ಮಲ್ನಾಡ್ ಟಾಪ್ 4 ನ್ಯೂಸ್
ಪೂಜೆಗೆ ಕೂರಿಸಿ ಚಿನ್ನದ ಜತೆ ಮಂತ್ರವಾದಿ ಪರಾರಿ!
• ಶಿವಮೊಗ್ಗ: ಮಾಂತ್ರಿಕನ ನೆಪದಲ್ಲಿ ಬಂದು ಚಿನ್ನಾಭರಣಗಳ ಕಳವು
• ಹೊಸನಗರ: ರೈತನೋರ್ವ ಕೀಟನಾಶಕ ಸೇವಿಸಿ ಆತ್ಮಹತ್ಯೆ!!
• ಭದ್ರಾವತಿ: ಕೊರಿಯೋಗ್ರಾಫರ್ ಯುವತಿ ಬೆಂಗಳೂರಿನಲ್ಲಿ ಹತ್ಯೆ
– ಶಿವಮೊಗ್ಗ: ಫುಟ್ಪಾತ್ ಹೋಟೆಲ್ ನಲ್ಲಿ ಗೋಮಾಂಸ?!
NAMMUR EXPRESS NEWS
• ಶಿವಮೊಗ್ಗ: ಮಾಂತ್ರಿಕನ ನೆಪದಲ್ಲಿ ಬಂದು ಚಿನ್ನಾಭರಣಗಳ ಕಳವು
ಶಿವಮೊಗ್ಗ:ಮಾಟ ಮಂತ್ರ ಬಳಸಿ ಕುಟುಂಬದ ಸಮಸ್ಯೆಗೆ ಪರಿಹಾರ ನೀಡುವುದಾಗಿ ಹೇಳಿ ಮಾಂತ್ರಿಕನ ನೆಪದಲ್ಲಿ ಬಂದ ಮಾಂತ್ರಿಕ 13,60,000 ರೂ ಮೌಲ್ಯದ ಚಿನ್ನಾಭರಣಗಳನ್ನ ಕಳುವು ಮಾಡಿರುವ ಘಟನೆ ಸೋಮಿನಕೊಪ್ಪದ ಭೋವಿ ಕಾಲೋನಿಯಲ್ಲಿ ನಡೆದಿದೆ.
ಶ್ರೀನಿವಾಸ ಎಂಬ ವ್ಯಕ್ತಿ ಸೋಮಿನಕೊಪ್ಪದ ಭೋವಿ ಕಾಲೋನಿ ನಿವಾಸಿಗಳಿಗೆ ಭದ್ರಾವತಿಯಲ್ಲಿ ಸಿಕ್ಕಿರುತ್ತಾನೆ. ಒಬ್ಬರ ಮನೆಗೆ ಹೋಗಿ ಅವರ ಬೆನ್ನನ್ನ ಕೊಯ್ದು ಒಂದು ತಗಡನ್ನು ತೆಗೆದು ನಿಮಗೆ ಮಾಟ ಮಾಡಿದ್ದಾರೆ ಎಂದು ತೋರಿಸಿದ್ದ. ಅನ್ನು ನೋಡಿದ ಮಹಿಳೆ ನನಗೂ ಆರೋಗ್ಯದಲ್ಲಿ ಸರಿ ಇಲ್ಲ ನಾನು ಸ್ವಲ್ಪ ತೋರಿಸಬೇಕು ಅಂದಿದ್ದಕ್ಕೆ ನಾನು ನಿಮ್ಮ ಮನೆಗೆ ಬರುತ್ತೇನೆ ಎಂದು ಮಹಿಳೆಯ ವಿಳಾಸವನ್ನು ಪಡೆದುಕೊಂಡಿದ್ದಾನೆ.
ಮೇ ತಿಂಗಳಲ್ಲಿ ಮಹಿಳೆಯ ಮನೆಗೆ ಬಂದು ನಿಮ್ಮ ಮನೆಯಲ್ಲಿ ಬಹಳ ತೊಂದರೆ ಇದೆ ಇವುಗಳನ್ನೆಲ್ಲಾ ಪರಿಹಾರ ಮಾಡಿಕೊಡುತ್ತೇನೆ. ಇದು ಕುಟುಂಬದ ಎಲ್ಲರಿಗೂ ತೊಂದರೆ ಕೊಡುತ್ತೆ ನೀವು ಇದಕ್ಕೆ ಒಡವೆಗಳನ್ನು ಇಟ್ಟು ಪೂಜೆ ಮಾಡಬೇಕು ಎಂದು ನಂಬಿಸಿದ್ದಾನೆ.
ಇದನ್ನ ನಂಬಿದ ಮಹಿಳೆ ಮನೆಯಲ್ಲಿದ್ದ 34 ತೊಲದ ಒಡವೆಗಳನ್ನು ಆತನಿಗೆ ಕೊಟ್ಟಿದ್ದಾರೆ. ನಾನು ಬಾಗಿಲು ‘ಹಾಕಿಕೊಂಡು ಪೂಜೆ ಮಾಡುತ್ತೇನೆ!. ನೀವು ಯಾರೂ ಬರಬಾರದು ಎಂದು ಅವನೇ ಒಂದು ಪೆಟ್ಟಿಗೆ ತಂದು ಒಡವೆಗಳನ್ನು ಅದರಲ್ಲಿ ಇಟ್ಟು ಪೂಜೆ ಮಾಡಿದ್ದಾನೆ. ನಂತರ 54 ದಿನ ನೀವು ಪೂಜೆ ಮಾಡಿ ನಂತರ ನಾನೆ ಬಂದು ನಿಮ್ಮ ಎಲ್ಲಾ ಒಡವೆಗಳನ್ನ ಕೊಟ್ಟು ಹೋಗುತ್ತೇನೆ. ಎಂದು ಹೇಳಿದ್ದಾನೆ.
54 ದಿನ ನಂತರ ಮಹಿಳೆ ಪೋನ್ ಮಾಡಿದ್ದಾರೆ. ‘ಬರುತ್ತೇನೆ’ ಎಂದು ಹೇಳಿದ ಶ್ರೀನಿವಾಸ್ ಮಧ್ಯದಲ್ಲಿ ಮಹಿಳೆಯಿಂದ ಪೂಜೆಗೆ ಹಣ ಬೇಕು ಎಂದು 50,000 ರೂ.ವನ್ನೂ, ಮೂರು ಲಕ್ಷ ರೂಪಾಯಿಗಳನ್ನು (3ಲಕ್ಷ) ಕುರಿ ಕೋಳಿ ಕಡಿಬೇಕು ಎಂದು ಹಣ ಪಡೆದಿದ್ದಾನೆ. ಇವೆಲ್ಲ, ನಿಮ್ಮ ಒಳ್ಳೆಯದಕ್ಕೆ ಮಾಡುವುದು ಎಂದು ಹೇಳಿದ್ದಾನೆ.
ಪೋನ್ ಮೂಲಕ ಮಾತನಾಡಿದ ಮಹಿಳೆ ನಮಗೆ ಒಡವೆಗಳನ್ನ ಕೊಡಿ ಎಂದು ಕೇಳಿದ್ದು ನಂತರ ಅವರ ಫೋನುಗಳನ್ನು ಸಹ ಸ್ವೀಕರಿಸುವುದನ್ನ ನಿಲ್ಲಿಸಿದ್ದಾನೆ. ಮಾರನೆ ದಿನ ಆತನ ಮೇಲೆ ಅನುಮಾನ ಬಂದು ಪೆಟ್ಟಿಗೆ ಒಡೆದರೆ ಅದರಲ್ಲಿ ನಕಲಿ ಮಾಲುಗಳನ್ನು ತುಂಬಿಸಿದ್ದು ಕಂಡು ಬಂದಿದೆ.
ಫೋನ್ ಮಾಡಿದರೆ ಆತ ಕರೆ ಸ್ವೀಕರಿಸದ ಹಿನ್ನಲೆಯಲ್ಲಿ ಮಹಿಳೆಗೆ ಆತಂಕವುಂಟಾಗಿದೆ. ಸಾಲ ಮಾಡಿ ಹಣ ಕೊಟ್ಟಿದ್ದು ಕಷ್ಟಪಟ್ಟು ಮಾಡಿಕೊಂಡ ಒಡವೆಗಳನ್ನು ಸಹ ಆತನಿಗೆ ಕೊಟ್ಟಿದ್ದರಿಂದ ಅವನನ್ನು ಹುಡುಕಿಸಿ ನಮ್ಮ ಒಡವೆ ಹಾಗು ಹಣ ಕೊಡಿಸಿ ಅವನಿಗೆ ಇನ್ನು ಮುಂದೆ ಈ ರೀತಿ ಜನರಿಗೆ ಮೋಸ ಮಾಡದಂತೆ ಕಾನೂನು ಕ್ರಮ ಜರುಗಿಸಬೇಕಾಗಿ ಮಹಿಳೆ ವಿನೋಬನಗರ ಪೊಲೀಸ್ ಠಾೆಯಲ್ಲಿ ದರು ನೀಡಿದ್ದಾರೆ.
• ಭದ್ರಾವತಿ: ಕೊರಿಯೋಗ್ರಾಫರ್ ಯುವತಿ ಬೆಂಗಳೂರಿನಲ್ಲಿ ಹತ್ಯೆ
ಭದ್ರಾವತಿ: ಬೆಂಗಳೂರಿನಲ್ಲಿ ಚಿತ್ರೋದ್ಯಮದಲ್ಲಿ ಕೊರಿಯೊಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದ ಭದ್ರಾವತಿಯ ವಿವಾಹಿತೆ ಯುವತಿಯನ್ನು ಆಕೆಯ ಗಂಡನೇ ಕೊಲೆ ಮಾಡಿರುವ ಘಟನೆ ವರದಿಯಾಗಿದೆ.
ಪ್ರೀತಿಸಿ ಮದುವೆಯಾದ ಹೆಂಡತಿಯ ಶೀಲವನ್ನು ಶಂಕಿಸಿ ಕೊಲೆ ಚಿತ್ರಹಿಂಸೆ ಕೊಟ್ಟು ಹತ್ಯೆ ಮಾಡಿರುವುದಾಗಿ ವರದಿಯಾಗಿದೆ. ಬೆಂಗಳೂರಿನ ಕೆಂಗೇರಿಯ ವಿಶ್ವೇಶ್ವರಯ್ಯ ಲೇಔಟ್ನಲ್ಲಿ ಈ ಹತ್ಯೆ ನಡೆದಿದೆ. ಕೊಲೆಯಾದ ಯುವತಿಯನ್ನು ನವ್ಯಾ (25) ಎಂದು ಗುರುತಿಸಲಾಗಿದೆ. ಪತ್ನಿಯ ಕಾರ್ಯಭಾರ ಅರ್ಥ ಮಾಡಿಕೊಳ್ಳದೆ ಸಂಶಯದ ದೃಷ್ಟಿಯಿಂದ ಆಕೆಯನ್ನು ಕಂಡು ಗಂಡ ಕಿರಣ್ ಅನೈತಿಕ ಸಂಬಂಧವಿದೆ ಎಂದು ಆಕೆಯ ಶೀಲದ ಮೇಲೆ ಶಂಕೆ ವ್ಯಕ್ತಪಡಿಸುತ್ತ ಹಿಂಸೆ ಕೊಡುತ್ತಿದ್ದ ಎನ್ನಲಾಗಿದೆ. ಕಿರಣ್ ಮತ್ತು ನವ್ಯಾ ಮೂರು ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಜೊತೆಯಲ್ಲಿ ಸಾಕಷ್ಟು ಸುತ್ತಾಡಿ ಮದುವೆಯಾಗಿದ್ದರು. ಈಕೆ ಕೊರಿಯೋಗ್ರಾಫರ್ ಆಗಿದ್ದರಿಂದ,ಸಿನಿಮಾ ಕ್ಷೇತ್ರದಲ್ಲಿ ಸಾಕಷ್ಟು ಕೆಲಸದ ಒತ್ತಡವಿದ್ದ ಕಾರಣಕ್ಕೆ ಸಮಯಕ್ಕೆ ಸರಿಯಾಗಿ ಮನೆಗೆ ಹೋಗದ ಕಾರಣಕ್ಕೆ ಹೆಂಡತಿಯೊಂದಿಗೆ ಗಂಡ ದಿನನಿತ್ಯ ಜಗಳಮಾಡುತ್ತಿದ್ದ. ಈಕೆಯನ್ನು ಹತ್ಯೆ ಮಾಡಿದ ಈಕೆಯ ಗಂಡ ಕಿರಣ್ ಎಂದು ಪೋಲೀಸ ಅಧಿಕಾರಿ ತನಿಖೆಯಿಂದ ತಿಳಿದು ಬಂದಿದೆ. ಕಿರಣ್ ನಿತ್ಯ ಪತ್ನಿಯನ್ನು ಕುರ್ಚಿಗೆ ಕಟ್ಟಿಹಾಕಿ ಚಿತ್ರಹಿಂಸೆ ಕೊಟ್ಟು “ನೀನು ಯಾರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದೀಯ -ಯಪ್ಪ ಹೇಳು ಎಂದು ಕೇಳುತ್ತಿದ್ದ. ಹೆಂಡತಿಯ ಸಮಜಾಯಿಸಿ ಒಪ್ಪದೆ ಕೋಪಗೊಂಡು ಮಧ್ಯಾಹ್ನ 1 ರಿಂದ ಎರಡು ಗಂಟೆ ಸುಮಾರಿಗೆ ಹೆಂಡತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಕೆಂಗೇರಿ ಠಾಣೆಯಲ್ಲಿ ದೂರು ದಾಖಲಾಗಿದೆ.
• ಶಿವಮೊಗ್ಗ: ಫುಟ್ಪಾತ್ ಹೋಟೆಲ್ ನಲ್ಲಿ ಗೋಮಾಂಸದ ಅಡುಗೆ ಪತ್ತೆ
ಶಿವಮೊಗ್ಗ : ಸಾಗರ ರಸ್ತೆಯಲ್ಲಿರುವ ಎಪಿಎಂಎಸಿ ಬಸ್ ನಿಲ್ದಾಣದ ಪಕ್ಕದಲ್ಲಿ ಗೋಾಂಸ ಖಾದ್ಯ ಮಾರಾಟ ಮಾಡುತ್ತಿರುವ ತಳ್ಳುವ ಗಾಡಿ ಅಂಗಡಿಯ ಮೇಲೆ ವಿನೋಬ ನಗರ ಪೊಲೀಸರು ದಾಳಿ ನಡೆಸಿದ್ದಾರೆ. ಎಪಿಎಂಸಿ ಬಸ್ ಸ್ಟ್ಯಾಂಡ್ ಪಕ್ಕದಲ್ಲಿ ಕಪ್ಪು ಬಣ್ಣದ ಟಾರ್ಪಲ್ ಮೇಲ್ಬಾಗಕ್ಕೆ ಕಟ್ಟಿಕೊಂಡು ಅದರ ಒಳಗೆ ಯಾವುದೇ ಪರವಾನಗಿ ಇಲ್ಲದೆ ಪುಟ್ ಪಾತ್ ಮೇಲೆ ಅನಧಿಕೃತವಾಗಿ ತಳ್ಳುವ ಗಾಡಿಯಲ್ಲಿ ಗೋಮಾಂಸ ಖಾದ್ಯಗಳನ್ನು ಅಡುಗೆ ಮಾಡಿ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿದೆ. ಮಾಹಿತಿ ಆಧಾರದ ಮೇರೆಗೆ ವಿನೋಬನಗರ ಪೊಲೀಸರು ಗೋಹತ್ಯೆ ನಿಷೇಧ ಪ್ರಕರಣ 2020ರ ಅಡಿ ದಾಳಿ ನಡೆಸಲಾಗಿದೆ. ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಯಾವುದೇ ಅಧಿಕೃತ ಗೋಮಾಂಸದ ಕಸಾಯಿ ಖಾನೆಗಳು ಇಲ್ಲದೆ ಇದ್ದರೂ ಈ ಗೋಮಾಂಸದ ಹೋಟೆಲ್ ಗೋಮಾಂಸ ನೀಡಿರುವ ಮೇಲೆ ಮತ್ತು ಗೋ ಹತ್ಯೆ ಮಾಡಿರುವವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹೊಸನಗರ: ರೈತನೋರ್ವ ಕೀಟನಾಶಕ ಸೇವಿಸಿ ಆತ್ಮಹತ್ಯೆ!
ಹೊಸನಗರ: ಸಾಲಬಾಧೆಗೆ ತುತ್ತಾಗಿ ಹೋಬಳಿ ಮುಂಡಳ್ಳಿ ಸಮೀಪದ ನರ್ತಿಗೆ ಗ್ರಾಮದ ವಾಸಿ ರೈತ ಎನ್.ಟಿ. ತಿಮ್ಮಪ್ಪ(52) ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆ. 30ರಂದು ಸಂಭವಿಸಿದೆ.
ತನ್ನ ತೋಟದಲ್ಲಿ ಕೆಲಸಕ್ಕೆಂದು ತೆರಳಿದ್ದ ವೇಳೆ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ವಾಂತಿ ಮಾಡಿಕೊಳ್ಳುತ್ತಿದ್ದ ಸಮಯದಲ್ಲಿ ಮನೆಯವರು ವಿಚಾರಿಸಲು ಮುಂದಾದಾಗ ವಿಷದ ವಾಸನೆ ಬಂದಿದೆ. ತತಕ್ಷಣ ಚಿಕಿತ್ಸೆ ಕೊಡಿಸಲು ಮುಂದಾದರೂ ಪ್ರಯೋಜನವಾಗದ ಮಾರ್ಗಮಧ್ಯದಲ್ಲಿ ಅಸುನೀಗಿದ್ದಾನೆ. ಮೃತನಿಗೆ 1.25 ಎಕರೆ ತರಿ, 2 ಎಕರೆ ಬಾಗಾಯ್ತು ಜಮೀನಿದ್ದು, ಕೃಷಿಗಾಗಿ ಧರ್ಮಸ್ಥಳ ಸಂಘ, ನಗರ ನೀಲಕಂಠೇಶ್ವರ ಸಹಕಾರ ಸಂಘ, ಜಯನಗರ ಉಜ್ಜೀವನ್ ಫೈನಾನ್ಸ್, ರಿಪ್ಪನ್ ಪೇಟೆಯ ಚೈತನ್ಯ ಗ್ರಾಮೀಣ ಬ್ಯಾಂಕ್, ಮೂಕಾಂಬಿಕ ಸ್ವಸಹಾಯ ಸಂಘ ಸೇರಿದಂತೆ, ತನ್ನ ಹಾಗೂ ಪತ್ನಿ ಹೆಸರಲ್ಲಿ ೂ 6.5 ಲಕ್ಷ ಹಣ ಸಾಲ ಪಡೆದಿದ್ದಾನೆ.
ಕೃಷಿಯಲ್ಲಿ ಹೆಚ್ಚಿನ ಆದಾಯ ಬಾರದ ಕಾರಣ ಸಾಲಬಾಧೆಗೆ ತುತ್ತಾಗಿ ಕೊನೆಗೆ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನ ಪುತ್ರ ಅಮಿತ್ ನೀಡಿದ ದೂರಿನ ಮೇರೆಗೆ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶಿವಾನಂದ ಕೋಳಿ ಪ್ರಕರಣ ದಾಖಲಿಸಿದ್ದಾರೆ