- ಮೇಲಿನ ಕುರವಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರ ಮೇಲೆ ಪಿಡಿಓ ಸರಿತಾ ಹಲ್ಲೆ ಆರೋಪ
- ಸೂಕ್ತ ಕ್ರಮ ಕೈಗೊಳ್ಳಲು ಇಲಾಖೆ ಮೇಲಾಧಿಕಾರಿಗಳಿಗೆ ದೂರು ನೀಡಿದರು ಕ್ರಮ ಕೈಗೊಂಡಿಲ್ಲ
- ಮಾ.7ಕ್ಕೆ ಶಿವಮೊಗ್ಗ ಜಿಪಂ ಸಿಇಓ ಕಚೇರಿ ಮುಂದೆ ಪ್ರತಿಭಟನೆ
NAMMUR EXPRESS NEWS
ಜ.30ರಂದು ಮೇಲಿನ ಕುರವಳ್ಳಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮೇಲಾಧಿಕಾರಿಗಳ ಸಮ್ಮುಖದಲ್ಲಿ ನೇರವಾಗಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರ ಮೇಲೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸರಿತಾ ರವರು ಯಾವುದೇ ಸಕಾರಣಗಳಿಲ್ಲದೆ ತಾನು ದಲಿತ ಮಹಿಳೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಗೃಹ ಸಚಿವರು ಮತ್ತು ಬಿಜೆಪಿ ಪುಂಡರ ಬೆಂಬಲ ಮತ್ತು ಮಾರ್ಗದರ್ಶನದ ಮೇಲೆ ಹಲ್ಲೆ ನಡೆಸಿರುವುದು ಗಮನಕ್ಕೆ ಬಂದಿದೆ. ಗ್ರಾಮ ಪಂಚಾಯಿತಿಯ ಅಧ್ಯಕ್ಷರು,ಉಪಾಧ್ಯಕ್ಷರು, ಗ್ರಾಮ ಪಂಚಾಯಿತಿ ನ ಸದಸ್ಯರು ಯಾವುದೇ ಪ್ರತಿರೋಧವನ್ನು ಮಾಡದೆ ಇರುವ ಕಾರಣ, ಸಚಿವರ ಮಾರ್ಗದರ್ಶನದಲ್ಲಿ ಪರಿಶಿಷ್ಟ ಜಾತಿ ದೌರ್ಜನ್ಯ ತಡೆ ಕಾಯ್ದೆ ಬಳಸಿ ಅಧ್ಯಕ್ಷರು ಉಪಾಧ್ಯಕ್ಷರು ಸೇರಿದಂತೆ ಒಂಬತ್ತು ಸದಸ್ಯರನ್ನು ಜೈಲಿಗೆ ಕಳುಹಿಸುವ ಉದ್ದೇಶ ಹೊಂದಿದ್ದು, ಸದರಿಕಾರಣಕ್ಕಾಗಿ ಪ್ರತಿರೋಧ ತೋರಿರುವುದಿಲ್ಲ.
ವಾಸ್ತವದಲ್ಲಿ ತೀರ್ಥಹಳ್ಳಿಯ ಗ್ರಾಮೀಣಾಭಿವೃದ್ಧಿ ಅಧಿಕಾರಿಗಳು, ಪೋಲಿಸ್ ಅಧಿಕಾರಿಗಳು ಪಿಡಿಓ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಅವರನ್ನು ಜೈಲಿಗೆ ಕಳುಹಿಸುವ ಅನಿವಾರ್ಯತೆ ಇದ್ದು ಮತ್ತು ಅವರಿಗೆ ಸಹಕರಿಸಿದ ಬಿಜೆಪಿ ಬೆಂಬಲಿತ ಸದಸ್ಯರ ಸದಸ್ಯತ್ವ ರದ್ದು ಮಾಡಲು ಶಿಫಾರಸ್ಸು ಮಾಡಬೇಕಾಗಿತ್ತು. ಸದರಿ ವಿಫಲತೆಯ ವಿರುದ್ಧ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಇತರೆ ಗ್ರಾಮ ಪಂಚಾಯತ್ ಸದಸ್ಯರು ಹಲವಾರು ಮನವಿಗಳನ್ನು ಪ್ರತಿಭಟನೆಯನ್ನು ದಾಖಲಿಸಿದ್ದರು ಕೂಡ ಯಾವುದೇ ರೀತಿಯ ಕ್ರಮ ಕೈಗೊಂಡಿರುವುದಿಲ್ಲ. ಇವರನ್ನು ಈ ಕೂಡಲೇ ಅಮಾನತ್ತು ಮಾಡಿ ತನಿಖೆಗೆ ಒಳಪಡಿಸಿ ಜಿಲ್ಲೆಯಿಂದ ಹೊರಗೆ ವರ್ಗಾವಣೆಗೊಳಿಸಬೇಕಾಗಿ ಆಗ್ರಹಿಸಿದೆ.
ತಮಗೆ ತಿಳಿದಂತೆ ಮೇಲ್ಕಂಡ ಘಟನೆ ಪ್ರಥಮ ಘಟನೆಯೇನಾಲ್ಲ. ಈ ಹಿಂದೆ ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಗ್ರಾಮ ಪಂಚಾಯಿತಿನಲ್ಲಿ ಬಿಜೆಪಿ ಬೆಂಬಲಿತ ಸದಸ್ಯರೊಬ್ಬರು ಸಾಮಾನ್ಯ ಸಭೆಯಲ್ಲಿ ಗ್ರಾಮ ಪಂಚಾಯತ್ ಮಹಿಳಾ ಸದಸ್ಯರಾದ ವಿಶಾಲಾಕ್ಷಿ ಪ್ರಪುಲ್ಲ ಚಂದ್ರ ಇವರ ಮೇಲೆ ಹಲ್ಲೆ ನಡೆಸಿರುತ್ತಾರೆ. ಅಂತೆ ಮತ್ತೊಮ್ಮೆ ಕೋಣಂದೂರು ಗ್ರಾಮ ಪಂಚಾಯತ್ ಸದಸ್ಯರು ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಸುರೇಶ್ ರವರ ಮೇಲು ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಹಲ್ಲೇ ನಡೆಸಿರುತ್ತಾರೆ. ಮೇಲ್ಕಂಡ ಎಲ್ಲ ಘಟನೆಗಳಿಗೆ ಸಂಬಂಧಿಸಿದಂತೆ ಲಿಖಿತ ದೂರುಗಳು, ಸಿಸಿ ಕ್ಯಾಮೆರಾದಲ್ಲಿ ದಾಖಲಾದ ದೃಶ್ಯಾವಳಿಗಳು, ಮೊಬೈಲ್ ನಲ್ಲಿ ದಾಖಲಾದ ದೃಶ್ಯಾವಳಿಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಈ ಎಲ್ಲ ಮೇಲ್ಕಂಡ ಘಟನೆಗಳ ಹಿಂದೆ ಗೃಹ ಸಚಿವರ ನೈತಿಕ ಬೆಂಬಲ ಗೂಂಡ ವರ್ತನೆಗಳಿಗೆ ಕಾರಣವಾಗಿದೆ.
ತಮಗೆ ತಿಳಿದಂತೆ ತೀರ್ಥಹಳ್ಳಿಯಲ್ಲಿ ಬಿಜೆಪಿ ಬೆಂಬಲಿತ ಗೂಂಡಾಗಳು ಏನೇ ಕ್ರಿಮಿನಲ್ ವರ್ತನೆಗಳನ್ನು ಮಾಡಿದರು ಕೇಸ್ ಗಳು ದಾಖಲಾಗುವುದಿಲ್ಲ. ಇದು ತೀರ್ಥಹಳ್ಳಿ ಕ್ಷೇತ್ರದ ದುರಂತವಾಗಿದೆ. ಈ ಎಲ್ಲ ವಿಚಾರಗಳಿಗೆ ಸಂಬಂಧಿಸಿದಂತೆ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ ನೊಣಬೂರು ಶೂಟ್ ಔಟ್, ನೆಗಲೋಣಿ ಶೂಟ್ ಔಟ್ ಪ್ರಕರಣಗಳು, ನೊಣಬುರು ಪಂಚಾಯತ್ ಮೂಡ್ಲಿ ಹಲ್ಲೆ ಪ್ರಕರಣ, ಗುಡ್ಡೆಕೊಪ್ಪ ಗ್ರಾಮ ಪಂಚಾಯತ್ ಅಗಸಾಡಿ ಕೊಲೆ ಪ್ರಕರಣ, ಹೊಸನಗರ ತ್ರಿಣಿವೆ ಇಟ್ಟಕ್ಕಿಯಲ್ಲಿ ನಡೆದ ದೌರ್ಜನ್ಯ ಪ್ರಕರಣ, ಮೇಲಿನ ಕುರುವಳ್ಳಿಯಲ್ಲಿ ನಡೆದ ಹಲ್ಲೆ ಪ್ರಕರಣ ಇಂತಹ ಹಲವು ಪ್ರಕರಣಗಳಲ್ಲಿ ಅಪರಾಧಿಗಳಾಗಿರುವ ಬಿಜೆಪಿ ಮುಖಂಡರನ್ನು ಕೈಬಿಟ್ಟಿರುವುದು, ಮೇಲಿನ ಕುರುವಳ್ಳಿ ಬಂಡೆ ಕಾರ್ಮಿಕರನ್ನು ಒಕ್ಕಲಿಗ್ಗಿಸಲು ಹುನ್ನಾರ ನಡೆಸಿರುವುದು, ಕೆಲ ಪ್ರಕರಣಗಳಲ್ಲಿ ನಿರಪರಾಧಿ ಕಾಂಗ್ರೆಸ್ ಕಾರ್ಯಕರ್ತರ ಹೆಸರನ್ನು ಸೇರಿಸಿರುವುದು ಪೋಲಿಸ್ ಇಲಾಖೆ ಕೆಲವರ ಹಿತಾಸಕ್ತಿಗೆ ಅಡಿಯಾಳಾಗಿ ವರ್ತಿಸುತ್ತಿದರ ವಿರುದ್ಧ ನ್ಯಾಯ ಪಡೆಯಲು ವಿಫಲವಾಗಿದ್ದು ಘಟನೆಯ ಮೂಲಕವೇ ನ್ಯಾಯಕ್ಕೆ ಆಗ್ರಹಿಸುವ ಅನಿವಾರ್ಯತೆ ಬಂದೊದಗಿದೆ. ಮೇಲ್ಕಂಡ ವಿಷಯಗಳ ಬಗ್ಗೆ ನಾನು ಹತ್ತಾರು ಬಾರಿ ಮೌಖಿಕವಾಗಿ, ಲಿಖಿತವಾಗಿ ನ್ಯಾಯಕ್ಕಾಗಿ ಮನವಿ ಮಾಡಿದರು ಯಾವುದು ಫಲಪ್ರದವಾಗಿಲ್ಲ. ಮೇಲ್ಕಂಡ ಕಾರಣಗಳಿಗಾಗಿ ನಾನು ದಿನಾಂಕ : 07-03-2023 ರ ಮಂಗಳವಾರ ಬೆಳಗ್ಗೆ 11 ಗಂಟೆಗೆ ಶಿವಮೊಗ್ಗ ಜಿಲ್ಲೆ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಹಮ್ಮಿಕೊಂಡಿರುತ್ತೇನೆ.
- ಕಿಮ್ಮನೆ ರತ್ನಾಕರ್
ಮಾಜಿ ಸಚಿವರು, ಕರ್ನಾಟಕ ಸರ್ಕಾರ
ಮಾಜಿ ಶಾಸಕರು, ತೀರ್ಥಹಳ್ಳಿ