ಮಲೆನಾಡಲ್ಲಿ ಪರಿಷತ್ ಮತ ಸಮರ!
– ಶಿವಮೊಗ್ಗ, ತೀರ್ಥಹಳ್ಳಿ, ಹೊಸ ನಗರ ಸೇರಿ ಶಿವಮೊಗ್ಗ ಜಿಲ್ಲೆಯಲ್ಲಿ ಮತದಾನ ಜೋರು
– ಶಿವಮೊಗ್ಗದಲ್ಲಿ ಸರ್ಜಿ ದಂಪತಿ ಸಮೇತ ಮತದಾನ
– ತೀರ್ಥಹಳ್ಳಿಯಲ್ಲಿ ಬಿರುಸಿನ ಮತದಾನ ಆರಗ, ಕಿಮ್ಮನೆ ಮಂಜುನಾಥ್ ಗೌಡ ಮತ
– ಚಿಕ್ಕಮಗಳೂರಲ್ಲಿ ಸಿಟಿ ರವಿ ಸೇರಿ ಅನೇಕರ ಮತದಾನ
NAMMUR EXPRESS NEWS
ಮಲೆನಾಡು: ನೈರುತ್ಯ ಪದವೀಧರ ಮತ್ತು ಶಿಕ್ಷಕ ಕ್ಷೇತ್ರದ ಮತದಾನ ಮಲೆನಾಡಲ್ಲಿ ಶಾಂತಿಯುತವಾಗಿ ನಡೆಯಿತು. ತೀರ್ಥಹಳ್ಳಿಯಲ್ಲಿ ನೈರುತ್ಯ ಪದವೀಧರ ಹಾಗೂ ಶಿಕ್ಷಕ ಕ್ಷೇತ್ರದಲ್ಲಿ ಚುನಾವಣೆಯ ಮತದಾನ ಭರ್ಜರಿಯಾಗಿ ನಡೆಯಿತು. ಬೆಳಗ್ಗೆಯಿಂದ ಸಂಜೆವರೆಗೂ ಚುನಾವಣೆ ನಡೆದಿದ್ದು ಯುವಜನತೆ ಖುಷಿಯಿಂದ ಭಾಗಿಯಾದರು . ಇನ್ನೂ ಚುನಾವಣೆ ಮತದಾನದಲ್ಲಿ ಕಿಮ್ಮನೆ ರತ್ನಾಕರ್, ಆರಗ ಜ್ಞಾನೇಂದ್ರ, ಮಂಜುನಾಥ್ ಗೌಡ ಕೂಡ ತಮ್ಮ ಅಭ್ಯರ್ಥಿಗಳ ಪರ ಮತವನ್ನು ಕೇಳಿದರು.
ಕಿಮ್ಮನೆ ರತ್ನಾಕರ್ ಮಾತನಾಡಿ, ಮೊದಲ ಪ್ರಾಶಸ್ತ ಮತದಾನದಲ್ಲೇ ಕಾಂಗ್ರೆಸ್ ಪಕ್ಷದ ಎರಡು ಅಭ್ಯರ್ಥಿಗಳು ಗೆಲುವನ್ನ ಸಾಧಿಸುತ್ತಾರೆ ಎಂದು ವಿಶ್ವಾಸವನ್ನ ವ್ಯಕ್ತಪಡಿಸಿದರು. ಆರಗ ಜ್ಞಾನೇಂದ್ರ ಅವರು ಮಾತನಾಡಿ ಬಿಜೆಪಿ ರಾಜ್ಯ ಹಾಗೂ ದೇಶದಲ್ಲಿ ಮತ್ತೆ ತನ್ನ ಗೆಲುವನ್ನ ದಾಖಲಿಸಲಿದೆ. ಈಗಾಗಲೇ ದೇಶದಲ್ಲಿ ಸಮೀಕ್ಷೆಗಳ ಪ್ರಕಾರ ಮೋದಿ ಸರ್ಕಾರ ಗೆಲುವು ಸಾಧಿಸಿದೆ. ಅದೇ ರೀತಿಯಲ್ಲಿ ವಿಧಾನ ಪರಿಷತ್ ಚುನಾವಣೆಯಲ್ಲೂ ಕೂಡ ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳಾದ ಡಾ. ಧನಂಜಯ್ ಸರ್ಜಿ ಹಾಗೂ ಬೋಜೇಗೌಡ ಗೆಲುವನ್ನ ಸಾಧಿಸಲಿದ್ದಾರೆ ಎಂದರು. ಹೊಸನಗರ, ನಗರ ಸೇರಿ ಶಿವಮೊಗ್ಗ ಜಿಲ್ಲೆಯಲ್ಲಿ ಮತದಾನ ನಡೆಯಿತು.
ಗೆಲುವು ನಮ್ಮದೇ ಎಂದ ಸರ್ಜಿ!
ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಅವರು ಪತ್ನಿ ನಮಿತಾ ಸರ್ಜಿ ಅವರೊಂದಿಗೆ ತೆರಳಿ ಸೋಮವಾರ ಬೆಳಗ್ಗೆ ಶಿವಮೊಗ್ಗ ವಿನೋಬ ನಗರದ ದೇಶೀಯ ವಿದ್ಯಾಶಾಲಾ ಹೈಸ್ಕೂಲ್ ವಿಭಾಗದ ಮತಕೇಂದ್ರದಲ್ಲಿ ಮತ ಚಲಾಯಿಸಿದರು. ಮತ ಚಲಾಯಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದಲ್ಲಿ ತಾವು ಮತ್ತು ಮೈತ್ರಿ ಅಭ್ಯರ್ಥಿ ಎಸ್.ಎಲ್.ಭೋಜೇಗೌಡರ ಗೆಲುವು ಖಚಿತ ಎಂದು ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ವಿಶ್ವಾಸ ವ್ಯಕ್ತಪಡಿಸಿದರು ಅಷ್ಟೇ ಅಲ್ಲದೆ ಎದುರಾಳಿಗಳಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ ಎಂದು ಹೇಳಿದರು.








