ಇದೇನಾ ಡಿಜಿಟಲ್ ಇಂಡಿಯಾ..?: ನೆಟ್ವರ್ಕ್ ಇಲ್ಲ.. ಕಾಲ್ ಇಲ್ಲ!
– ಮಲೆನಾಡಿನ ಅನೇಕ ಕಡೆ ಸತ್ತೋದ ಬಿ.ಎಸ್.ಎನ್ ಎಲ್ ನೆಟ್ವರ್ಕ್
– ಜನರ ಜೀವನಕ್ಕೆ ಸಮಸ್ಯೆ: ಶುರುವಾಗಿದೆ ಹೋರಾಟ
ನಮಗೆ ಬೇಕು ನೆಟ್ವರ್ಕ್ ಅಭಿಯಾನ!
NAMMUR EXPRESS NEWS
ಶಿವಮೊಗ್ಗ/ ಚಿಕ್ಕಮಗಳೂರು: ಸರ್ಕಾರದ ಸ್ವಾಧೀನದಲ್ಲಿರುವ ಮತ್ತು ಭಾರತದ ಪ್ರಮುಖ ನೆಟ್ ವರ್ಕ್ ಸಂಸ್ಥೆಯಾದ ಬಿಎಸ್ಎನ್ಎಲ್ ಇತ್ತೀಚಿನ ದಿನಗಳಲ್ಲಿ ತನ್ನ ಕಾರ್ಯಕ್ಷಮತೆಯ ಕುಂಠಿತದಿಂದಾಗಿ, ಸಾರ್ವಜನಿಕರಿಂದ ದೋಷಾರೋಪಣೆಗೆ ಒಳಗಾಗಿದೆ. ಅಲ್ಲದೆ ನೆಟ್ವರ್ಕ್ ಅಡಚಣೆಗಳ ಆಗರವಾಗಿದೆ ಬಿಎಸ್ಎನ್ಎಲ್ ಸಂಸ್ಥೆ. ಗ್ರಾಹಕರು ತಮಗಿರುವ ಪ್ಯಾಕೇಜ್ ಹಾಕಿಸಿದರೂ ನೆಟ್ವರ್ಕ್ ಸಿಗಲ್ಲ. ಜತೆಗೆ ಸಿಕ್ಕರೂ ಕರೆ ಸ್ವೀಕಾರ ಆಗಲ್ಲ. ಕೇಳಲ್ಲ ಹೀಗೆನೂರೆಂಟು ಸಮಸ್ಯೆಗಳು ಗ್ರಾಹಕರನ್ನು ಕಾಡುತ್ತಿವೆ.
ಬಿಎಸ್ಎನ್ಎಲ್ ನೆಟ್ವರ್ಕ್ ನಂಬಿಕೊಂಡ ಹಲವಾರು ಕಛೇರಿಗಳು, ಸಂಘ ಸಂಸ್ಥೆಗಳು, ಮೊಬೈಲ್ ಬಳಕೆದಾರರು ಬಿಎಸ್ಎನ್ಎಲ್ ನ ಜಾಲತಾಣಗಳು ತಕ್ಷಣ ಕಾರ್ಯವನ್ನು ನಿರ್ವಹಿಸಲು ಸ್ಪಂದಿಸದ ಹಿನ್ನೆಲೆಯಲ್ಲಿ,ನೆಟ್ ವರ್ಕ್ ವಿಚಾರದಲ್ಲಿ ಬದಲಾವಣೆ ಬಯಸಿದ್ದಾರೆ ಹಾಗೂ ಬಯಸುತ್ತಿದ್ದಾರೆ. ಆದರೆ ಅನೇಕ ಊರುಗಳಲ್ಲಿ ಬೇರೆ ನೆಟ್ವರ್ಕ್ ಕೂಡ ಇಲ್ಲದಾಗಿದೆ.
ವರ್ಕ್ ಫ್ರಮ್ ಹೋಂ, ವಿದ್ಯಾರ್ಥಿಗಳಿಗೆ ಇದರಿಂದ ಅವರ ಭವಿಷ್ಯ ಕತ್ತಲೆ ಆಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಕರಾವಳಿ ಭಾಗದ ಅರಣ್ಯ ಹಾಗೂ ಬೆಟ್ಟ ಗುಡ್ಡ ಪ್ರದೇಶಗಳಲ್ಲಿ ನೆಟ್ವರ್ಕ್ ಇಲ್ಲದೆ ನೂರಾರು ಜನ ಜೀವ ಕಳೆದುಕೊಂಡಿದ್ದಾರೆ. ಇದಕ್ಕೆ ನಿದರ್ಶನ ಎನ್ನುವಂತೆ ಹಿಂದುಳಿದ ತಾಲ್ಲೂಕು ಎನಿಸಿಕೊಂಡ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಬಹುತೇಕ ಭಾಗಗಳಲ್ಲಿ ಬಿಎಸ್ಎನ್ಎಲ್ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಸ್ಥಳೀಯರು ಬಿಎಸ್ಎನ್ಎಲ್ ಹುಡುಕಿಕೊಡಿ ಎಂದು ಮನವಿ ಮಾಡಿಕೊಳ್ಳುವಂತಾಗಿದೆ. ಇದು ಇಂದಿನದಲ್ಲ ಕಳೆದ ಎರಡು ಮೂರು ವರ್ಷಗಳಿಂದ ಎದುರಿಸುತ್ತಿರುವ ಸಮಸ್ಯೆಯಾಗಿದೆ. ಕೂಡಲೇ ಸಂಸದರು, ಶಾಸಕರು, ಅಧಿಕಾರಿಗಳು ಗಮನಿಸಬೇಕಿದೆ. ಇಲ್ಲವಾದಲ್ಲಿ ಸಾವಿರಾರು ಜನರ ಬದುಕು ಕತ್ತಲೆಯಾಗಲಿದೆ ಎಂಬ ಅಗ್ರಹ ವ್ಯಕ್ತವಾಗಿದೆ.
ಜನಪ್ರತಿನಿಧಿಗಳು, ಅಧಿಕಾರಿಗಳು, ಎಲ್ಲಾ ಸಾಮಾಜಿಕ ಜಾಲ ತಾಣಗಳಲ್ಲಿ ಶೇರ್ ಮಾಡಿ… ಹೋರಾಟಕ್ಕೆ ಕೈ ಜೋಡಿಸೋಣ.








