ಹೆಚ್ಚಾಯ್ತು ಮಳೆ: ತೋಟದಲ್ಲಿ ಕೊಳೆ!
– ಮಲೆನಾಡ ರೈತನ ಬದುಕು ಆತಂಕದತ್ತ: ದೇವರೇ ಕಾಪಾಡು
– ಒಂದು ಕಡೆ ಮಳೆ, ಇನ್ನೊಂದೆಡೆ ಅಡಿಕೆ ದರ ಕುಸಿತ
– ರೈತರಿಗೆ ಪರಿಹಾರ ಘೋಷಿಸಬೇಕೆಂದು ಕ್ಯಾಂಪ್ಕೊ ಮನವಿ
NAMMUR EXPRESS NEWS
ಮಲೆನಾಡು: ಮಲೆನಾಡಿನ ಜೀವನ ಆಧಾರ ಬೆಳೆ ಅಡಿಕೆಗೆ ಮಳೆ ಹೆಚ್ಚಾದ ಕಾರಣ ಕೊಳೆ ರೋಗ ಬಾಧಿಸಿದ್ದು ಎಲ್ಲೆಡೆ ಅಡಿಕೆ ಕೊಳೆ ರೋಗದ ಕಾರಣ ಉದುರುತ್ತಿದೆ.
ಒಂದು ಕಡೆ ಭಾರೀ ಮಳೆ ಕಾರಣ ಕೊಳೆ ಬಂದು ಈಗಾಗಲೇ ತೋಟಗಳಲ್ಲಿ 4-5 ಬಾರಿ ಔಷಧಿ ಸಿಂಪಡಣೆ ಮಾಡಲಾಗಿದೆ. ಇದೀಗ ಮಳೆ ಕಳೆದ ಒಂದು ವಾರದಿಂದ ಹೆಚ್ಚಾಗಿದ್ದು ಮತ್ತಷ್ಟು ಆತಂಕ ಸೃಷ್ಟಿ ಮಾಡಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ,ಹೊಸನಗರ, ಭದ್ರಾವತಿ, ಸಾಗರ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶೃಂಗೇರಿ, ನ. ರಾ ಪುರ, ಕಳಸ, ಮೂಡಿಗೆರೆ, ಚಿಕ್ಕಮಗಳೂರು ಸೇರಿ ಮಲೆನಾಡ ಭಾಗದಲ್ಲಿ
ಕೊಳೆ ಮತ್ತು ಎಲೆ ಚುಕ್ಕಿ ರೋಗ ರೈತರನ್ನು ಆತಂಕಕ್ಕೆ ತಳ್ಳಿದೆ. ಈ ನಡುವೆ ಮಳೆ ಮತ್ತೆ ಹೆಚ್ಚಾಗಿರುವುದು ರೈತರ ಬದುಕಿಗೆ ಳ್ಳಿ ಇಡಲಿದೆ.
ಇನ್ನು ಅಡಿಕೆ ದರ ಕೂಡ ಕುಸಿಯುತ್ತಿದೆ. ಇದು ಕೂಡ ಆತಂಕ ಸೃಷ್ಟಿ ಮಾಡಿದೆ.
ಮಲೆನಾಡು ಭಾಗದಲ್ಲಿ ಮೇಘಸ್ಫೋಟ, ಬಿಸಿಲು ಮಳೆ, ಹವಮಾನ ವೈಪರಿತ್ಯದಿಂದ ಕೊಳೆ ರೋಗ ಹೆಚ್ಚುತ್ತಿದ್ದು ವರ್ಷವಿಡಿ ಮಗುವಿನಂತೆ ಜಾಗರೂಕತೆಯಿಂದ ಬೆಳೆಸಿದ ಮರ, ಅಡಿಕೆ ಕಾಯಿ ಸರ್ವನಾಶ ಹಂತ ತಲುಪಿದೆ. ರೈತರು ತಮ್ಮ ವ್ಯಥೆ ಹೇಳಲಾಗದೆ ಒದ್ದಾಡುವ ಸ್ಥಿತಿಗೆ ತಲುಪಿದ್ದಾರೆ. ಸರ್ಕಾರ ಗಮನ ಹರಿಸದಿದ್ದರೆ ರೈತರ ಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ.
ಪರಿಹಾರ ಘೋಷಿಸಬೇಕೆಂದು ಕ್ಯಾಂಪ್ಕೊ ಮನವಿ
ಬಿಸಿಲ ಬೇಗೆ ಹಾಗೂ ಮುಂಗಾರಿನಲ್ಲಿ ಮಳೆಯ ಆರ್ಭಟದಿಂದಾಗಿ ಅಡಿಕೆ ಬೆಳೆಗಾರರು ತೀವ್ರ ಸಂಕಷ್ಟ ಅನುಭವಿಸಿದ್ದಾರೆ. ಅಡಿಕೆಯನ್ನು ಕಾಡಿದ ಕೊಳರೋಗ ರೈತರನ್ನು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದೆ. ಹಾಗಾಗಿ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ಘೋಷಿಸಬೇಕು ಎಂದು ಕರ್ನಾಟಕ ಮತ್ತು ಕೇರಳ ಮುಖ್ಯಮಂತ್ರಿಗಳಿಗೆ ಕ್ಯಾಂಪ್ಕೊ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿ ಅವರು ಪತ್ರದ ಮೂಲಕ ಮನವಿ ಮಾಡಿದ್ದಾರೆ.
ರೈತರನ್ನು ಈ ದಯನೀಯ ಸ್ಥಿತಿಯಿಂದ ಪಾರು ಮಾಡಲು, ರಾಜ್ಯದಲ್ಲಿ ಅಡಿಕೆ ಬೆಳೆ ನಾಶದ ಬಗ್ಗೆ ತುರ್ತು ಸಮೀಕ್ಷೆ ನಡೆಸುವಂತೆ ಸಂಬಂಧಪಟ್ಟ ಇಲಾಖೆಗೆ ನಿರ್ದೇಶನ ನೀಡಬೇಕು ಹಾಗೂ ಅದರ ಪ್ರಕಾರ ಪರಿಹಾರ ಘೋಷಿಸಬೇಕು.
ಕ್ಯಾಂಪ್ಕೊ ಮತ್ತು ಇತರ ಸಹಕಾರ ಸಂಸ್ಥೆಗಳು ಸರ್ವ ಪ್ರಯತ್ನಗಳ ಮೂಲಕ ಕೆ.ಜಿ. ಗೆ 400 ರೂಪಾಯಿಗಳ ಆಸುಪಾಸಿನಲ್ಲಿ ಅಡಿಕೆಯ ದರವನ್ನು ಸ್ಥಿರೀಕರಿಸಿ ರೈತರ ಬೆಂಲಕ್ೆ ನಿಂತಿವೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.