆ. 12ನೇ ತಿರುವಿನಲ್ಲಿ ಮರಕ್ಕೆ ಡಿಕ್ಕಿ ಹೊಡೆದು ಬಸ್ ನಿಂತಿದೆ.
ಬಸ್ ನಲ್ಲಿ ಮಹಿಳೆಯರು ಮಕ್ಕಳು ಸೇರಿ 20 ಜನರಿದ್ದು ಹಲವರಿಗೆ ಗಾಯಗಳಾಗಿದ್ದು ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಹೆಬ್ರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ನಲ್ಲಿದ್ದವರೆಲ್ಲಾ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟ ಪಡುಕೆರೆ ಗ್ರಾಮದ ನಿವಾಸಿಗಳು ಎನ್ನಲಾಗುತಿದ್ದು ನಿಶ್ಚಿತಾರ್ಥ ಕಾರ್ಯಕ್ರಮಕ್ಕಾಗಿ ಕೊಪ್ಪ ಬಂದು ಹಿಂದಿರುಗುತಿದ್ದಾಗ ಈ ಅಪಘಾತ ಸಂಭವಿಸಿದೆ.
ಬೇಲಿ ಸವರುವಾಗ ಹೆಚ್ಚೇನು ದಾಳಿ, ಗಂಡ ಹೆಂಡತಿ ಗಂಭೀರ: ಬೇಲಿ ಸವರುವ ವೇಳೆ ಹೆಚ್ಚೇನು ದಾಳಿ ಮಾಡಿದ ಹಿನ್ನಲೆಯಲ್ಲಿ ದಂಪತಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಶಿಕಾರಿಪುರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹಿರೇ ಇಡಗೋಡು ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಕೃಷ್ಣಪ್ಪ ಮತ್ತು ರೇಣುಕಮ್ಮ ದಂಪತಿ ಇವತ್ತು ಮನೆ ಹಿಂಭಾಗದಲ್ಲಿ ಬೇಲಿ ಸವರುತ್ತಿದ್ದರು. ಈ ವೇಳೆ ಹೆಚ್ಚೇನುಗಳು ದಾಳಿ ನಡೆಸಿವೆ. ಕೂಡಲೆ ಅವರನ್ನು ಆನವಟ್ಟಿ ಸಮುದಾಯ ಕೇಂದ್ರಕ್ಕೆ ದಾಖಲು ಮಾಡಲಾಯಿತು.
ನೀರಿನ ಬಕೆಟ್ಗೆ ಬಿದ್ದು ಒಂದು ವರ್ಷದ ಮಗು ಸಾವು
ನೀರು ತುಂಬಿದ ಬಕೆಟ್ಗೆ ಬಿದ್ದು ಒಂದು ವರ್ಷದ ಗಂಡು ಮಗು ಮೃತಪಟ್ಟಿರುವ ಘಟನೆ ಹೊಸ ನಗರ ತಾಲೂಕಿನ ಸೊನಲೆ ಗ್ರಾಪಂ ವ್ಯಾಪ್ತಿಯ ಸೊನಲೆ ಗ್ರಾಮದ ಹೊಸಕೊಪ್ಪ ಎಂಬಲ್ಲಿ ನಡೆದಿದೆ.ಕೂಲಿ ಕೆಲಸಗಾರರಾದ ಹರೀಶ್ ಹಾಗೂ ವೀಣಾ ದಂಪತಿಗಳ ಒಂದು ವರ್ಷ ಒಂದು ತಿಂಗಳ ಸಂಕೇತ್ ಎಂಬ ಮಗು ಮೃತಪಟ್ಟಿರುವುದಾಗಿ ಎಂದು ತಿಳಿದುಬಂದಿದೆ.
ಪೋಷಕರು ಬಕೆಟ್ನಲ್ಲಿ ನೀರು ಹಾಕಿ ಆಗಾಗ ಮಗುವಿಗೆ ಆಟವಾಡಿಸುವ ಅಭ್ಯಾಸ ಹೊಂದಿದ್ದರು ಎಂದು ತಿಳಿದುಬಂದಿದೆ. ಆದರೆ ಇಂದು ದುರಂತವೆಂದರೆ ದನಗಳಿಗೆ ಕುಡಿಯಲು ಇಟ್ಟಿದ್ದ ಅರ್ಧ ಬಕೆಟ್ ನೀರಿನಲ್ಲಿ ಮಗು ತಲೆಕೆಳಗಾಗಿ ಬಿದ್ದು ಉಸಿರುಗಟ್ಟಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.ತೋಟದ ಕೆಲಸಕ್ಕೆ ಪೋಷಕರು ಹೋದಾಗ ಈ ಘಟನೆ ನಡೆದಿದ್ದು ಅವರು ಬಂದು ನೋಡುವಷ್ಟರಲ್ಲಿ ಮಗು ಮೃತಪಟ್ಟಿದೆ.