ಡಿಗ್ರಿ ಕಾಲೇಜು ಹುಡುಗ ಹೊಳೆಗೆ ಹಾರಿ ಸಾವು!
– ಕುಂದಾದ್ರಿ ಬಳಿ ವಾರಳಿಯಲ್ಲಿ ನಡೆದ ಘಟನೆ
– ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲು
– ಸಾವಿನ ಹಿಂದೆ ನೂರಾರು ಅನುಮಾನ!?
NAMMUR EXPRESS NEWS
ತೀರ್ಥಹಳ್ಳಿ: ಮಾಲತಿ ನದಿಗೆ ಹಾರಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡು ಸಾವಿಗೀಡಾಗಿದ್ದಾನೆ. ತೀರ್ಥಹಳ್ಳಿ ತಾಲೂಕಿನ ಆಗುಂಬೆ ಹೋಬಳಿ ಹೊನ್ನೇತಾಳು ಗ್ರಾಪಂ ವ್ಯಾಪ್ತಿಯ ದಿನೇಶ್ ಎಂಬುವರ ಪುತ್ರ ವಾರಳಿಯ ದ್ರುವ (20) ವಾರಳಿ ಬಳಿ ನದಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾನೆ. ಕಾರಣ ತಿಳಿದು ಬಂದಿಲ್ಲ. ತೀರ್ಥಹಳ್ಳಿ ಡಿಗ್ರಿ ಕಾಲೇಜಲ್ಲಿ ವ್ಯಾಸಂಗ ಮಾಡುತ್ತಿದ್ದು ಘಟನೆ ಸಂಶಯಕ್ಕೆ ಕಾರಣವಾಗಿದೆ. ಕುರುವಳ್ಳಿ ಪ್ರಮೋದ್ ಪೂಜಾರಿ ಮೃತ ದೇಹವನ್ನು ಹೊರ ತರುವಲ್ಲಿ ಯಶಸ್ವಿಯಾಗಿದ್ದಾರೆ. ಆಗುಂಬೆ ಪೊಲೀಸ್ ಠಾಣೆ ಪಿ ಎಸ್ ಐ ರಂಗನಾಥ್ ಅಂತರಗಟ್ಟಿ ಸೇರಿದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.