ಸರಳ ನಾಯಕನಿಗೆ ಅಭಿಮಾನದ ಮಹಾಪೂರ
NAMMUR EXPRESS NEWS
ರಾಜ್ಯದ ಗೃಹ ಸಚಿವರು, ತೀರ್ಥಹಳ್ಳಿ ಶಾಸಕರು, ಬಿಜೆಪಿ ಹಿರಿಯ ನಾಯಕರಾದ ಆರಗ ಜ್ಞಾನೇಂದ್ರ ಅವರಿಗೆ 71ನೇ ವರ್ಷದ ಹುಟ್ಟು ಹಬ್ಬದ ಶುಭಾಶಯಗಳು.
ಕೌಟುಂಬಿಕ ರಾಜಕೀಯ ಹಿನ್ನೆಲೆಯಿಲ್ಲದೇ , ಆರ್ಥಿಕವಾಗಿ ಬಲಾಢ್ಯರಾಗಿರದೇ ಕೇವಲ ಹೋರಾಟಗಳಿಂದ, ಪಕ್ಷ, ಸಂಘಟನೆಗಳ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿದ್ದು ಉನ್ನತ ಸ್ಥಾನ ಗಳಿಸಿಕೊಳ್ಳುವುದು ಜೀವನದ ದೊಡ್ಡ ಸಾಧನೆ. ವಿದ್ಯಾರ್ಥಿ ಸಂಘದ ನಾಯಕನಾಗಿ ಯೌವನದ ದಿನಗಳಲ್ಲಿ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದವರು ಇಂದು ತಮ್ಮ 71ನೇ ವಯಸ್ಸಿನಲ್ಲಿಯೂ ಆರಗ ಜ್ಞಾನೇಂದ್ರ ರವರು ಅದೇ ಹುಮ್ಮಸ್ಸು ವರ್ಚಸ್ಸುಗಳೊಂದಿಗೆ ಮುನ್ನಡೆಯುತ್ತಿದ್ದಾರೆ.
ರೈತ ನಾಯಕರಾಗಿ, ಅಡಿಕೆ ಟಾಸ್ಕ್ ಫೋರ್ಸ್ ಅಧ್ಯಕ್ಷರಾಗಿ ಆರಗ ಜ್ಞಾನೇಂದ್ರ ಅವರು ತಮ್ಮ ಗೃಹ ಇಲಾಖೆಯನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದು ಭ್ರಷ್ಟಾಚಾರವಿಲ್ಲದ ಆಡಳಿತ ಕ್ಷೇತ್ರದ ಜನತೆಗೆ ಗೌರವ ತಂದಿದೆ. ತಮ್ಮ ರಾಜಕೀಯ, ಸಾಮಾಜಿಕ ಸೇವೆ ಹೀಗೆಯೇ ಅವಿರತವಾಗಿ ನಡೆಯಲಿ.
ಆರಗ ಜ್ಞಾನೇಂದ್ರ ಅಭಿಮಾನಿಗಳು
ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರ