ಮಲೆನಾಡಲ್ಲಿ ಕೃಷಿ ಚಟುವಟಿಕೆ ಜೋರು!
– ಮಲೆನಾಡಿನ ಗದ್ದೆಗಳಲ್ಲಿ ಸಸಿ ನಾಟಿ ಸೊಬಗು
– ಕಡಿಮೆಯಾದ ಮಳೆ: ಅಡಿಕೆ ತೋಟಗಳತ್ತ ಹೊರಟ ರೈತರು
NAMMUR EXPRESS NEWS
ಮಲೆನಾಡು ಭಾಗದಲ್ಲಿ ಮುಂಗಾರು ಮಳೆ ಉತ್ತಮವಾಗಿ ಆಗುತ್ತಿದ್ದು, ಮಲೆನಾಡು ಭಾಗದಲ್ಲಿ ಕೃಷಿ ಚಟುವಟಿಕೆಗಳು ಆರಂಭವಾಗಿದೆ. ಭತ್ತದ ನಾಟಿ ಮಾಡುವ ಕಾರ್ಯ ಆರಂಭವಾಗಿದೆ. ಎಲ್ಲೆಲ್ಲೂ ಹಸಿರು ಕಾಣುತ್ತಿದೆ. ನಾಟಿ ಕೆಲಸಕ್ಕೆ ಆಗಮಿಸಿರುವ ಅನೇಕ ಮಹಿಳೆಯರು ನಾಟಿ ಮಾಡುವ ಜೊತೆಗೆ ಜನಪದ ಗೀತೆಗಳನ್ನು ಹಾಡುತ್ತಾ ತಮ್ಮ ಕೆಲಸದಲ್ಲಿ ತೊಡಗಿದ್ದಾರೆ. ಅಡಿಕೆ ಬೆಳೆ ಹೆಚ್ಚಾದಂತೆ ಭತ್ತದ ಬೆಳೆ ಕಡಿಮೆ ಆಗಿದೆ. ಆದರೂ ಅನೇಕ ಭಾಗದಲ್ಲಿ ನಾಟಿ ಶುರುವಾಗಿದೆ. ಮಳೆಯೂ ಕೂಡ ಹೆಚ್ಚಾಗಿದ್ದು ಮಳೆಯನ್ನು ಕೂಡ ಲೆಕ್ಕಿಸದೆ ಕೆಲಸಗಾರರು ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ.
ಅಡಿಕೆ ತೋಟಗಳತ್ತ ಹೊರಟ ರೈತರು
ಅಡಿಕೆ ತೋಟಗಳತ್ತ ಹೊರಟ ರೈತರುಭಾರೀ ಮಳೆ ಕಾರಣ ಈ ಬಾರಿ ಕೆಲವು ಕಡೆ 4-5 ಬಾರಿ ಆಡಿಕೆಗೆ ಔಷಧಿ ಹೊಡೆಯಲಾಗಿದೆ. ಭಾರೀ ಮಳೆ ಗಾಳಿ ಕಾರಣ ತೋಟಕ್ಕೆ ರೈತರು ಹೋಗುವುದಕ್ಕೂ ಕಷ್ಟವಾಗಿತ್ತು. ಇದೀಗ ಒಂದೆರಡು ದಿನಗಳಿಂದ ಮಳೆ ಬಿಟ್ಟ ಕಾರಣ ರೈತರು ತೋಟದ ಕಡೆಗೆ ಮುಖ ಮಾಡುತ್ತಿದ್ದಾರೆ.








