- ಮಲೆನಾಡಿನಲ್ಲಿ ಮಳೆ ಬಿಸಿಲಿನ ಆಟದ ನಡುವೆ ಮೈ ಕೊರೆಯುವ ಚಳಿ
- ಜ್ವರ ಶೀತದಿಂದ ಮಕ್ಕಳು, ಹಿರಿಯ ನಾಗರಿಕರಿಗೆ ಅನಾರೋಗ್ಯ
NAMMUR EXPRESS NEWS
ಮಲೆನಾಡು: ತೀರ್ಥಹಳ್ಳಿ ತಾಲೂಕು ಸೇರಿದಂತೆ ಮಲೆನಾಡಿನ ಬಹುತೇಕ ಕಡೆ ತಂಡಿ ಮತ್ತು ಶೀತದ ಗಾಳಿ ವಾತಾವರಣ ಕಂಡು ಬಂದಿದೆ.
ಕಳೆದೊಂದು ವಾರದಿಂದ ಕೆಲವೆಡೆ ಮಳೆ ಸುರಿಯುತ್ತಿದೆ. ಇನ್ನು ಬಿಸಿಲು ಕೂಡ ಮಧ್ಯಾಹ್ನದ ವೇಳೆ ಇದೆ ಹಾಗೂ ಸಂಜೆಯಾಗುತ್ತಿದ್ದಂತೆ ಮೈ ಕೊರೆಯುವ ಚಳಿ ಜನರನ್ನು ದಂಗು ಮಾಡಿದೆ. ಹಿರಿಯ ನಾಗರಿಕರು, ಮಕ್ಕಳು ಇದರಿಂದ ತೊಂದರೆಗೆ ಒಳಗಾಗುತ್ತಿದ್ದಾರೆ.
ಆಸ್ಪತ್ರೆಗಳಲ್ಲಿ ರಶ್ ಕಂಡುಬರುತ್ತಿದೆ. ಶೀತ ಜ್ವರ ಮೈ-ಕೈ ನೋವಿನಂತ ಸಾಂಕ್ರಾಮಿಕ ರೋಗಗಳು ಜನರನ್ನು ಈಗ ಆತಂಕಕ್ಕೆ ತಳ್ಳಿದೆ.
ಅಡಿಕೆ ಕೊಯ್ಲು, ಭತ್ತದ ಬೆಳೆಗೆ ಹಾನಿ?
ಇನ್ನು ಮಲೆನಾಡಿನಲ್ಲಿ ಅಡಿಕೆ ಕೊಯ್ಲು ಇರುವುದರಿಂದ ಪ್ರತಿದಿನ ಕೆಲಸ ಮಾಡಬೇಕಾಗಿರುವುದರಿಂದ ಶೀತ ಹಾಗೂ ತಂಡಿ ಆತಂಕ ಹುಟ್ಟಿಸಿದೆ. ಒಂದು ಕಡೆ ಮಳೆ ಕೂಡ ತೊಂದರೆ ನೀಡುತ್ತಿದೆ.