ಶಿಕ್ಷಣ ಕ್ಷೇತ್ರದಲ್ಲಿ ಡಾ.ಆರ್. ಎಂ.ಜಗದೀಶ್ ದಾರಿ ದೀಪ!
– ಶಿವಮೊಗ್ಗದ ಕಮಲಾ ನೆಹರು ಕಾಲೇಜು ಪ್ರಾಂಶುಪಾಲರಾಗಿ ಈಗ ನಿವೃತ್ತಿ
– ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಪ್ರೇರಣೆ
NAMMUR EXPRESS NEWS
ಶಿವಮೊಗ್ಗ/ ತೀರ್ಥಹಳ್ಳಿ: ಶಿವಮೊಗ್ಗದ ಕಮಲಾ ನೆಹರು ಕಾಲೇಜು ಪ್ರಾಂಶುಪಾಲರಾದ ಡಾ.ಆರ್. ಎಂ.ಜಗದೀಶ್ ವಯೋ ನಿವೃತ್ತಿಯಾಗಿದ್ದಾರೆ. ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ದಾರಿ ದೀಪ ಆಗಿದ್ದ ಜಗದೀಶ್ ಅವರ ನಿವೃತ್ತಿ ಜೀವನಕ್ಕೆ ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು ಶುಭಾಶಯ ಸಲ್ಲಿಸಿದ್ದಾರೆ. ಅಲ್ಲದೆ ಇಡೀ ಆಡಳಿತ, ಸಿಬ್ಬಂದಿ ಅವರ ಸೇವೆಗೆ ವಂದನೆ ಸಲ್ಲಿಸಿದೆ.
ಯುವಕರನ್ನೆ ನಾಚಿಸುವಂತಹ ಸ್ಪುರದ್ರೂಪಿ ಜಗದೀಶ್. ತಮ್ಮ ವ್ಯಕ್ತಿತ್ವದ ಮೂಲಕ ತಮ್ಮನ್ನು ಸೆಳೆಯುವ ಜಗದೀಶ್ ಅವರು ಕೋಣಂದೂರಿನಲ್ಲಿ ಪ್ರೌಢ ಶಿಕ್ಷಣ ಮುಗಿಸಿ ಹೆಚ್ಚಿನ ವಿಧ್ಯಾಭ್ಯಾಸವನ್ನು ಮೈಸೂರಿನಲ್ಲಿ ಮುಗಿಸಿ ತಾನು ಓದಿದ ಶರಾವತಿ ಪ್ರಥಮ ದರ್ಜೆ ಕಾಲೇಜಿನಿಂದಲೇ ಉಪನ್ಯಾಸಕರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ಇವರ ಇತಿಹಾಸ ಪಾಠ ಕೇಳೋಕೆ ಸೊಗಸು ಅಂತ ನೆನಪಿನ ಪುಟವನ್ನು ಇವರ ನೂರಾರು ವಿದ್ಯಾರ್ಥಿಗಳು ತೆರೆದಿಡುತ್ತಾರೆ.
ಉತ್ತಮ ಕ್ರೀಡಾಪಟುವೂ ಹೌದು..!
ತಮ್ಮ ವಿದ್ಯಾರ್ಥಿ ದೆಸೆಯಿಂದಲೂ ಉತ್ತಮ ಕ್ರೀಡಾಪಟು ಆಗಿದ್ದ ಇವರು ,ಟೂರ್ನಮೆಂಟ್ ಗಳು ನಡೆದಾಗ ಇವರು ಆಡುತ್ತಿದ್ದ ವಾಲಿಬಾಲ್ ಆಟ ನೋಡಲೆಂದೆ ಒಂದಷ್ಟು ಜನ ಸೇರುತ್ತಿದ್ದರು,
ನಿಖರವಾಗಿ ತಮ್ಮ ವಿಚಾರಗಳನ್ನ ಪ್ರತಿಪಾದಿಸುವ ವ್ಯಕ್ತಿತ್ವದ ಮೃದುಭಾಷಿಯಾಗಿದ್ದ ಆರ್.ಎಂ.ಜೆ ಎಂದೆ ಪರಿಚಿತರು. ಯಾವ ಸಿನೆಮಾ ನಟರಿಗು ಕಮ್ಮಿ ಇಲ್ಲದಂತಹ ಅಷ್ಟು ಸುಂದರವಾಗಿದ್ದರು. ದೃಡ ನಿಲುವಿನ ವ್ಯಕ್ತಿ ವ್ಯಕ್ತಿತ್ವ ಎರಡು ಅವರಲ್ಲಿತ್ತು.
ಅನೇಕರ ಬದುಕಿಗೆ ಪ್ರೇರಣೆ!
ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದ ಇವರ ವ್ಯಕ್ತಿತ್ವ ತುಂಬಾ ಜನರಿಗೆ ಬದುಕನ್ನು ಕಟ್ಟಿಕೊಳ್ಳಲು ಪ್ರೇರಣೆಯಾಗಿದೆ, ಪ್ರತಿಯೊಬ್ಬರನ್ನೂ ಹುರುದುಂಬಿಸಿ ಆಟದಲ್ಲಿರಬಹುದು ಓದುವುದರಲ್ಲಿರಬಹುದು ನಿನ್ನಿಂದ ಆಗುತ್ತದೆ ಪ್ರಯತ್ನಿಸು ಎಂದು ಹೇಳಿದ್ದನ್ನ ಕೇಳಿದವರು ಇವತ್ತು ಸಮಾಜದಲ್ಲಿ ಉತ್ತಮ ವ್ಯಕ್ತಿ ಗಳಾಗಿ ರೂಪುಗೊಂಡಿದ್ದಾರೆ.NSS ನಲ್ಲಿ ತೊಡಗಿಸಿಕೊಂಡು ಒಬ್ಬ ವಿಧ್ಯಾರ್ಥಿ ಉತ್ತಮ ನಡತೆಯೊಂದಿಗೆ ಸಮಾಜಮುಖಿ ಯೋಚನೆಗಳೊಂದಿಗೆ ಜೀವನ ಸಾಕರಗೊಳಿಸಲು ಪ್ರೇರಕರಾಗಿದ್ದರು, ತಾನು ಏನೆ ಸಹಕಾರ ಮಾಡಿದರೂ ಅದನ್ನ ಹೇಳಿಕೊಳ್ಳುವ ಸ್ವಭಾವ ಇವರದ್ದಾಗಿರಲಿಲ್ಲ.ಸನ್ಮಾನಗಳು , ಹೋಗಳಿಸಿಕೊಳ್ಳುವುದರಿಂದ ಸದಾ ದೂರವಿರುವ ಜಗದೀಶ್ ಅವರ ಸೇವೆ ಅಪಾರ.
ತಾನೆಷ್ಟೆ ಎತ್ತರಕ್ಕೆ ಬೆಳೆದರು ತನ್ನ ಬಾಲ್ಯ ಕಷ್ಟದಿಂದ ಬೆಳೆದು ಬಂದ ರೀತಿ, ತನ್ನ ಜೊತೆಯಾದ ಗೆಳೆಯರು ,ಊರುಕೇರಿ, ಪರಿಸರ ಎಲ್ಲವನ್ನೂ ಅವಾಗವಾಗ ನೆನಪಿಸಿಕೊಂಡು ವಯಸಿನಲ್ಲಿ ಚಿಕ್ಕವರನ್ನು ಗೌರವಿಸಿಕೊಂಡು ಜೀವಿಸುವಂತಹ ಸಜ್ಜನ.
ಊರು, ಸ್ನೇಹಿತರ ಮೇಲೆ ಪ್ರೀತಿ..!
ಕೋಣಂದೂರಿನಲ್ಲಿ ಶರಾವತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅನೇಕ ವರ್ಷಗಳಕಾಲ ಉಪನ್ಯಾಸಕರಾಗಿ ಸೇವೆಸಲ್ಲಿಸಿದ ಇವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ “ಸೋಶಿಯಲಿಸ್ಟ್ ಮೂವ್ಮೆಂಟ್ ಇನ್ ಕರ್ನಾಟಕ” ಎಂಬ ವಿಷಯದಲ್ಲಿ ಪಿ ಹೆಚ್ ಡಿ ಮಾಡಿ ಡಾಕ್ಟರೇಟ್ ಕೂಡಗಳಿಸಿದ್ದಾರೆ, ಕೋಣಂದೂರಿನಿಂದ ಶಿವಮೊಗ್ಗಕ್ಕೆ ವರ್ಗಾವಣೆಗೊಂಡ ಇವರು ಕಮಲಾ ನೆಹರು ಕಾಲೇಜಿನಲ್ಲಿ ವೃತ್ತಿ ಯನ್ನ ಮುಂದುವರೆಸಿ ಪ್ರಾಂಶುಪಾಲರಾಗಿ ಸೇವೆಸಲ್ಲಿಸಿ ಕಳೆದ ತಿಂಗಳು ವೃತ್ತಿಯಿಂದ ನಿವೃತ್ತಿಹೊಂದಿದ್ದಾರೆ. ಅನೇಕರ ಮಾರ್ಗದರ್ಶನದಲ್ಲಿ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಹೇಗೆ ಒಬ್ಬ ವ್ಯಕ್ತಿ ಬೆಳೆಯಬಹುದು ತನ್ನದೆ ಛಾಪನ್ನ ಮೂಡಿಸಬಹುದು ಎಂಬುದಕ್ಕೆ ಇವರೆ ಸಾಕ್ಷಿ.
ಮಡದಿ ಶುಭಾ ಇಬ್ಬರು ಗಂಡುಮಕ್ಕಳ ಸುಖಿಕುಟುಂಬದೊಂದಿಗೆ ಇವರನ್ನ ಪ್ರೀತಿಸುವ ಬಹುದೊಡ್ಡ ಶಿಷ್ಯವೃಂದವೆ ಇವರ ಜೊತೆಯಲ್ಲಿ ಇದೆ.
NES ಸಂಸ್ಥೆ ಇವರ ಸೇವೆಯನ್ನ ಇಲ್ಲಿಗೆ ಮೊಟಕುಗೊಳಿಸದೆ ಮುಂದೆಯು ಇವರ ಉಪಯೋಗ ಪಡೆದುಕೊಳ್ಳಲಿ ವಿಧ್ಯಾರ್ಥಿ ಗಳಿಗೆ ಇವರಿಂದ ಅನುಕೂಲವಾಗಲಿ ಎಂಬುದೆ ಎಲ್ಲರ ಹಾರೈಕೆಯಾಗಿದೆ.
ಮಾಹಿತಿ: ಮುರುಗರಾಜ್, ಕೋಣಂದೂರು








