ಮಳೆ ಬಳಿಕ ಈಗ ಧರೆ ಕುಸಿತದ ಡೇಂಜರ್!
– ಕೊಪ್ಪದಲ್ಲಿ 90 ಅಡಿ ಕುಸಿದ ಭೂಮಿ, ಹಲವೆಡೆ ಕುಸಿತ
– ಸಾಗರದಲ್ಲಿ ಮನೆ, ಕಚೇರಿ ಕಾಪೌಂಡ್ ಕುಸಿತ
– ತೀರ್ಥಹಳ್ಳಿಯಲ್ಲಿ ಶಾಲೆಯ ಕಾಪೌಂಡ್ ಕುಸಿತ
NAMMUR EXPRESS NEWS
ಮಲೆನಾಡು: ( Malenadu ) ಮಳೆ ಕೊಂಚ ವಿಶ್ರಾಂತಿ ಪಡೆದಿದೆ. ಆದರೆ ಮಳೆ ಬಳಿಕ ಅನಾಹುತ ಹೆಚ್ಚಿದೆ. ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಮನೆಯ ಮೇಲೆಯೇ ಧರೆ ಕುಸಿತ ಪ್ರಕರಣ ಹೆಚ್ಚಿದೆ. ತೀರ್ಥಹಳ್ಳಿಯಲ್ಲಿ ( Agumbe ghat ) ಆಗುಂಬೆ ಘಾಟಿ ಸೇರಿ ಹಲವೆಡೆ ರಸ್ತೆ, ಧರೆ ಕುಸಿದಿದೆ. ಇನ್ನು ಕೊಪ್ಪ, ಮೂಡಿಗೆರೆ, ಶೃಂಗೇರಿ ಭಾಗದಲ್ಲೂ ಧರೆ, ಮನೆ ಕುಸಿತ ಹೆಚ್ಚುತ್ತಿದೆ. ಆಸರೆ ಕಳೆದುಕೊಂಡ ಕುಟುಂಬಕ್ಕೆ ಅಂಗನವಾಡಿಯ ಆಶ್ರಯ: ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ವಾರದಿಂದ ಸುರಿಯುತ್ತಿರುವ ಮಳೆಗೆ ಧರೆ ಕುಸಿದು ಕೆಲವೆಡೆ ಮನೆಗಳು ಜಖಂಗೊಂಡಿದೆ. ಆನಂದಪುರ ಸಮೀಪದ ನೇದರವಳ್ಳಿ ಗ್ರಾಮದ ರವಿ ಎಂಬುವವರ ಮನೆ ನೆಲ ಸಮವಾಗಿದೆ. ಧರೆ ಕುಸಿದಿರೋದ್ರಿಂದ ಮನೆ ಕಳೆದುಕೊಂಡಿರುವ ರವಿ ಕುಟುಂಬಕ್ಕೆ ಆಸರೆ ಇಲ್ಲದಂತಾಗಿದೆ. ಸದ್ಯ ಅವರಿಗೆ ಅಂಗನವಾಡಿಯಲ್ಲಿ ಉಳಿಯಲು ಅವಕಾಶ ಕಲ್ಪಿಸಲಾಗಿದೆ. ( Thirthahalli ) ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟಿಯಲ್ಲಿ ಬಿರುಕು ಕಂಡಿದೆ. ಆದ್ದರಿಂದ ಘಾಟಿಯಲ್ಲಿ ಹೆವಿ ವಾಹನಗಳ ಸಂಚಾರ ನಿಲ್ಲಿಸಲಾಗಿದೆ. ಇನ್ನು ತೀರ್ಥಹಳ್ಳಿಯ ಸೊಪ್ಪುಗುಡ್ಡೆ ಸರ್ಕಾರಿ ಶಾಲೆ ಕಾಪೌಂಡ್ ಕುಸಿದಿದೆ.
ಕೊಪ್ಪದಲ್ಲಿ 90 ಅಡಿ ಕುಸಿದ ಭೂಮಿ.!
ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಲವು ಕಡೆ ಭಾರಿ ಪ್ರಮಾಣದ ಭೂಕುಸಿತ ಉಂಟಾಗಿದೆ. ( Koppa ) ಕೊಪ್ಪ ತಾಲೂಕಿನ ಹೆರೂರು ಗ್ರಾಮದಲ್ಲಿ ಭೂಮಿ ಸುಮಾರು 90 ಅಡಿ ಕುಸಿದಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಏಳಕ್ಕೂ ಹೆಚ್ಚು ಊರುಗಳಿಗೆ ಸಂಪರ್ಕಿಸುವ ಮುಖ್ಯ ರಸ್ತೆ ಇದಾಗಿದ್ದು,ಮತ್ತಷ್ಟು ಕುಸಿಯುವ ಭೀತಿ ಎದುರಾಗಿದೆ.ಶಾಂತಿ ಕೂಡಿಗೆ, ಶುಂಠಿ ಕೂಡಿಗೆ, ಬಿಟ್ಟ ಕೂಡಿಗೆ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಮಳೆ ಹೆಚ್ಚಾದಂತೆ ಸ್ವಲ್ಪ ಸ್ವಲ್ಪವೇ ಭೂಮಿ ಜರಿತ ಉಂಟಾಗುತ್ತಿದೆ.
ಇದನ್ನೂ ಓದಿ : ರಾಜ್ಯದಲ್ಲಿ ಮತ್ತೆ ಸುದ್ದಿ ಮಾಡಿದ ತೀರ್ಥಹಳ್ಳಿ ಪ್ರತೀಕ್ ಗೌಡ ಕೇಸ್!
HOW TO APPLY : NEET-UG COUNSELLING 2023